ದೇಶೀಯ ಸರಕು ಸಾಗಾಣಿಕಾ ಹಡಗಿನಲ್ಲಿ ಬೆಂಕಿ; ಮುಂದುವರೆದ ರಕ್ಷಣಾ ಕಾರ್ಯ

ಸರಕು ಸಾಗಣೆ ಹಡಗು SSL Kolkata’ದಲ್ಲಿ ಬುಧವಾರ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. 

Last Updated : Jun 14, 2018, 03:23 PM IST
ದೇಶೀಯ ಸರಕು ಸಾಗಾಣಿಕಾ ಹಡಗಿನಲ್ಲಿ ಬೆಂಕಿ; ಮುಂದುವರೆದ ರಕ್ಷಣಾ ಕಾರ್ಯ title=

ಕೊಚ್ಚಿ: ಸರಕು ಸಾಗಣೆ ಹಡಗು SSL Kolkata’ದಲ್ಲಿ ಬುಧವಾರ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. 

ಈ ಬಗ್ಗೆ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದು, ಹಡಗಿನಲ್ಲಿದ್ದ 22 ಸಿಬ್ಬಂದಿ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆ ಸಿಬ್ಬಂದಿಯನ್ನು ಕೊಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ. 11 ಮಂದಿಯನ್ನು ರಕ್ಷಿಸಲಾಗಿದೆ. ನೌಕಾಪಡೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ’ ಎಂದು ತಿಳಿಸಿದ್ದಾರೆ.

‘ನಾಪ್ತಾ’ ಎಂಬ ರಾಸಾಯನಿಕ ಟ್ಯಾಂಕರ್‌ ಅನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಹೆಚ್ಚಿನ ಕಾರ್ಯಾಚರಣೆಗಾಗಿ ಹಾಲ್ಡಿಯಾದಿಂದ ಭಾರತಿಯ ಕರಾವಳಿ ರಕ್ಷಣಾ ಪಡೆ ಹಡಗು ರಾಜ್ ಕಿರಣ್ ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. 

Trending News