ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅವರ ಸಂಬಂಧಿಕರು ಮತ್ತು ಹಿತೈಷಿಗಳನ್ನು ಭೇಟಿ ಮಾಡಲು ಸುಪ್ರೀಂಕೋರ್ಟ್ ನಿಂದ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು.
ಗುಲಾಂ ನಬಿ ಅಜಾದ್ ಅವರು ಅಮ್ಮ ಅರ್ಜಿಯಲ್ಲಿ ಕಾಶ್ಮೀರಿಗಳ ಯೋಗ ಕ್ಷೇಮವನ್ನು ತಿಳಿದುಕೊಳ್ಳಲು ಮಾತ್ರ ಅವರು ಆಸಕ್ತಿ ಹೊಂದಿದ್ದಾರೆ ಮತ್ತು ಈ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಆಜಾದ್ ತಿಳಿಸಿದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಅವರ ಮನವಿಯನ್ನು ಅಂಗೀಕರಿಸಿದೆ.
ಈಗ ಅವರ ಅಜಾದ್ ಅವರ ಅರ್ಜಿಯನ್ನು ಅಂಗೀಕರಿಸಿದ್ದರಿಂದಾಗಿ ಶ್ರೀನಗರ, ಅನಂತ್ನಾಗ್, ಬಾರಾಮುಲ್ಲಾ ಮತ್ತು ಜಮ್ಮುಗಳಿಗೆ ಭೇಟಿ ನೀಡಿ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ.
ಆಜಾದ್ ಅವರ ಭೇಟಿಯ ಸಮಯದಲ್ಲಿ ರಾಜಕೀಯ ಚಟುವಟಿಕೆ ಇಲ್ಲ ಎಂಬ ಭರವಸೆಯನ್ನು ಅರಿತುಕೊಂಡು, ಸುಪ್ರೀಂಕೋರ್ಟ್ ಅವರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಮತ್ತು ಜನರನ್ನು ಭೇಟಿ ಮಾಡಲು ಅವಕಾಶ ನೀಡಿತು. ಆದರೆ ಸುಪ್ರೀಂಕೋರ್ಟ್ ಆಜಾದ್ ಅವರು ಕಾಶ್ಮೀರದಲ್ಲಿದ್ದಾಗ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಕೋರ್ಟ್ ಆದೇಶಿಸಿದೆ.