ನವದೆಹಲಿ: ವಿದೇಶಕ್ಕೆ ಹಾರಲು ಸಿದ್ಧವಾಗುವುದಕ್ಕೆ ಸ್ವಲ್ಪ ಮುಂಚೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶಾ ಫೈಸಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಜೀ ನ್ಯೂಸ್ ಗೆ ತಿಳಿಸಿರುವ ಸುದ್ದಿ ಮೂಲಗಳ ಪ್ರಕಾರ ಈಗ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಾಪಸ್ ಕಳುಹಿಸಲಾಗಿದೆ.ರಾಜಧಾನಿ ಶ್ರೀನಗರದಲ್ಲಿ ಫೈಸಲ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎನ್ನಲಾಗಿದೆ.
ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಕ್ರಮವನ್ನು ಟೀಕಿಸಿದ್ದರು.ಅಲ್ಲದೆ ತಮ್ಮ ಟ್ವೀಟ್ ನಲ್ಲಿ ಕಾಶ್ಮೀರಿಗಳ ಮುಂದೆ ಎರಡು ಆಯ್ಕೆಗಳಿವೆ ಒಂದು ಸೂತ್ರದ ಗೊಂಬೆಯಾಗುವುದು ಅಥವಾ ಪ್ರತ್ಯೇಕತಾವಾದಿಯಾಗುವುದು ಎಂದು ಹೇಳಿದ್ದರು.
"ರಾಜಕೀಯ ಹಕ್ಕುಗಳ ಪುನಃಸ್ಥಾಪನೆಗಾಗಿ ಕಾಶ್ಮೀರಕ್ಕೆ ದೀರ್ಘ, ನಿರಂತರ, ಅಹಿಂಸಾತ್ಮಕ ರಾಜಕೀಯ ಜನಾಂದೋಲನ ಅಗತ್ಯವಿರುತ್ತದೆ. 370 ನೇ ವಿಧಿಯನ್ನು ರದ್ದುಪಡಿಸುವುದು ಮುಖ್ಯವಾಹಿನಿಯನ್ನು ಪೂರ್ಣಗೊಳಿಸಿದೆ. ಸಾಂವಿಧಾನಿಕವಾದಿಗಳು ಈಗ ಎಲ್ಲರು ಹೋಗಿದ್ದಾರೆ. ಆದ್ದರಿಂದ ನೀವು ಈಗ ಸೂತ್ರದ ಗೊಂಬೆ ಅಥವಾ ಪ್ರತ್ಯೇಕವಾದಿಯಾಗಬಹುದು' ಎಂದು ಟ್ವೀಟ್ ಮಾಡಿದ್ದರು.ಕೊನೆಯ ಅವಮಾನವನ್ನು ತೀರಿಸಿಕೊಳ್ಳುವ ಮತ್ತು ರದ್ದುಗೊಳಿಸುವವರೆಗೂ ತಾವು ಈದ್ ಆಚರಣೆ ಇರುವುದಿಲ್ಲ ಎಂದು ಶಾ ಫೈಸಲ್ ಟ್ವೀಟ್ ಮಾಡಿದ್ದರು.