Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ

ಜನವರಿ 16 ಶನಿವಾರದಿಂದ ಕರೋನಾ ಸೋಂಕಿನ ಅಪಾಯದಿಂದ ಜನರನ್ನು ರಕ್ಷಿಸಲು, ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು (Coronavirus Vaccination Programme) ಪ್ರಾರಂಭಿಸಲಾಗಿದೆ. ನೈರ್ಮಲ್ಯ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ದಿನ ಲಸಿಕೆ ಪ್ರಮಾಣವನ್ನು ನೀಡಲಾಯಿತು.  

Written by - Yashaswini V | Last Updated : Jan 17, 2021, 08:50 AM IST
  • ರಾಷ್ಟ್ರ ರಾಜಧಾನಿಯ ಎಲ್ಲಾ 11 ಜಿಲ್ಲೆಗಳಲ್ಲಿ 8117 ಜನರಿಗೆ ಲಸಿಕೆ ನೀಡಬೇಕಿತ್ತು
  • ಆದರೆ ಕೇವಲ 4319 ಉದ್ಯೋಗಿಗಳಿಗೆ ಲಸಿಕೆ ನೀಡಲಾಯಿತು
  • ಲಸಿಕೆ ಹಾಕಿಸಿಕೊಂಡ ಬಳಿಕ 52 ಜನರಲ್ಲಿ ಅಡ್ಡಪರಿಣಾಮ ಕಂಡು ಬಂದಿದೆ
Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ title=
Covid 19 vaccine side effect

ನವದೆಹಲಿ: ಇಡೀ ಜಗತ್ತಿಗೇ ಕಂಟಕವಾಗಿರುವ ಕರೋನಾವೈರಸ್ ಎಂಬ ಮಹಾಮಾರಿಯಿಂದ ರಕ್ಷಿಸಲು ಕಡೆಗೂ ಲಸಿಕೆ ಲಭಿಸಿದೆ. ದೇಶಾದ್ಯಂತ ಜನವರಿ 16 ರಿಂದ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದೆ. ಆದರೆ ಕೆಲವು ಜನರ ಮೇಲೆ ಕರೋನಾ ವ್ಯಾಕ್ಸಿನೇಷನ್‌ನ (Corona Vaccination) ಅಡ್ಡಪರಿಣಾಮಗಳು ಕಂಡು ಬಂದಿವೆ. ದೆಹಲಿಯಲ್ಲಿ ಲಸಿಕೆ ಹಾಕಿದ ನಂತರ 52 ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಈ 52 ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಲಾಗಿದೆ.

ಲಸಿಕೆ ನೀಡಿದ ನಂತರ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಅಲರ್ಜಿ  :
ಜನವರಿ 16 ಶನಿವಾರದಿಂದ ಕರೋನಾ ಸೋಂಕಿನ ಅಪಾಯದಿಂದ ಜನರನ್ನು ರಕ್ಷಿಸಲು, ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು (Coronavirus Vaccination Programme) ಪ್ರಾರಂಭಿಸಲಾಗಿದೆ. ನೈರ್ಮಲ್ಯ ಕಾರ್ಮಿಕರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ದಿನ ಲಸಿಕೆ ಪ್ರಮಾಣವನ್ನು ನೀಡಲಾಯಿತು.
ಆದರೆ ಕೆಲವು ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ನಂತರ ಸಣ್ಣ ಸಮಸ್ಯೆಗಳ ದೂರುಗಳು ಸಹ ಬಂದಿವೆ. ಲಸಿಕೆ ನೀಡಿದ ನಂತರ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಅಲರ್ಜಿ ಕಂಡು ಬಂದಿದೆ.  ಈ ಇಬ್ಬರು ಆರೋಗ್ಯ ಕಾರ್ಯಕರ್ತರು ಲಸಿಕೆ ಪ್ರಮಾಣವನ್ನು ತೆಗೆದುಕೊಂಡ ಕೆಲವೇ ಗಂಟೆಗಳ ನಂತರ ಅಲರ್ಜಿಯ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

