ಕೋವಿಡ್ ಸಂತ್ರಸ್ತರಿಗೆ ₹ 4 ಲಕ್ಷ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ

ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ, ಇದು ಕೇವಲ ನೈಸರ್ಗಿಕ ವಿಪತ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ.

Written by - Zee Kannada News Desk | Last Updated : Jun 20, 2021, 04:50 PM IST
  • ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ, ಇದು ಕೇವಲ ನೈಸರ್ಗಿಕ ವಿಪತ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ.
 ಕೋವಿಡ್ ಸಂತ್ರಸ್ತರಿಗೆ ₹ 4 ಲಕ್ಷ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ, ಇದು ಕೇವಲ ನೈಸರ್ಗಿಕ ವಿಪತ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Covid-19 3rd Wave In India: ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ ವೈರಸ್ ಮೂರನೇ ಅಲೆ - Dr. Randeep Guleria

ನಿನ್ನೆ ತಡರಾತ್ರಿ ಸಲ್ಲಿಸಿದ 183 ಪುಟಗಳ ಅಫಿಡವಿಟ್‌ನಲ್ಲಿ, ಕೋವಿಡ್‌ (Coronavirus)ಗೆ ಅವರು ಪರಿಹಾರವನ್ನು ನೀಡಿದರೆ, ಇತರ ಕಾಯಿಲೆಗಳಿಗೆ ಅದನ್ನು ನಿರಾಕರಿಸುವುದು "ಅನ್ಯಾಯ" ಎಂದು ಕೇಂದ್ರವು ತಿಳಿಸಿದೆ.

ಮಾರಣಾಂತಿಕ ಕಾಯಿಲೆಯು 3.85 ಲಕ್ಷಕ್ಕೂ ಹೆಚ್ಚು ಸಾವಿಗೆ ಕಾರಣವಾಗಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ತೀವ್ರ ಆರ್ಥಿಕ ಒತ್ತಡದಿಂದ ತತ್ತರಿಸಿರುವ ರಾಜ್ಯಗಳು ಎಲ್ಲರಿಗೂ ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದೆ.ಸಂತ್ರಸ್ಥರಿಗೆ 4 ಲಕ್ಷ ನೀಡಬೇಕೆಂದು ಮನವಿ ಮಾಡಿದ ಬೆನ್ನಲ್ಲೇ ಈಗ ಕೋವಿಡ್ ಪರಿಹಾರ ಮತ್ತು ಮರಣ ಪ್ರಮಾಣಪತ್ರಗಳ ವಿಚಾರವಾಗಿ ಕೇಂದ್ರ ಸರ್ಕಾರವು ತನ್ನ ನೀತಿಯನ್ನು ತಿಳಿಸಬೇಕೆಂದು ಸುಪ್ರೀಂಕೋರ್ಟ್ ಕೇಳಿದೆ. ಈ ಬೆನ್ನಲ್ಲೇ ಈಗ ಸರ್ಕಾರದ ಪ್ರತಿಕ್ರಿಯೆ ಬಂದಿದೆ.

ಇದನ್ನೂ ಓದಿ: COVID-19 Alert: ಈಶಾನ್ಯದ ಎರಡು ರಾಜ್ಯಗಳಲ್ಲಿ ಡೆಲ್ಟಾ ರೂಪಾಂತರ ವೈರಸ್ ಪತ್ತೆ

ಭೂಕಂಪ ಅಥವಾ ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಗೆ ಮಾತ್ರ ಪರಿಹಾರ ಅನ್ವಯಿಸುತ್ತದೆ ಎಂದು ವಿಪತ್ತು ನಿರ್ವಹಣಾ ಕಾನೂನು ಹೇಳುತ್ತದೆ ಎಂದು ವಿವರಿಸಿದ ಸರ್ಕಾರ, ಸಾಂಕ್ರಾಮಿಕ ರೋಗದ ಬೃಹತ್ ಪ್ರಮಾಣದ ಕಾರಣದಿಂದಾಗಿ ಅದನ್ನು ಕೋವಿಡ್‌ಗೆ ಅನ್ವಯಿಸುವುದು ಸೂಕ್ತವಲ್ಲ ಎಂದು ಹೇಳಿದೆ.ಹೆಚ್ಚಿದ ಆರೋಗ್ಯ ವೆಚ್ಚಗಳು ಮತ್ತು ಕಡಿಮೆ ತೆರಿಗೆ ಆದಾಯದಿಂದಾಗಿ, ಲಕ್ಷಾಂತರ ಕೋವಿಡ್ ಸಂತ್ರಸ್ತರಿಗೆ ಪರಿಹಾರವನ್ನು ಪಾವತಿಸಲು ರಾಜ್ಯಗಳಿಗೆ ಸಾಧ್ಯವಿಲ್ಲ ಎಂದು ಕೇಂದ್ರವು ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ

 ಮಧ್ಯಪ್ರದೇಶದಂತಹ ರಾಜ್ಯಗಳು ಈಗಾಗಲೇ ಕೋವಿಡ್ ನಿಂದಾಗಿ ಸಾವನ್ನಪ್ಪಿದವರಿಗೆ ₹ 1 ಲಕ್ಷ ಪರಿಹಾರವನ್ನು ಘೋಷಿಸಿವೆ. ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್ ಸಾವು ಸಂಭವಿಸಿದರೆ, ಕುಟುಂಬಗಳಿಗೆ ₹ 5 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ದೆಹಲಿಯೂ ಘೋಷಿಸಿತು.

ಇದನ್ನೂ ಓದಿ-Covid-19 Third Wave In India - ಬರುವ ಅಕ್ಟೋಬರ್ ನಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊವಿಡ್-19 ಮೂರನೇ ಅಲೆ! ವಿಶ್ವಾದ್ಯಂತದ ಸುಮಾರು 40 ತಜ್ಞರು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News