ಶೀಘ್ರದಲ್ಲೇ ಎಸ್ಪಿ-ಬಿಎಸ್ಪಿ ಮೈತ್ರಿ ಘೋಷಣೆ: ಅಖಿಲೇಶ್ ಯಾದವ್

ಒಂದು ವಾರದಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಬಗ್ಗೆ ಪ್ರಕಟಿಸಲಾಗುವುದು ಎಂದು ಅಖಿಲೇಶ್ ಹೇಳಿದರು.

Last Updated : Jan 6, 2019, 05:00 PM IST
ಶೀಘ್ರದಲ್ಲೇ ಎಸ್ಪಿ-ಬಿಎಸ್ಪಿ ಮೈತ್ರಿ ಘೋಷಣೆ: ಅಖಿಲೇಶ್ ಯಾದವ್ title=

ಲಕ್ನೌ: ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಶೀಘ್ರದಲ್ಲಿಯೇ ಮೈತ್ರಿ ಪ್ರಕಟಿಸಲಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯನ್ನು ಯಾವಾಗ ಪ್ರಕಟಿಸುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಒಂದು ವಾರದಲ್ಲಿ ಮೈತ್ರಿ ಬಗ್ಗೆ ಪ್ರಕಟಿಸಲಾಗುವುದು ಎಂದು ಹೇಳಿದರು.

"ಬಿಜೆಪಿ ಎಲ್ಲ ರೀತಿಯ ಗಣಿತ ಪಾಠ ಕಲಿಸಿದೆ. ಆದರೆ ಬಿಜೆಪಿ ಲೆಕ್ಕಾಚಾರವನ್ನು ಸರಿಪಡಿಸಲು ದೇಶದಲ್ಲಿ ಎಷ್ಟು ಮೈತ್ರಿಗಳಾಗಲಿವೆ ಎಂಬುದು ಅವರಿಗೇ ತಿಳಿದಿಲ್ಲ. ಬಹುಶಃ ಎಸ್ಪಿ-ಬಿಎಸ್ಪಿ ಕೂಡ ಬಿಜೆಪಿ ಲೆಕ್ಕಾಚಾರ ಬದಲಾಯಿಸುವ ಹಾದಿಯಲ್ಲಿ ನಡೆಯಲಿದೆ" ಎಂದರು. ಇನ್ನು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಬಗ್ಗೆ ಉತ್ತರಿಸಿದ ಅಖಿಲೇಶ್, ಎರಡೂ ಪಕ್ಷಗಳೂ ಸೇರಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ, ಬೇಡವೇ? ಎಂಬುದನ್ನು ನಿರ್ಧರಿಸುವುದಾಗಿ ಹೇಳಿದರು.

ಆದರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮೈತ್ರಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಇಚ್ಚಿಸಲಿಲ್ಲ. ಆದರೆ, ಉತ್ತರಪ್ರದೇಶ ಮತ್ತು ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ತಮಗೆ ನೀಡಿದ ಭರವಸೆಗಳು ಪೂರೈಕೆಯಾಗಿಲ್ಲ, ಅಭಿವೃದ್ಧಿ ತಟಸ್ಥವಾಗಿದೆ ಎಂದು ದೇಶದ ಜನತೆಗೆ ಅನಿಸಿರುವ ಸಂದರ್ಭದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅಖಿಲೇಶ್ ಹೇಳಿದರು.

Trending News