ಹಿಂದಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದ ಸಿ.ಎನ್. ಅಣ್ಣಾದೊರೈ

ತಮಿಳುನಾಡು ಈಗ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ 111ನೇ ಜಯಂತಿಯನ್ನು ಸೆಪ್ಟಂಬರ್ 15 ರಂದು ಆಚರಿಸುತ್ತಿದೆ. ಬಹುಶಃ ದಕ್ಷಿಣ ಭಾರತದ ಅಸ್ಮಿತೆ ಪ್ರಶ್ನೆ ಬಂದಾಗಲೆಲ್ಲಾ ಅಣ್ಣಾದೊರೈ ಹೆಸರು ಆಗಾಗ ಕೇಳಿ ಬರುತ್ತಲೇ ಇರುತ್ತದೆ. 

Last Updated : Sep 15, 2019, 03:21 PM IST
ಹಿಂದಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದಿದ್ದ ಸಿ.ಎನ್. ಅಣ್ಣಾದೊರೈ  title=
Photo courtesy: Facebook

ನವದೆಹಲಿ:  ತಮಿಳುನಾಡು ಈಗ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ 111ನೇ ಜಯಂತಿಯನ್ನು ಸೆಪ್ಟಂಬರ್ 15 ರಂದು ಆಚರಿಸುತ್ತಿದೆ. ಬಹುಶಃ ದಕ್ಷಿಣ ಭಾರತದ ಅಸ್ಮಿತೆ ಪ್ರಶ್ನೆ ಬಂದಾಗಲೆಲ್ಲಾ ಅಣ್ಣಾದೊರೈ ಹೆಸರು ಆಗಾಗ ಕೇಳಿ ಬರುತ್ತಲೇ ಇರುತ್ತದೆ.

ಈಗ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣದಲ್ಲಿ ಅಣ್ಣಾ ಧೃಡವಾಗಿ ನಂಬಿದ್ದ ದ್ರಾವಿಡ್ ಅಸ್ಮಿತೆಯನ್ನು ಈಗ ಮತ್ತೆ  ಪ್ರತಿ ಪಾದಿಸಬೇಕಾಗಿದೆ. ಭಾರತಕ್ಕೆ ಇರುವ ಬಹುತ್ವ ಈಗ ಏಕರೂಪಿ ಪರಿಭಾಷೆಯಲ್ಲಿ ಮೂರ್ತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಪ್ರಾದೇಶಿಕ ಶಕ್ತಿಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಮತ್ತೆ ನಾವು ಅಣ್ಣಾದೊರೈ ಹೆಸರನ್ನು ಅನುರಣನಗೊಳಿಸಬೇಕಾಗಿದೆ. ಅಂತಹ ತುರ್ತು ಈಗ ಮತ್ತೊಮ್ಮೆ ನಮಗೆ ಎದುರಾಗಿದೆ. 

ಮೋದಿ 2.0 ಸರ್ಕಾರದ ತನ್ನ ಆರಂಭದ ದಿನಗಳಿಂದಲೇ ಬಹುತ್ವವನ್ನು ಹತ್ತಿಕ್ಕುವ ಪ್ರಯತ್ನವನ್ನು ಧರ್ಮ, ಪ್ರದೇಶ ಅಥವಾ ಭಾಷೆಯ ಮೂಲಕ ಸ್ಪಷ್ಟವಾಗಿ ಮಾಡುತ್ತಿದೆ. ಇಂತಹ ಸಿದ್ಧಾಂತದ ಅಪಾಯವನ್ನು ಅರಿತಿದ್ದ ಪೆರಿಯಾರ್, ಅಣ್ಣಾದೊರೈಯಂತವರು ಪ್ರಾರಂಭದಲ್ಲಿ ಜಸ್ಟೀಸ್ ಪಾರ್ಟಿ ಮೂಲಕ ನಂತರ ದ್ರಾವೀಡ್ ಚಳುವಳಿ ಮೂಲಕ ದಕ್ಷಿಣ ಭಾರತದ ಅಸ್ಮಿತೆಗಾಗಿ ಹೋರಾಡಿದರು.

