ಶೀಘ್ರವೇ ಮೊಬೈಲ್ ಬಳಕೆದಾರರಿಗೆ ಈ ಸಂತಸದ ಸುದ್ದಿ ನೀಡಲಿದೆ TRAI

ಕಳೆದ 8 ವರ್ಷಗಳಿಂದ ಭಾರತದಲ್ಲಿ ನೀವು ದಿನವೊಂದಕ್ಕೆ ಕೇವಲ 100 SMSಗಳನ್ನು ಮಾತ್ರ ಕಳುಹಿಸಬೇಕು ಎಂಬ ಲಿಮಿಟ್ ಜಾರಿಯಲ್ಲಿತ್ತು. ಆದರೆ, ಇದೀಗ ಈ ನಿಯಮದ ಅವಶ್ಯಕತೆ ಇಲ್ಲ ಎಂಬುದು ಇದೀಗ TRAIಗೆ ಮನವರಿಕೆಯಾಗಿದೆ.

Last Updated : Feb 20, 2020, 02:33 PM IST
ಶೀಘ್ರವೇ ಮೊಬೈಲ್ ಬಳಕೆದಾರರಿಗೆ ಈ ಸಂತಸದ ಸುದ್ದಿ ನೀಡಲಿದೆ TRAI title=

ನವದೆಹಲಿ:ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಅಂದರೆ TRAI, ಮೊಬೈಲ್ ಬಳಕೆದಾರರಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಶೀಘ್ರದಲ್ಲಿಯೇ TRAI ಪ್ರತಿ ದಿನ ಕೇವಲ 100 SMSಗಳನ್ನು ಮಾತ್ರ ಕಳುಹಿಸಬೇಕು ಎಂಬ ಲಿಮಿಟ್ ಅನ್ನು ತೆರವುಗೊಳಿಸಲು ನಿರ್ಧರಿಸಿದೆ. ಸದ್ಯ ಬಳಕೆದಾರರು ದಿನವೊಂದಕ್ಕೆ ಕೇವಲ 100 SMSಗಳನ್ನು ಮಾತ್ರ ಕಳುಹಿಸಬಹುದಾಗಿದ್ದು, ಪ್ರತಿ ಸಂದೇಶಕ್ಕೆ 50ಪೈಸೆ ನೀಡಬೇಕು ಎಂಬ ನಿಯಮವಿದೆ. ಇನ್ಮುಂದೆ ಈ ನಿಯಮದ ಯಾವುದೇ ಅಗತ್ಯತೆ ಇಲ್ಲ ಎಂಬುದು ಇದೀಗ TRAIಗೆ ಮನವರಿಕೆಯಾಗಿದೆ.

ಇಂದಿನ ಕಾಲದಲ್ಲಿ ಬಹುತೇಕ ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರಿಗೆ ದಿನವೊಂದಕ್ಕೆ 100 SMS ಉಚಿತ ಎಂಬ ಆಫರ್ ನೀಡುತ್ತಿವೆ. TRAI ಆದೇಶದ ಮೆರೆಗೆಯೇ ಟೆಲಿಕಾಂ ಕಂಪನಿಗಳು ತಮ್ಮ ಉಚಿತ SMS ಮಿತಿಯನ್ನು ದಿನವೊಂದಕ್ಕೆ ಕೇವಲ 100ಕ್ಕೆ ಸೀಮಿತಗೊಳಿಸಿವೆ. 100 ಉಚಿತ SMS ಬಳಿಕ ಗ್ರಾಹಕರು ಪ್ರತಿ SMSಗೆ 50 ಪೈಸೆ ಹಣ ಖರ್ಚು ಮಾಡಬೇಕು. ಮುಂಬರುವ 15 ದಿನಗಳಲ್ಲಿ TRAI ತನ್ನ ಈ ಆದೇಶವನ್ನು ಜಾರಿಗೊಳಿಸುವ ಸಾಧ್ಯತೆ ಇದ್ದು, ದಿನವೊಂದಕ್ಕೆ 100 SMS ಮಿತಿಯನ್ನು ತೆರವುಗೊಳಿಸಲಿದೆ ಎನ್ನಲಾಗುತ್ತಿದೆ.

8 ವರ್ಷಗಳ ಹಿಂದೆ ಈ ನಿಯಮ ಜಾರಿಗೊಳಿಸಿತ್ತು TRAI
ಮುಂಬರುವ ಮಾರ್ಚ್ 3 ರಿಂದ ಮಾರ್ಚ್ 17ರ ವರೆಗೆ TRAI ತನ್ನ ಈ ನಿಯಮ ಬದಲಾವಣೆಯ ಕುರಿತು ಟೆಲಿಕಾಂ ಕಂಪನಿಗಳ ಜೊತೆ ಚರ್ಚೆ ನಡೆಸಲು ನಿರ್ಧರಿಸಿದೆ. 8 ವರ್ಷಗಳ ಹಿಂದೆ ಅಂದರೆ 2012 ರಲ್ಲಿ TRAI ಭಾರತದಲ್ಲಿ ಈ 100 SMS ಲಿಮಿಟ್ ನಿಯಮವನ್ನು ಜಾರಿಗೊಳಿಸಿತ್ತು. SMS ಸ್ಪ್ಯಾಮ್ ತಡೆಯಲು TRAI ಈ ಮಿತಿ ಜಾರಿಗೊಳಿಸಿತ್ತು.

ಕಳೆದ ಕೆಲವು ವರ್ಷಗಳಿಂದ SMS ಗಳಿಂದ ಹರಡುವ ಸ್ಪ್ಯಾಮ್ ಗಳನ್ನು ತಡೆಗಟ್ಟುವಲ್ಲಿ TRAI ಯಶಸ್ವಿಯಾಗಿದೆ. ಇದರ ಜೊತೆಗೆ SMS ಸ್ಪ್ಯಾಮ್ ಗಳ ಹರಡುವಿಕೆಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಟೆಲಿಕಾಂ ಕಂಪನಿಗಳಿಗೆ TRAI ಆದೇಶ ನೀಡಿದೆ. ಕೆಲ ವರ್ಷಗಳ ಹಿಂದೆ ಮೊಬೈಲ್ ಬಳಕೆದಾರರ ಅನುಕೂಲಕ್ಕೆ TRAI  DND ಸೇವೆಯನ್ನು ಜಾರಿಗೊಳಿಸಿದ್ದು ಇಲ್ಲಿ ಉಲ್ಲೇಖನೀಯ.  TRAIನ ಈ ಸೇವೆಯನ್ನು ಬಳಸಿ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಜಾಹೀರಾತು ಸದೆಶಗಳನ್ನು ತಡೆಗಟ್ಟಬಹುದಾಗಿದೆ.

Trending News