Big Relief: ಕುಟುಂಬದಲ್ಲಿ ಯಾರಾದರೂ ಕೊರೊನಾ ಸೊಂಕಿತರಾದರ ಎಷ್ಟು ದಿನ Special Casual Leave ಸಿಗಲಿದೆ ಗೊತ್ತಾ?

Special Casual Leave - ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರ ಕುಟುಂಬದಲ್ಲಿ ಯಾರಾದರೂ ಕೊರೊನಾ ಸೋಂಕಿಗೆ ಗುರಿಯಾದರೆ ಅವರಿಗೆ 15 ದಿನಗಳ ವಿಶೇಷ ರಜೆ ಸಿಗಲಿದೆ (Special Casual Leave). ಇದರ ಬಳಿಕವೂ ಕೂಡ ಒಂದು ವೇಳೆ ಹೆಚ್ಚಿನ ರಜೆಯ ಅಗತ್ಯ ಬಿದ್ದರೆ ಮತ್ತೆ ರಜೆ ವಿಸ್ತರಿಸಲಾಗುವುದು.

Written by - Nitin Tabib | Last Updated : Jun 9, 2021, 07:36 PM IST
  • ಸರ್ಕಾರಿ ನೌಕರರ ಕುಟುಂಬ ಸದಸ್ಯರು ಕೊವಿಡ್ ಸೋಂಕಿಗೆ ಗುರಿಯಾದರೆ 15 ದಿನಗಳ ವಿಶೇಷ ರಜೆ.
  • ಸರ್ಕಾರಿ ನೌಕರರು ಸೋಂಕಿಗೆ ಗುರಿಯಾದರೆ 20 ದಿನಗಳ ವಿಶೇಷ ರಜೆ ನೀಡಲಾಗುವುದು.
  • ಅಗತ್ಯ ಬಿದ್ದರೆ ಸೂಕ್ತ ದಾಖಲೆ ಒದಗಿಸಿ ರಜೆಯನ್ನು ವಿಸ್ತರಿಸಿಕೊಳ್ಳಬಹುದು.
Big Relief: ಕುಟುಂಬದಲ್ಲಿ ಯಾರಾದರೂ ಕೊರೊನಾ ಸೊಂಕಿತರಾದರ ಎಷ್ಟು ದಿನ Special Casual Leave ಸಿಗಲಿದೆ ಗೊತ್ತಾ? title=
Special Casual Leave(File Photo)

ನವದೆಹಲಿ: Special Casual Leave - ಕೇಂದ್ರ ಸರ್ಕಾರದ ತನ್ನ ಎಲ್ಲಾ ನೌಕರರಿಗೆ ಅವರ ತಂದೆ-ತಾಯಿ (Perents Test Covid Positive)ಅಥವಾ ಕುಟುಂಬದ ಯಾವುದೇ ಸದಸ್ಯ (Dependant) Covid-19ನಿಂದ ಸೋಂಕಿತರಾದ ಸ್ಥಿತಿಯಲ್ಲಿ 15 ದಿನಗಳ ವಿಶೇಷ ರಜೆ (SCL) ನೀಡಲಾಗುವುದು ಎಂದು ಹೇಳಿದೆ. ಕೇಂದ್ರ ಕಾರ್ಮಿಕ ಸಚಿವಾಲಯ (Personnel Ministry)ಈ ಸಂಬಂಧ ಆದೇಶ ಹೊರಡಿಸಿದೆ.

SCL ಮುಗಿದ ಬಳಿಕವೂ ಕೂಡ ರಜೆ ವಿಸ್ತರಿಸಲಾಗುವುದು
ಒಂದು ವೇಳೆ ನೌಕರರಿಗೆ ನೀಡಲಾಗಿರುವ ಈ 15 ದಿನಗಳ ವಿಶೇಷ ರಜೆ ಸಾಕಾಗದಿದ್ದರೆ ಅಥವಾ ಕುಟುಂಬದ ಇತರ ಯಾವುದೇ ಸದಸ್ಯ ಕೂಡ ಸೊಂಕಿತರಾಗಿ ಆಸ್ಪತ್ರೆಗೆ ದಾಖಲಾದರೆ. ಅವರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವವರೆಗೆ ಅವರು ತಮ್ಮ ರಜೆಯನ್ನು ಹೆಚ್ಚಿಸಿಕೊಳ್ಳಬಹುದು. ಇನ್ನೊಂದೆಡೆ ಸರ್ಕಾರಿ ನೌಕರರ ಕುರಿತು ತೆಗೆದುಕೊಳ್ಳಲಾಗಿರುವ ಮೊತ್ತೊಂದು ನಿರ್ಣಯದಲ್ಲಿ, ಕೊರೊನಾ ಎರಡನೇ ಅಲೆಯ (Coronavirus Second Wave) ಹೊಡೆತಕ್ಕೆ ಸಿಲುಕಿರುವ ಮತ್ತು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಸಿಬ್ಬಂದಿಗಳಿಗೆ ಸಂಪೂರ್ಣ ವೇತನ ಪಾವತಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಎಲ್ಲ ಸಚಿವಾಳಯಗಳಿದೆ ಆದೇಶ ಜಾರಿ
ಈ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ 2021 ರ ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಪೂರ್ಣ ವೇತನವನ್ನು ನೀಡಲು ನಿರ್ಧರಿಸಲಾಗಿದೆ. Lockdown ಕಾರಣ, ಗುತ್ತಿಗೆ ನೌಕರರು ಮನೆಗಳಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೇಂದ್ರ ಸರ್ಕಾರದ ಆದೇಶದ ಪ್ರಕಾರ, ಕರೋನಾದ ಎರಡನೇ ಅಲೆಯ ಸಮಯದಲ್ಲಿ ಮನೆಗಳಲ್ಲಿರುವ ಅಂತಹ ಎಲ್ಲ ಗುತ್ತಿಗೆ ನೌಕರರನ್ನು 'ಕರ್ತವ್ಯದಲ್ಲಿ (On Duty)' ಎಂದು ಪರಿಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಚಿವಾಲಯಗಳಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಒಂದು ವೇಳೆ ನೌಕರರು ಸೋಂಕಿತರಾಗಿದ್ದಾರೆ 20 ದಿನಗಳ ರಜೆ
ಕೋವಿಡ್ ಸಾಂಕ್ರಾಮಿಕ (Coronavirus Pandemic) ಸಮಯದಲ್ಲಿ ಚಿಕಿತ್ಸೆ, ಆಸ್ಪತ್ರೆಗೆ ದಾಖಲು, ಪ್ರತ್ಯೇಕತೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸಚಿವಾಲಯ ವಿಸ್ತೃತವಾದ  ಆದೇಶ ಹೊರಡಿಸಿದೆ. 'ಸರ್ಕಾರಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನೂ  ಕೂಡ ಗಮನದಲ್ಲಿರಿಸಿಕೊಳ್ಳಲಾಗಿದೆ' ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅವರಿಗೆ 20 ದಿನಗಳವರೆಗೆ ರಜೆ ನೀಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ-Contractual Employees: ಈ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಭಾರಿ ಉಡುಗೊರೆ