ಸೆಪ್ಟೆಂಬರ್ 15 1909 ರಂದು ಅಣ್ಣಾದೊರೈ ಮದ್ರಾಸ್ ಪ್ರೆಸಿಡೆನ್ಸಿಯ ಕಾಂಚಿಪುರಂ ನಲ್ಲಿ ಜನಿಸಿದರು. ಪ್ರಾರಂಭದಲ್ಲಿ ಅಣ್ಣಾ ದೊರೈ ಪೆರಿಯಾರ್ ಅವರ ಜಸ್ಟೀಸ್ ಪಾರ್ಟಿ ಮೂಲಕ ರಾಜಕೀಯಕ್ಕೆ ಕಾಲಿಟ್ಟರು, ತದಂತರ ಅವರು ಅದರಿಂದ ಹೊರಬಂದು ದ್ರಾವಿಡ್ ಮುನ್ನೇತ್ರ ಕಜಮಗಂ(ಡಿಎಂಕೆ) ಪಕ್ಷವನ್ನು ಪ್ರಾರಂಭಿಸಿದರು.1938 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಆಗ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಸಿ.ರಾಜಗೋಪಾಲಚಾರಿ ಶಾಲೆಗಳಲ್ಲಿ ಕಡ್ಡಾಯ ಹಿಂದಿ ಬಳಕೆ ನೀತಿಯನ್ನು ಜಾರಿಗೆ ತಂದರು. ಆಗ ಅಣ್ಣಾದೊರೈ ಹಾಗೂ ಕವಿ ಭಾರತಿಸದನ್ ಅವರು ಹಿಂದಿ ಹೇರಿಕೆಯನ್ನು ವಿರೋಧಿಸಿ ಕಾಂಚಿಪುರಂ ನಲ್ಲಿ ಸಮ್ಮೇಳವನ್ನು ಏರ್ಪಡಿಸಿದರು.ಇದಾದ ನಂತರ 60ರ ದಶಕದಲ್ಲಿ ಹಿಂದಿಯನ್ನು ಅಧಿಕೃತ ಭಾಷೆ ಮಾಡಲು ಹೊರಟಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸಿ.ಎನ್ ಅಣ್ಣಾದೊರೈ ಮಾಡಿದ ಭಾಷಣ ಸಾಕಷ್ಟು ಗಮನ ಸೆಳೆದಿತ್ತು.

