Refrigerator Blast: ಫ್ರಿಡ್ಜ್ ಸ್ಫೋಟಗೊಂಡು ಒಡಹುಟ್ಟಿದ ಮೂವರ ದಾರುಣ ಅಂತ್ಯ

ಮೃತರನ್ನು ವಿ ಗಿರಿಜಾ (63), ಅವರ ಸಹೋದರಿ  ಎಸ್ ರಾಧಾ (55) ಮತ್ತು ಅವರ ಸಹೋದರ ಎಸ್ ರಾಜ್ ಕುಮಾರ್ (48) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಮೃತ ರಾಜ್‌ಕುಮಾರ್ ಅವರ ಭಾರ್ಗವಿ ಮತ್ತು ಪುತ್ರಿ ಕೂಡ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Written by - Bhavishya Shetty | Last Updated : Nov 5, 2022, 01:34 PM IST
    • ಫ್ರಿಡ್ಜ್‌ ಸ್ಫೋಟಗೊಂಡು ಒಡಹುಟ್ಟಿದ ಮೂವರು ಸಾವು
    • ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಗುಡುವಾಂಚೇರಿಯಲ್ಲಿ ಘಟನೆ
    • ಉಸಿರುಗಟ್ಟಿ ಮೂವರು ಅಂತ್ಯ ಕಂಡಿದ್ದಾರೆ
Refrigerator Blast: ಫ್ರಿಡ್ಜ್ ಸ್ಫೋಟಗೊಂಡು ಒಡಹುಟ್ಟಿದ ಮೂವರ ದಾರುಣ ಅಂತ್ಯ title=
Blast

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಗುಡುವಾಂಚೇರಿ ಎಂಬಲ್ಲಿ ಫ್ರಿಡ್ಜ್‌ ಸ್ಫೋಟಗೊಂಡ ಪರಿಣಾಮ ಒಡಹುಟ್ಟಿದ ಮೂವರು ಸಾವನ್ನಪ್ಪಿದ್ದಾರೆ. ಈ ದುರಂತ ಕಳೆದ ದಿನ ಮುಂಜಾನೆ ನಡೆದಿದ್ದು, ಸ್ಫೋಟದಿಂದ ಮನೆತುಂಬಾ ಹೊಗೆ ಆವರಿಸಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಮೂವರು ಅಂತ್ಯ ಕಂಡಿದ್ದಾರೆ.

ಇದನ್ನೂ ಓದಿ: 130 ಜನರ ಸಾವಿಗೆ ಕಾರಣ ‘ಒರೆವಾ’ ಭ್ರಷ್ಟಾಚಾರ! 2 ಕೋಟಿಯಲ್ಲಿ ಖರ್ಚು ಮಾಡಿದ್ದು ಕೇವಲ 12 ಲಕ್ಷ..?

ಮೃತರನ್ನು ವಿ ಗಿರಿಜಾ (63), ಅವರ ಸಹೋದರಿ  ಎಸ್ ರಾಧಾ (55) ಮತ್ತು ಅವರ ಸಹೋದರ ಎಸ್ ರಾಜ್ ಕುಮಾರ್ (48) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ಮೃತ ರಾಜ್‌ಕುಮಾರ್ ಅವರ ಭಾರ್ಗವಿ ಮತ್ತು ಪುತ್ರಿ ಕೂಡ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಿರಿಜಾ ಅವರ ಪತಿ ವೆಂಕಟರಮಣ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದು, ಈ ಬಳಿಕ ತಮ್ಮ ಮಗನ ಜೊತೆ ದುಬೈಗೆ ತೆರಳಿ ಅಲ್ಲಿಯೇ ವಾಸವಾಗಿದ್ದರು. ವೆಂಕಟರಮಣ ಅವರ ಮೊದಲ ವರ್ಷದ ಪುಣ್ಯತಿಥಿ ಆಚರಣೆಗಳನ್ನು ಮಾಡಲು ನವೆಂಬರ್ 2ರಂದು ಭಾರತಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಲ್ಲಿ ಖಾಲಿಯಿದ್ದ ತಮ್ಮ ಮನೆಯಲ್ಲಿ ವಾಸವಾಗಿದ್ದರು. ಆದರೆ ಈ ಸಂದರ್ಭದಲ್ಲಿ ಫ್ರಿಡ್ಜ್ ಸ್ಫೋಟಗೊಂಡಿದ್ದು, ಪರಿಣಾಮ ಹೊಗೆ ಮನೆ ತುಂಬಾ ಆವರಿಸಿಕೊಂಡಿದೆ. ಇದರಿಂದಾಗಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತೆ; ಸಿದ್ದರಾಮಯ್ಯಗೆ ಬಿ.ಸಿ.ನಾಗೇಶ್ ಪ್ರಶ್ನೆ

ಕಳೆದ ದಿನ ಮುಂಜಾನೆ 4 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ಅಥವಾ ಫ್ರಿಡ್ಜ್‌ನಲ್ಲಿನ ವೈರ್‌ನಲ್ಲಿ ಸಮಸ್ಯೆ ಉಂಟಾಗಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News