20 ದಿನಗಳಿಗಿಂತ ಹೆಚ್ಚು ರಜೆ ಬೇಕಿದ್ದರೂ ಕೂಡ ಟೆನ್ಶನ್ ಬಿಡಿ
ವಿವಿಧ ಸಚಿವಾಲಯಗಳಿಗೆ ಜಾರಿಗೊಳಿಸಲಾಗಿರುವ ಆದೇಶದಲ್ಲಿ ' ಒಂದು ವೇಳೆ ಸರ್ಕಾರಿ ನೌಕರರು ಕೊವಿಡ್ (Covid-19) ಸೋಂಕಿಗೆ ಗುರಿಯಾದ 20 ದಿನಗಳ ಬಳಿಕವೂ ಕೂಡ ಆಸ್ಪತ್ರೆಯಲ್ಲಿ ಉಳಿಯಬೇಕಾದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ ಅವರಿಗೆ ಮತ್ತೆ ರಜೆ ಸಿಗಲಿದೆ' ಎನ್ನಲಾಗಿದೆ. ಈ ಆದೇಶದ ಪ್ರಕಾರ ಒಂದು ವೇಳೆ ಸರ್ಕಾರಿ ನೌಕರರ ತಂದೆ-ತಾಯಿ (SCL For Government Employees) ಅಥವಾ ಯಾವುದೇ ಅವಲಂಭಿತ ಕುಟುಂಬ ಸದಸ್ಯರು ಒಂದು ವೇಳೆ ಕೊವಿಡ್-19 ಸೋಂಕಿಗೆ ಗುರಿಯಾದರೆ ಅವರಿಗೆ 15 ದಿನಗಳ SCL ಸಿಗಲಿದೆ.

ಇದನ್ನೂ ಓದಿ-Post Office: ಪೋಸ್ಟ್ ಆಫೀಸ್‌ನೊಂದಿಗೆ ಕೇವಲ ₹5000 ಹೂಡಿಕೆ ಮಾಡಿ ಬುಸಿನೆಸ್ಸ್ ಪ್ರಾರಂಭಿಸಿ

ಮನೆಯಲ್ಲಿಯೇ ಇದ್ದರೆ 'ವರ್ಕ್ ಫ್ರಮ್ ಹೊಮ್' ಎಂದು ಭಾವಿಸಲಾಗುವುದು
ಆದೇಶದ ಪ್ರಕಾರ ಒಂದು ವೇಳೆ ಯಾವುದೇ ಸರ್ಕಾರಿ ನೌಕರ ಕೊವಿಡ್ -19 ಸೋಂಕಿತರ ನೇರ ಸಂಪರ್ಕಕ್ಕೆ ಬಂದರೆ ಹಾಗೂ ಅವರು ಮನೆಯಲ್ಲಿಯೇ ಐಸೊಲೆಟ್ ಆದರೆ, 'ಅವರನ್ನು 7 ದಿನಗಳ ಅವಧಿಗೆ ಡ್ಯೂಟಿ/ವರ್ಕ್ ಫ್ರಮ್ ಹೋಮ್ (Work From Home) ಎಂದು ಪರಿಗಣಿಸಲಾಗುವುದು' ಎನ್ನಲಾಗಿದೆ.

ಇದನ್ನೂ ಓದಿ-Viral News:ಏಕಕಾಲಕ್ಕೆ 10 ಮಕ್ಕಳನ್ನು ಹೆತ್ತ ಮಹಾತಾಯಿ, ಈ ದಾಖಲೆ ನಿರ್ಮಾಣಗೊಂಡಿದ್ದು ಎಲ್ಲಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News