'ಹಿಂದಿಯನ್ನು ಬಹುಸಂಖ್ಯಾತರು ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಸಾಮಾನ್ಯ ಭಾಷೆಯನ್ನಾಗಿ ಮಾಡಬೇಕು ಎನ್ನುವ ವಾದವಿದೆ. ಹಾಗಾದರೆ ಇಲಿ ಹೆಚ್ಚಿನ  ಸಂಖ್ಯೆಯಲ್ಲಿ ಇರುವಾಗ ನಾವೇಕೆ ಹುಲಿಯನ್ನು ನಾವು ರಾಷ್ಟ್ರೀಯ ಪ್ರಾಣಿ ಎಂದು ಏಕೆ ಕರೆಯಬೇಕು, ಅಥವಾ ಕಾಗೆ ಸರ್ವ ವ್ಯಾಪಿಯಾಗಿರುವಾಗ ನವಿಲನ್ನು ರಾಷ್ಟ್ರೀಯ ಪಕ್ಷಿ ಎಂದು ಏಕೆ ಘೋಷಿಸಬೇಕು ?.. ಒಬ್ಬ ವ್ಯಕ್ತಿಗೆ ಎರಡು ನಾಯಿಗಳು ಇದ್ದವು- ಅದರಲ್ಲಿ ಒಂದು ದೊಡ್ಡದು  ಒಂದು ಚಿಕ್ಕದು. ಆ ವ್ಯಕ್ತಿಗೆ ತನ್ನ ಬಾಗಿಲನ್ನು ಯಾವಾಗಲೂ ತೆರೆದಿಡುವ ಬದಲು ಮನೆ ಒಳಗೆ ಮತ್ತು ಹೊರಕ್ಕೆ ಸುಲಭವಾಗಿ ಆ ನಾಯಿಗಳು ನಡೆದಾಡಲು ಬಯಸಿದ್ದನು. ಅದಕ್ಕಾಗಿ ಅವನು ರಂದ್ರದಂತಿರುವ ಎರಡು ಬಾಗಿಲುಗಳನ್ನು ನಿರ್ಮಿಸಿದನು, ಅದರಲ್ಲಿ ದೊಡ್ಡದು ದೊಡ್ಡ ನಾಯಿಗೆ ಸಣ್ಣದು ಸಣ್ಣ ನಾಯಿಗೆ ಎನ್ನುವಂತೆ ನಿರ್ಮಿಸಿದನು. ಈ ಎರಡು ರಂದ್ರದ ಬಾಗಿಲುಗಳನ್ನು ನೋಡಿದ ನೆರೆಹೊರೆಯವರು ನಕ್ಕು ಅವನನ್ನು ಮೂರ್ಖ ಎಂದು ಜರಿದರು. ದೊಡ್ಡ ಬಾಗಿಲು ಮತ್ತು ಸಣ್ಣ ಬಾಗಿಲನ್ನು ನಿರ್ಮಿಸಿರುವುದೇಕೆ? ಅಲ್ಲಿ ಬೇಕಾಗಿರುವುದು ದೊಡ್ಡ ರಂದ್ರದ ಬಾಗಿಲು, ಇದನ್ನು ದೊಡ್ಡ ಮತ್ತು ಸಣ್ಣದಿರುವ ಎರಡು ನಾಯಿಗಳು ಬಳಸಬಹುದಿತ್ತು !  ಹಿಂದಿಯನ್ನು ಭಾರತದ ಅಧಿಕೃತ ಅಥವಾ ಸಂಪರ್ಕ ಭಾಷೆಯನ್ನಾಗಿ ಮಾಡಲು ಭಾರತ ಸರ್ಕಾರದ ವಾದಗಳು ದೊಡ್ಡ ಬಾಗಿಲಿಗೆ ದೊಡ್ಡ ನಾಯಿ ಮತ್ತು ಸಣ್ಣ ಬಾಗಿಲಿಗೆ ಸಣ್ಣ ನಾಯಿ ಎನ್ನುವಷ್ಟೇ ಹಾಸ್ಯಾಸ್ಪದವಾಗಿವೆ. ಪ್ರಪಂಚದೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಅಗತ್ಯವಿದೆ ಎಂದು ಭಾರತ ಸರ್ಕಾರ ಒಪ್ಪುತ್ತದೆ ಮತ್ತು ಭಾರತದಲ್ಲಿರುವ ಪ್ರತಿಯೊಂದು ಶಾಲೆಯಲ್ಲಿ ಐದನೇ ತರಗತಿಯ ನಂತರ ಇಂಗ್ಲಿಷ್ ನ್ನು ಕಲಿಸಲಾಗುತ್ತದೆ. ಭಾರತದೊಳಗೆ ನಮ್ಮ ನಡುವೆ ಸಂವಹನ ನಡೆಸಲು ನಾವೆಲ್ಲರೂ ಹಿಂದಿಯನ್ನೂ ತಿಳಿದುಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳುತ್ತದೆ. ನಾನು ಅವರನ್ನು ಕೆಳುವುದಿಷ್ಟೇ 'ಭಾರತದ ಪ್ರತಿಯೊಂದು ಶಾಲೆಯು ಇಂಗ್ಲಿಷ್ ಕಲಿಸುತ್ತಿರುವುದರಿಂದ, ಅದನ್ನೇ ನಮ್ಮ ಸಂಪರ್ಕ ಭಾಷೆಯನ್ನಾಗಿ ಮಾಡಲು ಸಾಧ್ಯವಿಲ್ಲವೇಕೆ? ತಮಿಳರು ಪ್ರಪಂಚದ ಸಂವಹನಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಮತ್ತು ಭಾರತದೊಳಗಿನ ಸಂವಹನಕ್ಕಾಗಿ ಹಿಂದಿಯನ್ನೇಕೆ ಕಲಿಯಬೇಕು? ನಮಗೆ ದೊಡ್ಡ ನಾಯಿಗೆ ದೊಡ್ಡ ರಂದ್ರದ ಬಾಗಿಲು ಸಣ್ಣ ನಾಯಿಗೆ ನಾಯಿ ಸಣ್ಣ ರಂದ್ರದ ಬಾಗಿಲು ಬೇಕೇ? ನಾನು ಹೇಳುವುದಿಷ್ಟೇ, ಸಣ್ಣ ನಾಯಿ ದೊಡ್ಡ ಬಾಗಿಲನ್ನು ಸಹ ಬಳಸಲಿ!'  

 

Trending News