ಬಿಹಾರ ಚುನಾವಣೆ:ಸೀಟು ಹಂಚಿಕೆ ಕುರಿತು NDA ನಲ್ಲಿ ಮೂಡಿದ ಒಮ್ಮತ, LJP ನಿರ್ಣಯದ ಬಳಿಕ ನಿರ್ಧಾರ

ಬಿಹಾರದಲ್ಲಿ ಸ್ಥಾನ ಹಂಚಿಕೆ ಬಗ್ಗೆ ಎನ್‌ಡಿಎನಲ್ಲಿ  ಒಮ್ಮತದ ಹಿಂದಿನ ಪ್ರಮುಖ ಕಾರಣ ಎಲ್‌ಜೆಪಿಯ ನಿರ್ಧಾರ. ರಾಜ್ಯ ಮಟ್ಟದಲ್ಲಿ ಜನತಾದಳ (ಯುನೈಟೆಡ್) ಜೊತೆಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅವರು ಪ್ರತ್ಯೇಕವಾಗಿ ಸ್ಪರ್ಧಿಸಲು LJP ನಿರ್ಧರಿಸಿದೆ.

Last Updated : Oct 4, 2020, 09:21 PM IST
  • ಬಿಹಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಕುರಿತು NDA ನಲ್ಲಿ ಒಮ್ಮತ.
  • ನೂತನ ಫಾರ್ಮ್ಯೂಲಾ ಪ್ರಕಾರ BJP 121 ಹಾಗೂ JDU 122 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.
  • ಹಲವು ಸ್ಥಾನಗಳಲ್ಲಿ LJP ಅಭ್ಯರ್ಥಿಗಳು JDU ಅಭ್ಯರ್ಥಿಗಳ ಜೊತೆಗೆ ಸೈದ್ಧಾಂತಿಕ ಹೊರಾತ ನಡೆಸಲಿದ್ದಾರೆ.
ಬಿಹಾರ ಚುನಾವಣೆ:ಸೀಟು ಹಂಚಿಕೆ ಕುರಿತು NDA ನಲ್ಲಿ ಮೂಡಿದ ಒಮ್ಮತ, LJP ನಿರ್ಣಯದ ಬಳಿಕ ನಿರ್ಧಾರ title=

ನವದೆಹಲಿ:ಬಿಹಾರ ವಿಧಾನಸಭಾ ಚುನಾವಣೆಗೆ (Bihar Elections) ಎನ್‌ಡಿಎಯಲ್ಲಿ ಸ್ಥಾನ ಹಂಚಿಕೆ ನಿರ್ಧರಿಸಲಾಗಿದೆ. LJP ತೀರ್ಮಾನದ ನಂತರ ಫಾರ್ಮುಲಾವನ್ನು ನಿರ್ಧರಿಸಲಾಗಿದೆ, ಇದರ ಅಡಿಯಲ್ಲಿ ಈಗ ಬಿಜೆಪಿ ರಾಜ್ಯದ 121 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಜೆಡಿಯು 122 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಹೊಸ ಒಪ್ಪಂದದ ಪ್ರಕಾರ, ಜೆಡಿಯು ತನ್ನ ಕೋಟಾದಿಂದ ಜಿತಾನ್ ರಾಮ್ ಮಾಂಝಿ ಪಕ್ಷಕ್ಕೆ 5 ಸ್ಥಾನ ನೀಡಲಿದೆ.

ಇದನ್ನು ಓದಿ-ಬಿಹಾರ-ಕರ್ನಾಟಕದ MLC ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

LJP ತೀರ್ಮಾನದ ಬಳಿಕ ಫಾರ್ಮುಲಾ ನಿರ್ಧಾರಗೊಂಡಿದೆ
ಬಿಹಾರದಲ್ಲಿ ಸ್ಥಾನ ಹಂಚಿಕೆ ಬಗ್ಗೆ ಎನ್‌ಡಿಎ ಒಮ್ಮತದ ಹಿಂದಿನ ಪ್ರಮುಖ ಕಾರಣ ಎಲ್‌ಜೆಪಿಯ ನಿರ್ಧಾರ. ರಾಜ್ಯ ಮಟ್ಟದಲ್ಲಿ ಜನತಾದಳ (ಯುನೈಟೆಡ್) ಜೊತೆಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅವರು ಪ್ರತ್ಯೇಕವಾಗಿ ಸ್ಪರ್ಧಿಸಲು LJP ನಿರ್ಧರಿಸಿದೆ.

ಇದನ್ನು ಓದಿ-ಬಿಹಾರ ಚುನಾವಣೆ: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಮಹಾಮೈತ್ರಿ ಒಕ್ಕೂಟದ ಸಿಎಂ ಅಭ್ಯರ್ಥಿ

ಕೆಲ ಸ್ಥಾನಗಳಲ್ಲಿ ಚುನಾವಣಾ ಕುತೂಹಲ ಮೂಡಿಸಲಿದೆ
ಎಲ್‌ಜೆಪಿಯ ಪರವಾಗಿ ಅನೇಕ ಸ್ಥಾನಗಳಲ್ಲಿ ಜೆಡಿಯು ಜೊತೆ ಸೈದ್ಧಾಂತಿಕ ಹೋರಾಟ ನಡೆಯಬಹುದು ಎಂದು ಹೇಳಲಾಗಿದ್ದು, ಆ ಸ್ಥಾನಗಳಲ್ಲಿರುವ ಜನರು ಬಿಹಾರದ ಹಿತದೃಷ್ಟಿಯಿಂದ ಯಾವ ಅಭ್ಯರ್ಥಿಗಳು ಉತ್ತಮ ಎಂದು ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಲೋಕ ಜನಶಕ್ತಿ ಪಕ್ಷವು ಬಿಹಾರ ಪ್ರಥಮ ಬಿಹಾರಿ ಫಸ್ಟ್ ವಿಷನ್ ದಾಖಲೆಯನ್ನು ಜಾರಿಗೆ ತರಲು ಬಯಸಿತ್ತು. ಆದರೆ, ಸಮಯ ಇರುವಾಗಲೇ ಅದಕ್ಕೆ ಸಮ್ಮತಿ ನೀಡಲಾಗಿಲ್ಲ.

Trending News