ನವದೆಹಲಿ: ವ್ಯಕ್ತಿಯೋರ್ವನು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಕೆನ್ನೆಗೆ ಬಾರಿಸಿದ ಘಟನೆ ಮಹಾರಾಷ್ಟ್ರದ ಅಂಬರ್ನಾಥ್ ಪಟ್ಟಣದಲ್ಲಿ ನಡೆದಿದೆ.
ಶನಿವಾರದಂದು ತಡರಾತ್ರಿ ಈ ಘಟನೆ ಜರುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವ್ಯಕ್ತಿಯೊಬ್ಬ ಅವರತ್ತ ತೆರಳಿ ಅವರ ಕೆನ್ನೆ ಹೊಡೆದಿದ್ದಾನೆ ಎನ್ನಲಾಗಿದೆ.
#WATCH Maha: People thrash Pravin Gosavi, a worker of the youth wing of Republican Party of India, who slapped Union Minister & party leader Ramdas Athawale at an event in Thane y'day. Gosavi has been admitted to a hospital. FIR registered against him, investigation on. (08.12) pic.twitter.com/zvYmNaV8Wi
— ANI (@ANI) December 9, 2018
ಈ ವ್ಯಕ್ತಿಯನ್ನು ಪ್ರವೀಣ್ ಗೋಸಾವಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ಆದರೆ ಇದರ ಘಟನೆ ಹಿಂದಿನ ಉದ್ದೇಶ ಇನ್ನು ತಿಳಿದುಬಂದಿಲ್ಲ.ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಈ ಘಟನೆಯ ವಿಚಾರವಾಗಿ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.