10 ₹ ನೂತನ ನೋಟು ಬಿಡುಗಡೆ ಮಾಡಲಿರುವ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 10 ರೂಪಾಯಿಗಳ ನೂತನ ನೋಟನ್ನು ಬಿಡುಗಡೆ ಮಾಡಲಿದೆ. ನೂತನ 10 ರೂ. ನೋಟಿನಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಹಸ್ತಾಕ್ಷರವಿರಲಿದೆ. ಮಹಾತ್ಮ ಗಾಂಧಿ (ಹೊಸ) ಸರಣಿಯಲ್ಲಿ ರಿಸರ್ವ್ ಬ್ಯಾಂಕ್ 10 ರೂಪಾಯಿ ಹೊಸ ನೋಟನ್ನು ಪ್ರಕಟಿಸುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

Last Updated : May 21, 2019, 10:55 AM IST
10 ₹ ನೂತನ ನೋಟು ಬಿಡುಗಡೆ ಮಾಡಲಿರುವ ಆರ್‌ಬಿಐ title=

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 10 ರೂಪಾಯಿಗಳ ನೂತನ ನೋಟನ್ನು ಬಿಡುಗಡೆ ಮಾಡಲಿದೆ. ನೂತನ 10 ರೂ. ನೋಟಿನಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಹಸ್ತಾಕ್ಷರವಿರಲಿದೆ. ರಿಸರ್ವ್ ಬ್ಯಾಂಕ್ ಮಹಾತ್ಮ ಗಾಂಧಿ (ಹೊಸ) ಸರಣಿಯಲ್ಲಿ 10 ರೂಪಾಯಿ ಹೊಸ ನೋಟನ್ನು ಪ್ರಕಟಿಸುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. 10 ರೂಪಾಯಿಯ ಹಳೆಯ ನೋಟುಗಳು ಕೂಡ ಚಾಲನೆಯಲ್ಲಿರಲಿವೆ ಎಂಬುದು ಗಮನಾರ್ಹವಾಗಿದೆ.

ನೂತನ ಗವರ್ನರ್ ಶಕ್ತಿಕಾಂತ್ ದಾಸ್ ಸಹಿ ಇರುವ ಮಹಾತ್ಮ ಗಾಂಧಿ ನ್ಯೂ ಸೀರೀಸ್ ನಲ್ಲಿ 200 ಮತ್ತು 500 ರೂಪಾಯಿಗಳ ಹೊಸ ನೋಟುಗಳು ಕೂಡ ರಿಸರ್ವ್ ಬ್ಯಾಂಕಿನಿಂದ ಬಿಡುಗಡೆಯಾಗಿದೆ. ಅದೇ ಸಮಯದಲ್ಲಿ,  ಆರ್‌ಬಿಐನಿಂದ ನೂತನ 20  ರೂ. ಕೂಡ ಬಿಡುಗಡೆಯಾಗಿದ್ದು, 20  ರೂ.ನ ಹಳೆಯ ನೋಟುಗಳು ಕೂಡ ಚಾಲನೆಯಲ್ಲಿರಲಿವೆ ಎಂದಿದ್ದಾರೆ.

ಆರ್‌ಬಿಐ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, 20 ರೂಪಾಯಿಯನೋಟು ಹಳದಿ ಬಣ್ಣದ್ದಾಗಿರುತ್ತದೆ. ಈ ನೋಟು ಸುಮಾರು 29ಮಿಮೀ ಉದ್ದ ಮತ್ತು 63 ಮಿಮೀ ಅಗಲವಿರಲಿದೆ ಎನ್ನಲಾಗಿದೆ. ನೋಟಿನ ಹಿಂಭಾಗದಲ್ಲಿ ಎಲ್ಲೋರದ ಗುಹೆಗಳನ್ನು ಮುದ್ರಿಸಲಾಗಿದ್ದು, ಇದು ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. 

Trending News