ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆರೋಪದ ವಿಚಾರವಾಗಿ ಅವರ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಮೇ 8 ರವರೆಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ಅರ್ಜಿದಾರರ ಪರವಾಗಿ ಕಾಣಿಸಿಕೊಂಡ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಈ ವಿಷಯವನ್ನು ಮುಂದೂಡಲಾಯಿತು. ಅರ್ಜಿದಾರರಾಗಿರುವ ಕಾಂಗ್ರೆಸ್ ಸಂಸದ ಸುಶ್ಮಿತಾ ದೇವ್ ಮೋದಿ ಮತ್ತು ಶಾ 11 ಬಾರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೋದಿ ಮತ್ತು ಶಾ ವಿರುದ್ಧ ಸಲ್ಲಿಸಿದ ದೂರುಗಳನ್ನು ಇಂದು ನಿರ್ಧರಿಸಲು ಹೇಳಿತ್ತು. ಚುನಾವಣಾ ಆಯೋಗವು ಇಲ್ಲಿಯವರೆಗೆ ಮೋದಿಗೆ ನಾಲ್ಕು ಕ್ಲೀನ್ ಚಿಟ್ಗಳನ್ನು ನೀಡಿದೆ ಮತ್ತು ಎರಡು ಪ್ರಕರಣಗಳಲ್ಲಿ ಶಾ ಅವರ ಹೆಸರನ್ನು ತೆರವುಗೊಳಿಸಲಾಗಿದೆ.
ಸೋಮವಾರದಂದು ನಡೆದ ವಿಚಾರಣೆ ಸಮಯದಲ್ಲಿ ಸಿಂಘ್ವಿ ಚುನಾವಣಾ ಆಯೋಗದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಬಂದಿರುವ ಭಿನ್ನಾಭಿಪ್ರಾಯದ ವರದಿಗಳನ್ನು ಉಲ್ಲೇಖಿಸಿ ಸಿಂಘ್ವಿ ಅವರು ಭವಿಷ್ಯದಲ್ಲಿ ಇದೇ ರೀತಿಯ ದೂರುಗಳನ್ನು ನಿರ್ಧರಿಸಲು ಮಾರ್ಗದರ್ಶಿ ಸೂತ್ರಗಳನ್ನು ನೀಡಬೇಕು ಎಂದು ಹೇಳಿದರು.