ಬಿಎಸ್​ಪಿ-ಎಸ್​ಪಿ ಮೈತ್ರಿ ಸೂತ್ರ: ಮೈತ್ರಿಯಿಂದ ಕಾಂಗ್ರೆಸ್ ಔಟ್? ಆದ್ರೆ ಈ ರೀತಿ ನೀಡುತ್ತೆ ಸಹಕಾರ!

ಮೂಲಗಳ ಪ್ರಕಾರ, ಬಿಎಸ್​ಪಿ-ಎಸ್​ಪಿ ನಡುವಿನ ಮೈತ್ರಿ ಸೂತ್ರ ಕಳೆದ ವರ್ಷ ನವಂಬರ್ ನಲ್ಲಿ ಸಿದ್ಧವಾಗಿದೆ.

Last Updated : Jan 5, 2019, 10:40 AM IST
ಬಿಎಸ್​ಪಿ-ಎಸ್​ಪಿ ಮೈತ್ರಿ ಸೂತ್ರ: ಮೈತ್ರಿಯಿಂದ ಕಾಂಗ್ರೆಸ್ ಔಟ್? ಆದ್ರೆ ಈ ರೀತಿ ನೀಡುತ್ತೆ ಸಹಕಾರ! title=

ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ನಡುವೆ ಸೀಟು ಹಂಚಿಕೆ ಸೂತ್ರ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆಯಾಗಿಲ್ಲ. ಆದರೆ ಸದ್ಯದಲ್ಲೇ ಈ ಎರಡೂ ಪಕ್ಷಗಳು ಈ ಬಗ್ಗೆ ಘೋಷಿಸುವ ಸಾಧ್ಯತೆಯಿದೆ. 

ಮಾಯಾವತಿ ಮತ್ತು ಅಖಿಲೇಶ್ ಯಾದವ್ ನಡುವೆ ಶುಕ್ರವಾರ ನಡೆದ ಸಭೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಹೊಸ ಸೂತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಬಿಎಸ್​ಪಿ-ಎಸ್​ಪಿ ಯುಪಿ ಯಲ್ಲಿ 37-37 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಇತರ ಸ್ಥಾನಗಳನ್ನು ಕಾಂಗ್ರೆಸ್, ರಾಷ್ಟ್ರೀಯ ಲೋಕ ದಳ ಮತ್ತು ಇತರ ಸಣ್ಣ ಪಕ್ಷಗಳಿಗೆ ಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ಶುಕ್ರವಾರ ನವದೆಹಲಿಯಲ್ಲಿ ಸಭೆ ನಡೆಸಿದರು. ಉಭಯ ಪಕ್ಷದ ನಾಯಕರ ಮಾತುಕತೆ ಫಲಪ್ರದವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಭಯ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದಾರೆ. 

ಮೂಲಗಳ ಪ್ರಕಾರ, ಕಾಂಗ್ರೆಸ್ ಹಿರಿಯ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರಗಳಾದ ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರಗಳನ್ನು ಕಾಂಗ್ರೆಸ್ ಗೆ ಬಿಟ್ಟು ಕೊಟ್ಟಿರುವ ಮಹಾ ಮೈತ್ರಿ ಪಕ್ಷಗಳು ಆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಆದರೆ ಕಾಂಗ್ರೆಸ್ ಈ ಒಕ್ಕೂಟದ ಭಾಗವಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಹಲವು ಸ್ಥಳಗಳಲ್ಲಿ ರಾಹುಲ್ ಗಾಂಧಿಯವರನ್ನು ಈಗಾಗಲೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಅಖಿಲೇಶ್-ಮಾಯಾವತಿಗೆ ಈ ಬಗ್ಗೆ ಅಸಮಾಧಾನ ಇದ್ದಂತಿದ್ದು, ಹಾಗಾಗಿಯೇ ಬಿಎಸ್​ಪಿ-ಎಸ್​ಪಿ ಮೈತ್ರಿಯಲ್ಲಿ ಕಾಂಗ್ರೆಸ್ ಅನ್ನು ಸೇರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ಇತ್ತೀಚಿಗೆ ನಡೆದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತಿಸ್ಗಢ ಚುನಾವಣೆಗಳಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ಪಕ್ಷಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.

ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ಬಿಎಸ್​ಪಿ-ಎಸ್​ಪಿ ತಮ್ಮ ಮತ ಬ್ಯಾಂಕ್ ಅನ್ನು ಯಾವುದೇ ರೀತಿಯಲ್ಲೂ ಕಾಂಗ್ರೆಸ್ ಗೆ ಶಿಫ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಏಕೆಂದರೆ ಈಗಿನ ಬಿಎಸ್​ಪಿ-ಎಸ್​ಪಿ ಮತ ಬ್ಯಾಂಕ್ 30 ವರ್ಷಗಳ ಹಿಂದೆ ಕಾಂಗ್ರೆಸ್ ಮತ ಬ್ಯಾಂಕ್ ಆಗಿತ್ತು. ಮಾಯಾವತಿಯ ದಲಿತ ಮತ ಬ್ಯಾಂಕ್ ಮತ್ತು ಅಖಿಲೇಶ್ ಯಾದವ್-ಮುಸ್ಲಿಂ ಮತ ಬ್ಯಾಂಕ್ ಹೊಂದಿದ್ದಾರೆ. ಮೂಲಗಳ ಪ್ರಕಾರ, ಮಹಾಮೈತ್ರಿಯ ಆರಂಭಿಕ ಚರ್ಚೆಯಲ್ಲಿ ಬಿಎಸ್​ಪಿ-ಎಸ್​ಪಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಗೆ 10 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿತ್ತು. ಆದರೆ ಕಾಂಗ್ರೆಸ್ 25-30 ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ.
 

Trending News