ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ಶನಿವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಯೋಜಿಸಲಾದ ಮಾಜಿ ಸೈನಿಕರ ಜ್ಞಾನೋದಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಕಳೆದ 96 ವರ್ಷಗಳಿಂದ ಆರ್ಎಸ್ಎಸ್ಗೆ ಯಾವಾಗಲೂ ವಿರೋಧ ವ್ಯಕ್ತವಾಗಿದೆ. ಆದರೆ ನಾವು ಸಮಾಜ ಸೇವೆಯನ್ನು ಮುಂದುವರಿಸಿದ್ದೇವೆ. ಸ್ವಯಂಸೇವಕರು ಅಧಿಕಾರಕ್ಕೆ ಬಂದಾಗ ಮಾತ್ರ ಸಂಘಕ್ಕೆ ಸ್ವಲ್ಪ ಸಮಾಧಾನ ದೊರೆತಿದೆ ಎಂದು ಭಾಗವತ್ ಹೇಳಿದ್ದಾರೆ. ಈ ಸಂದರ್ಭದಲ್ಲಿ, ಭಾಗವತ್ ಅವರು ಮಾಜಿ ಸೈನಿಕರಿಗೆ ಶಾಖೆ ಮತ್ತು ಸ್ವಯಂಸೇವಕರ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಸೇರುವಂತೆ ಮನವಿ ಮಾಡಿದ್ದಾರೆ ಮತ್ತು ಸಮಾಜಕ್ಕೆ ನಿತ್ಯ ಒಂದು ಗಂಟೆ ನೀಡುವಂತೆ ಕೇಳಿಕೊಂಡಿದ್ದಾರೆ.
ಪ್ರತಿಯೊಬ್ಬರ DNA ಒಂದೇ
ಈ ಸಂದರ್ಭದಲ್ಲಿ ಮಾತನಾಡಿರುವ ಸಂಘದ ಮುಖ್ಯಸ್ಥರು, "ನಾವು ಇಲ್ಲಿದ್ದೇವೆ ಮತ್ತು ಖಚಿತವಾಗಿ ಇಲ್ಲಿಯೇ ಇದ್ದೇವೆ, ನಾವು ನಡೆದುಕೊಂಡು ಬರುತ್ತಿದ್ದೇವೆ. 40000 ವರ್ಷಗಳ ಹಿಂದಿನ ಭಾರತದ ಜನರ ಡಿಎನ್ಎ, ಇಂದಿನ ಜನರು DNA ಒಂದೇ ಆಗಿದೆ (All Indians DNA Is One). ನಾನು ಸುಮ್ಮನೆ ಗಾಳಿಯಲ್ಲಿ ಮಾತನಾಡುತ್ತಿಲ್ಲ. ಆದ್ದರಿಂದ ನಾವು ಅದೇ ಪೂರ್ವಜರ ವಂಶಸ್ಥರು, ಆ ಪೂರ್ವಜರಿಂದಲೇ ನಮ್ಮ ದೇಶ ಪ್ರವರ್ಧಮಾನಕ್ಕೆ ಬಂದಿದೆ. ನಮ್ಮ ಸಂಸ್ಕೃತಿ ಇಂದಿಗೂ ಮುಂದುವರೆದಿದೆ. ಗ್ರೀಸ್, ಈಜಿಪ್ಟ್, ರೋಮನ್ ಈಗಾಗಲೇ ಕಣ್ಮರೆಯಾಗಿವೆ. ನಮ್ಮ ವ್ಯಕ್ತಿತ್ವ ಕೊನೆಗೊಳ್ಳುವುದಿಲ್ಲ ಎಂಬುದರಲ್ಲಿ ಏನೋ ರಹಸ್ಯ ಅಡಗಿದೆ. ಇದಕ್ಕಾಗಿ ತ್ಯಾಗ ಮಾಡಿದ ಕೆಲವು ವಿಷಯಗಳಲ್ಲಿ ಒಂದು ವಿಷಯವಿದೆ ಮತ್ತು ಇದನ್ನು ಮಾಡಿದ ನಮ್ಮ ಪೂರ್ವಜರು ನಮ್ಮ ಹೆಮ್ಮೆಯ ವಿಷಯ, ಅವರಿಗೆ ಸಮರ್ಪಿತ ನಮ್ಮ ನಿಷ್ಠೆ ಮತ್ತು ಗೌರವ. ನಾವು ಅವರ ಜೀವನವನ್ನು ಅನುಕರಿಸುತ್ತೇವೆ" ಎಂದಿದ್ದಾರೆ.
ಇದನ್ನೂ ಓದಿ-Mohan Bhagwat: ‘ಜೈ ಶ್ರೀ ರಾಮ್’ ಘೋಷಣೆ ಕೂಗುವವರಿಗೆ ಮೋಹನ್ ಭಾಗವತ್ ಈ ಸಲಹೆ ನೀಡಿದ್ದಾರೆ
#WATCH | For over 40,000 years DNA of all people in India has been the same...I am not faffing," said RSS chief Mohan Bhagwat at an event in Dharamshala, Himachal Pradesh (18.12) pic.twitter.com/cAtY12oe5i
— ANI (@ANI) December 19, 2021
ಇದನ್ನೂ ಓದಿ-RSS Chief: '75 ವರ್ಷಗಳು ನಾವು ಸರಿಯಾದ ದಾರಿಯನ್ನು ಅನುಸರಿಸಿಲ್ಲ, ಹೀಗಾಗಿ ಅಭಿವೃದ್ಧಿ ನಿಂತುಹೋಗಿದೆ'
ಹಿಂದುತ್ವ ಜೋಡಿಸುತ್ತದೆ,ವಿಭಜಿಸುವುದಿಲ್ಲ
ಹಿಂದುತ್ವವು (Hindutva) ಯಾರನ್ನೂ ಗೆಲ್ಲುವ ಬಗ್ಗೆ ಮಾತನಾಡುವುದಿಲ್ಲ ಮತ್ತು ಈ ಪದವನ್ನು ಮೊದಲು ಬಳಸಿದ್ದು ಗುರುನಾನಕ್ ದೇವ್ (Guru Nanak Dev) ಜಿ ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ. ಹಿಂದುತ್ವವು ಯಾರನ್ನೂ ವಿಭಜಿಸುವ ಬಗ್ಗೆ ಮಾತನಾಡುವುದಿಲ್ಲ, ಆದರೆ ಅದು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತದೆ ಎಂದು ಸಂಘದ ಮುಖ್ಯಸ್ಥರು ಹೇಳಿದ್ದಾರೆ. ಹಲವು ಬಾರಿ ವಿಭಜನೆಯಾಗಿರುವುದರಿಂದಲೇ ನಾವು ಗುಲಾಮರಾದೆವು ಎಂದು ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ-RSS Chief's Statement:'ಧರ್ಮ ಪರಿವರ್ತನೆ ನಮ್ಮ ಉದ್ದೇಶವಲ್ಲ, ಭಾರತವನ್ನು 'ವಿಶ್ವಗುರು'ವನ್ನಾಗಿಸಬೇಕಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.