25 ಸಾವಿರಕ್ಕೆ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದೊಳಗೆ ನುಸುಳಲು ಅವಕಾಶ ಕಲ್ಪಿಸುವ ಕಳ್ಳಸಾಗಾಣಿಕೆದಾರರು

    

Last Updated : Jan 15, 2018, 02:49 PM IST
25 ಸಾವಿರಕ್ಕೆ ರೋಹಿಂಗ್ಯಾ ನಿರಾಶ್ರಿತರಿಗೆ ಭಾರತದೊಳಗೆ ನುಸುಳಲು ಅವಕಾಶ ಕಲ್ಪಿಸುವ ಕಳ್ಳಸಾಗಾಣಿಕೆದಾರರು   title=

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇನ್ನು ಬಹುತೇಕ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಇದರ ನಡುವೆಯೆ ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಬಹುತೇಕ ನಿರಾಶ್ರೀತರು ಅಕ್ರಮವಾಗಿ ನುಸುಳುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಕಳ್ಳ ಸಾಗಾಣಿಕೆದಾರರು ಕೂಡಾ ರೋಹಿಂಗ್ಯಾ ನಿರಾಶ್ರಿತರಿಗೆ ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಜಾನುವಾರ ಸಾಗಾಣಿಕೆದಾರರು ಈ ನಿರಾಶ್ರಿತರ ಮೂಲಕ ಪ್ರತಿ ವ್ಯಕ್ತಿಗೆ 20 ರಿಂದ 25 ಸಾವಿರ, ಐದು ಜನರ ಕುಟುಂಬಕ್ಕೆ 75 ರಿಂದ 80 ಸಾವಿರ ರೂಪಾಯಿಗಳಂತೆ ಶುಲ್ಕ ವಿಧಿಸುತ್ತಿದ್ದಾರೆ ಎಂದು ಝೀ ನ್ಯೂಸ್ ತನಿಖಾ ವರದಿಯಿಂದ ತಿಳಿದುಬಂದಿದೆ. ಬಹುತೇಕ ಅಕ್ರಮ ನಿರಾಶ್ರಿತರಿಗೆ ವೀಸಾ ಮತ್ತು ಪಾಸ್ ಪೋರ್ಟ್ ಇಲ್ಲವೆಂದು ತಿಳಿದುಬಂದಿದೆ.

ಕಳೆದ ತಿಂಗಳಂದು ಕೇಂದ್ರ ಸರ್ಕಾರವು ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ, ಮಿಜೊರಾಮ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ಗಡಿಭಾಗದಲ್ಲಿ ಹದ್ದಿನ ಕಣ್ಣಿಡಲು ಸೂಚಿಸಿತ್ತು. ಮಯನ್ಮಾರ್ ನಲ್ಲಿ ಮುಸ್ಲಿಮರ ಜನಾಂಗಿಯ ಹತ್ಯೆ ಪ್ರಕರಣಗಳಿಂದ ಭಾರತ-ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ವಲಸೆ ನಿರಾಶ್ರಿತರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.

Trending News