ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಅಜಿತ್ ಪವಾರ್ ವೈಯಕ್ತಿಕ ನಿರ್ಧಾರ, ಎನ್‌ಸಿಪಿದಲ್ಲ; ಶರದ್ ಪವಾರ್

ಅಜಿತ್ ಪವಾರ್ ಅವರ ರಾಜಕೀಯ ನಿರ್ಧಾರವನ್ನು ಎನ್‌ಸಿಪಿ ಬೆಂಬಲಿಸುವುದಿಲ್ಲ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

Last Updated : Nov 23, 2019, 10:08 AM IST
ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬೆಂಬಲ ಅಜಿತ್ ಪವಾರ್ ವೈಯಕ್ತಿಕ ನಿರ್ಧಾರ, ಎನ್‌ಸಿಪಿದಲ್ಲ; ಶರದ್ ಪವಾರ್ title=

ಮುಂಬೈ: ಮಹಾರಾಷ್ಟ್ರ(Maharashtra)ದಲ್ಲಿ ಶನಿವಾರ ಬೆಳಿಗ್ಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಎನ್‌ಸಿಪಿ(NCP)ಯ  ಅಜಿತ್ ಪವಾರ್(Ajit pawar) ಬೆಂಬಲದೊಂದಿಗೆ ಬಿಜೆಪಿ ತನ್ನ ಸರ್ಕಾರವನ್ನು ರಚಿಸಿದೆ. ಇದರೊಂದಿಗೆ ದೇವೇಂದ್ರ ಫಡ್ನವೀಸ್(Devendra Fadnavis) ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗಮನಾರ್ಹ ವಿಷಯವೆಂದರೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಅಜಿತ್ ಪವಾರ್ ಅವರ ಈ ನಿರ್ಧಾರದ ಬಗ್ಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಅಂದರೆ ಶರದ್ ಪವಾರ್(Sharad Pawar) ಅವರ ಸಮ್ಮತಿಯಿಲ್ಲದೆಯೇ ಅಜಿತ್ ಪವಾರ್ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಅಜಿತ್ ಪವಾರ್ ಅವರ ರಾಜಕೀಯ ನಿರ್ಧಾರವನ್ನು ಎನ್‌ಸಿಪಿ ಬೆಂಬಲಿಸುವುದಿಲ್ಲ. ಬಿಜೆಪಿ ಜೊತೆಗೆ ಸರ್ಕಾರ ರಚಿಸುವುದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರವಾಗಿದೆ. ಅದನ್ನು ನಾವು ಬೆಂಬಲಿಸುವುದಿಲ್ಲ ಎಂದು ಶರದ್ ಪವಾರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಗೆ ಬೆಂಬಲ ನೀಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರವೇ ಹೊರತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (NCP)ದ ನಿರ್ಧಾರವಲ್ಲ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಅವರ ನಿರ್ಧಾರವನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಲು ನಾವು ಬಯಸುತ್ತೇವೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
 

Trending News