4319 ಉದ್ಯೋಗಿಗಳಿಗೆ ಲಸಿಕೆ ನೀಡಲಾಯಿತು : 
ರಾಜಧಾನಿಯ ಎಲ್ಲಾ 11 ಜಿಲ್ಲೆಗಳಲ್ಲಿ 8117 ಜನರಿಗೆ ಲಸಿಕೆ ನೀಡಬೇಕಿತ್ತು, ಆದರೆ ಕೇವಲ 4319 ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದ್ದು,  52 ಜನರಲ್ಲಿ ಕರೋನಾವೈರಸ್ ಲಸಿಕೆಯ (Coronavirus Vaccine) ಅಡ್ಡಪರಿಣಾಮಗಳ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತದೆ. ದೆಹಲಿಯ 11 ಜಿಲ್ಲೆಗಳಲ್ಲಿ ಕೇವಲ ಎರಡು ಜಿಲ್ಲೆಗಳಲ್ಲಿ ಒಂದೇ ಒಂದು ಲಸಿಕೆ ಅಡ್ಡಪರಿಣಾಮ ಉಂಟಾಗಿಲ್ಲ. ಈಶಾನ್ಯ ಮತ್ತು ಶಹದಾರಾ ಜಿಲ್ಲೆಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ವರದಿಯಾಗಿಲ್ಲ, ಉಳಿದ ಎಲ್ಲಾ 9 ಜಿಲ್ಲೆಗಳಲ್ಲಿ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಿರುವ ಬಗ್ಗೆ ವರದಿಯಾಗಿವೆ.

ಇದನ್ನೂ ಓದಿ - ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ?

ಗಂಭೀರ ಅಡ್ಡಪರಿಣಾಮಗಳ ಪ್ರಕರಣ :
ಉತ್ತರ ದೆಹಲಿಯಲ್ಲಿ 1, ಆಗ್ನೇಯದೆಹಲಿಯಲ್ಲಿ 5, ವಾಯುವ್ಯ ದೆಹಲಿಯಲ್ಲಿ 4, ಪೂರ್ವ ದೆಹಲಿಯಲ್ಲಿ 6, ಮಧ್ಯ ದೆಹಲಿಯಲ್ಲಿ 2, ದಕ್ಷಿಣ ದೆಹಲಿಯಲ್ಲಿ 11, ನವದೆಹಲಿಯಲ್ಲಿ 5, ನೈಋತ್ಯ ದೆಹಲಿಯಲ್ಲಿ 11 ಮತ್ತು ಪಶ್ಚಿಮ ದೆಹಲಿಯಲ್ಲಿ 6 ಜನರಲ್ಲಿ ಲಸಿಕೆ ಪಡೆದ ನಂತರ ಹಲವು ಅಡ್ಡಪರಿಣಾಮಗಳು ಕಂಡು ಬಂದಿವೆ.

ಇವರಲ್ಲಿ ದಕ್ಷಿಣ ದೆಹಲಿಯಲ್ಲಿ ಓರ್ವ ವ್ಯಕ್ತಿಯಲ್ಲಿ ತೀವ್ರ ಅಡ್ಡಪರಿಣಾಮ ಕಂಡುಬಂದಿದೆ ಎಂದು ವರದಿಯಾಗಿದೆ. ನವದೆಹಲಿಯ ಜಿಲ್ಲಾಡಳಿತದ ಪ್ರಕಾರ, ಚರಕ್ ಪಾಲಿಕಾ ಆಸ್ಪತ್ರೆಯಲ್ಲಿ ಲಸಿಕೆ ಹಾಕುವಾಗ ಆರೋಗ್ಯ ಕ್ಷೀಣಿಸಿದ ಎರಡು ಪ್ರಕರಣಗಳು ವರದಿಯಾಗಿದ್ದರೆ, ಉತ್ತರ ರೈಲ್ವೆಯ ಪಾಟ್‌ಪರ್ಗಂಜ್ ಆಸ್ಪತ್ರೆಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ. ಈ ಉದ್ಯೋಗಿಗಳಲ್ಲಿ ಒಬ್ಬರನ್ನು ಎಇಎಫ್‌ಐ (AEFI) ಕೇಂದ್ರಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ - Corona Vaccine: ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರರಿಗೆ ಲಸಿಕೆ ಬೇಡ: ಸರ್ಕಾರ

ಎಇಎಫ್‌ಐ (AEFI) ಕೇಂದ್ರ ಎಂದರೇನು ?
ಪ್ರತಿ ಲಸಿಕೆ ಬೂತ್ ಬಳಿ ಸರ್ಕಾರ ಎಇಎಫ್‌ಐ ಕೇಂದ್ರವನ್ನು ಸ್ಥಾಪಿಸಿದ್ದು, ಲಸಿಕೆ ಹಾಕಿಸಿಕೊಂಡವರಲ್ಲಿ ಅಡ್ಡಪರಿಣಾಮ ಕಂಡು ಬಂದರೆ ಈ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News