ಬೈಕ್ ಒಳಗಿಂದ ಹೆಡೆಯೆತ್ತಿ ಬುಸುಗುಟ್ಟಿದ ಹಾವು! ವೈರಲ್ ಆಯ್ತು ವೀಡಿಯೋ

ಹಾವು ಹುತ್ತದೊಳಗಿಂದ ಬರುವುದನ್ನು ಎಲ್ಲರೂ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಈ ಹಾವಿನ ವಾಸ ಬೈಕ್ ಒಳಗಂತೆ!

Last Updated : Jul 7, 2018, 06:45 PM IST
ಬೈಕ್ ಒಳಗಿಂದ ಹೆಡೆಯೆತ್ತಿ ಬುಸುಗುಟ್ಟಿದ ಹಾವು! ವೈರಲ್ ಆಯ್ತು ವೀಡಿಯೋ title=

ನವದೆಹಲಿ: ಸಾಮಾಜಿಕ ಜಾಲತಾಣ ಅನ್ನೋದೇ ಹೀಗೆ, ದೇಶ-ವಿದೇಶಗಳ ಚಿತ್ರ ವಿಚಿತ್ರ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ವೈರಲ್ ಮಾಡಿಬಿಡುತ್ತೆ. ಅಂತಹದ್ದೇ ಒಂದು ವೀಡಿಯೋ ಇದೀಗ ಯೂಟ್ಯೂಬ್'ನಲ್ಲಿ ವೈರಲ್ ಆಗಿದೆ.

ಹಾವು ಹುತ್ತದೊಳಗಿಂದ ಬರುವುದನ್ನು ಎಲ್ಲರೂ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಈ ಹಾವಿನ ವಾಸ ಬೈಕ್ ಒಳಗಂತೆ. ಯಾರೇ ಬೈಕ್ ಮುಟ್ಟಲು ಹೋದರೂ ಒಳಗಿಂದಲೇ ತಲೆ ಹೊರ ಹಾಕಿ ಹೆಡೆಯೆತ್ತಿ ಬುಸುಗುಟ್ಟಿ ಎಲ್ಲರನ್ನೂ ಹೆದರಿಸುತ್ತೆ. ಹೇಗೆ ಅಂತ ನೀವೇ ಒಮ್ಮೆ ನೋಡಿ...

ಈ ಘಟನೆ ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದು ತಿಳಿದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ. 

Trending News