ನವದೆಹಲಿ: ಬಂಡಾಯ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಮೇಲೆ ಟೀಕಾ ಪ್ರಹಾರ ನಡೆಸುತ್ತಾ ಇದು ಒನ್ ಮ್ಯಾನ್ ಶೋ, ಟು ಮೆನ್ ಆರ್ಮಿ ಎಂದು ವ್ಯಂಗವಾಡಿದ್ದಾರೆ. ಅಲ್ಲದೆ ಮುಂದಿನ 50 ವರ್ಷಗಳ ಕಾಲ ಸರ್ಕಾರ ನಡೆಸುತ್ತೇವೆ ಎಂದು ಹೇಳಲಿಕ್ಕೆ ಇವಿಎಂ ಕಾರಣವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮೋದಿ-ಶಾ ಜೋಡಿಯನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿರುವ ಸಿನ್ಹಾ ವಿಷಯವನ್ನು ಅರ್ಥೈಸಿಕೊಳ್ಳುವಲ್ಲಿ ಭಯಾನಕವಾದ ಪರಿಪಕ್ವತೆ, ದರ್ಪ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಮುಂದಿನ 50 ವರ್ಷಗಳ ಕಾಲ ಭಾರತವನ್ನು ಆಳುತ್ತೇವೆ ಎನ್ನುವ ಮೂಲಕ ಈ ಒನ್ ಮ್ಯಾನ್ ಒನ್ ಶೋ ತೋರಿಸಿಕೊಟ್ಟಿದೆ. ಇದು ಇವಿಎಂ ನಿಯಂತ್ರಿಸುವುದರಿಂದ ಇದು ಸಾಧ್ಯವಾಗಬಹುದೇ? ಎನ್ನುವ ರೀತಿಯಲ್ಲಿ ಅವರು ಪ್ರಶ್ನಿಸಿದ್ದಾರೆ.
In the era of arrogant politics (Some of our people of ruling party), I see a bright star following accommodative politics. Akhilesh Yadav stating that “He shall take two steps backward for a grand coalition in UP”. A young politician displays tremendous conviction, courage,
— Shatrughan Sinha (@ShatruganSinha) September 20, 2018
ಇನ್ನು ಮುಂದುವರೆದು ರಾಷ್ಟ್ರದ ಹಿತಾಸಕ್ತಿಯನ್ನು ಜನರು ನಿರ್ಧರಿಸುತ್ತಾರೆ ಎನ್ನುವುದನ್ನು ನಾನು ಆಶಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾರ್ಯವೈಖರಿಯನ್ನು ನೇರವಾಗಿ ಖಂಡಿಸುತ್ತಿರುವವರಲ್ಲಿ ಶತ್ರುಘ್ನ ಸಿನ್ಹಾ ಕೂಡ ಒಬ್ಬರು.