ಶೀಘ್ರವೇ ಷೋ-ಕೇಸ್ ನ ಮಿಠಾಯಿಗಳ ಮೇಲೆ MFD, EXP ಡೇಟ್ ನಮೂದಿಸುವುದು ಅನಿವಾರ್ಯ

ಈ ನೂತನ ವ್ಯವಸ್ಥೆ ದೇಶಾದ್ಯಂತ ಜೂನ್ 1, 2020ರಿಂದ ಜಾರಿಗೆ ಬರಲಿದೆ. ಖಾದ್ಯ ಸುರಕ್ಷತೆಯ ಅಧಿಕಾರಿಗಳು ಈ ಕುರಿತು ಮಾರಾಟಗಾರರ ಕೌನ್ಸೆಲಿಂಗ್ ನಡೆಸಲಿದ್ದು, FSSAI ನ ನೂತನ ಮಾರ್ಗಸೂಚಿಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ.

Last Updated : Feb 25, 2020, 07:13 PM IST
ಶೀಘ್ರವೇ ಷೋ-ಕೇಸ್ ನ ಮಿಠಾಯಿಗಳ ಮೇಲೆ MFD, EXP ಡೇಟ್ ನಮೂದಿಸುವುದು ಅನಿವಾರ್ಯ title=

ನವದೆಹಲಿ: ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ(FSSAI)ನ ನೂತನ ಮಾರ್ಗಸೂಚಿಗಳ ಪ್ರಕಾರ ಇನ್ಮುಂದೆ ಸ್ವೀಟ್ ಶಾಪ್ ಮಾಲೀಕರು ಇನ್ಮುಂದೆ ಷೋ-ಕೇಸ್ ನಲ್ಲಿ ಇಟ್ಟ ಮಿಠಾಯಿಗಳ ಟ್ರೇಗಳ ಮೇಲೆ ಮಿಠಾಯಿಗಳ ಮ್ಯಾನುಫ್ಯಾಕ್ಚರಿಂಗ್ ಹಾಗೂ ಎಕ್ಸ್ಪೈರಿ ಡೇಟ್ ನಮೂದಿಸುವುದು ಅನಿವಾರ್ಯ ಎಂದು ಹೇಳಿದೆ. ಅಷ್ಟೇ ಅಲ್ಲ ಈ ಮಿಠಾಯಿ ಗಳನ್ನು ಎಲ್ಲಿಯವರೆಗೆ ಸೇವಿಸಬಹುದು ಎಂದು ಹೇಳುವುದು ಕೂಡ ಅನಿವಾರ್ಯ ಎಂದು ಹೇಳಿದೆ.

ಜೂನ್ 1, 2020ಕ್ಕೆ ಈ ನೂತನ ವ್ಯವಸ್ಥೆ ದೇಶಾದ್ಯಂತ ಜಾರಿಗೆ ಬರಲಿದೆ
ಈ ನೂತನ ವ್ಯವಸ್ಥೆ ದೇಶಾದ್ಯಂತ ಜೂನ್ 1, 2020ರಿಂದ ಜಾರಿಗೆ ಬರಲಿದೆ. ಖಾದ್ಯ ಸುರಕ್ಷತೆಯ ಅಧಿಕಾರಿಗಳು ಈ ಕುರಿತು ಮಾರಾಟಗಾರರ ಕೌನ್ಸೆಲಿಂಗ್ ನಡೆಸಲಿದ್ದು, FSSAI ನ ನೂತನ ಮಾರ್ಗಸೂಚಿಗಳ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ. ಇದುವರೆಗೆ ಮಿಠಾಯಿ ಮಾರಾಟಗಾರದು ಸ್ವೀಟ್ ಬಾಕ್ಸ್ ಮೇಲೆ ಮ್ಯಾನುಫ್ಯಾಕ್ಚರಿಂಗ್ ಡೇಟ್ ಹಾಗೂ ಬೆಸ್ಟ್ ಬಿಫೋರ್ ಡೇಟ್ ನಮೂದಿಸುತ್ತಿದ್ದಾರೆ. ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಹಾಲು ಮತ್ತು ಹೈನಿನಿಂದ ತಯಾರಿಸಲಾಗಿರುವ ಖಾದ್ಯ ಪದಾರ್ಥಗಳನ್ನು ಷೋ-ಕೇಸ್ ನ ಟ್ರೇನಲ್ಲಿ ಮಾರಾಟಕ್ಕೆ ಇಡುತ್ತಾರೆ.

ಇನ್ಮುಂದೆ ಷೋ ಕೇಸ್ ನಲ್ಲಿ ಇಡಲಾಗುವ ಖಾದ್ಯ ಪದಾರ್ಥಗಳ ಮೇಲೆ MFD ನಮೂದಿಸಬೇಕು
ಇದುವರೆಗೆ ಮಾರಾಟಗಾರರು ಷೋ-ಕೇಸ್ ನಲ್ಲಿ ಮಾರಾತಕ್ಕಿಡುವ ಖಾದ್ಯ ಪದಾರ್ಥಗಳ ಮೇಲೆ ಪದಾರ್ಥಗಳ ದರ ಡಿಸ್ಪ್ಲೇ ಮಾಡುತ್ತಿದ್ದರು. ಆದರೆ, ಅದನ್ನು ಯಾವಾಗ ತಯಾರಿಸಲಾಗಿದೆ ಮತ್ತು ಎಲ್ಲಿಯವರೆಗೆ ಅದು ಸೇವಿಸಲು ಯೋಗ್ಯವಾಗಿದೆ ಎಂಬುದನ್ನು ನಮೂದಿಸುತ್ತಿರಲಿಲ್ಲ. ಸದ್ಯ ಜಾರಿಗೆ ಬರಲಿರುವ ಈ ನೂತನ ವ್ಯವಸ್ಥೆ ಅಡಿ ಸ್ವೀಟ್ ಮಾರಾಟಗಾರರು ಷೋ-ಕೇಸ್ ನಲ್ಲಿ ಇಡಲಾಗುವ ಮಿಠಾಯಿಗಳ ಟ್ರೇಗಳ ಮೇಲೆ ಬೆಲೆಯ ಜೊತೆಗೆ MFD ಹಾಗೂ EXP ದಿನಾಂಕಗಳನ್ನು ನಮೂದಿಸುವುದು ಅನಿವಾರ್ಯವಾಗಲಿದೆ.

Trending News