Railway Recruitment 2021: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ

Railway Recruitment 2021: ವೆಸ್ಟರ್ನ್ ಸೆಂಟ್ರಲ್ ರೈಲ್ವೆಯಲ್ಲಿ (Western Central Railway) (Passenger Reconstruction Workshop, Bhopal) ಟ್ರೇಡ್ ಅಪ್ರೆಂಟೈಸ್  (trade apprentices) ರೈಲ್ವೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 165 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

Written by - Yashaswini V | Last Updated : Mar 1, 2021, 11:06 AM IST
  • ಅಪ್ರೆಂಟಿಸ್‌ಗಳ ಈ ನೇಮಕಾತಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ
  • ಈ ನೆಮಕಾತಿಯಾಗಿ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ
  • ಈ ನೇಮಕಾತಿ 10 ನೇ ತರಗತಿಯ ನಿಮ್ಮ ಅಂಕಗಳನ್ನು ಆಧರಿಸಿರುತ್ತದೆ
Railway Recruitment 2021: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ title=
Railway Recruitment 2021

ನವದೆಹಲಿ : Railway Recruitment 2021 : ಪಶ್ಚಿಮ ಮಧ್ಯ ರೈಲ್ವೆಯಲ್ಲಿ (Passenger Reconstruction Workshop, Bhopal) ಟ್ರೇಡ್ ಅಪ್ರೆಂಟೈಸ್  (trade apprentices) ರೈಲ್ವೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 165 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 1 ರಿಂದ ಮಾರ್ಚ್ 30, 2021 ರವರೆಗೆ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಲ್ಲಿ ನೇಮಕಾತಿ :
ಈ ನೇಮಕಾತಿಯಡಿಯಲ್ಲಿ ಫಿಟ್ಟರ್ (Fitter) , ವೆಲ್ಡರ್(Welder) (Gas & Electric), ಎಲೆಕ್ಟ್ರಿಷಿಯನ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್ (Electrician, Computer Operator & Programming Assistant), ಸೆಕ್ರೆಟರಿಯಲ್ ಅಸಿಸ್ಟೆಂಟ್ (English), ಪೇಂಟರ್ (Painter) (ಜನರಲ್), ಕಾರ್ಪೆಂಟರ್ (Carpenter), ಪಾಲಂಬರ್, ಡ್ರಾಫ್ಟ್ಮನ್ (ಸಿವಿಲ್), ಮೆಕ್ಯಾನಿಕ್ ಡೀಸೆಲ್, ಮೆಕ್ಯಾನಿಕ್ ಟ್ರ್ಯಾಕ್ಟರ್, ಆಪರೇಟರ್ ಅಡ್ವಾನ್ಸ್ಡ್ ಮೆಷಿನ್ ಟೂಲ್. ಅಪ್ರೆಂಟಿಸ್‌ಗಳ ಈ ನೇಮಕಾತಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಈ ನೇಮಕಾತಿ 10 ನೇ ತರಗತಿಯ ನಿಮ್ಮ ಅಂಕಗಳನ್ನು ಆಧರಿಸಿರುತ್ತದೆ. ಈ ಅಂಕಗಳ ಆಧಾರದ ಮೇಲೆ ಅರ್ಹತೆಯನ್ನು ರಚಿಸಲಾಗುತ್ತದೆ. ಈ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. Www.rrccr.com ಗೆ ಭೇಟಿ ನೀಡಿ ಮಾರ್ಚ್ 5 ರೊಳಗೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಹತಾ ಮಾನದಂಡ (It should be qualification) :
ಈ ಹುದ್ದೆಗಳಿಗೆ (Jobs) ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ 10 ನೇ ತರಗತಿ ಪಾಸ್ ಆಗಿರುವ ಪ್ರಮಾಣಪತ್ರ ಮತ್ತು ಹುದ್ದೆಗೆ ಸಂಬಂಧಿಸಿದ ಟ್ರೇಡ್ ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.

ಇದನ್ನೂ ಓದಿ - Jobs : ಸ್ಟಾಂಡರ್ಡ್ ಚಾರ್ಟರ್ಡ್ ನಲ್ಲಿ ಹೊಸಬರಿಗೆ ಅವಕಾಶ, ವರ್ಷಕ್ಕೆ ಸಿಟಿಸಿ 6.1 ಲಕ್ಷ
 
ವಯಸ್ಸಿನ ಮಿತಿ (This is age limit) :

  • ಈ ಹುದ್ದೆಗಳಿಗೆ (Govt Jobs) ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 15  ಮತ್ತು ಗರಿಷ್ಠ 24 ವರ್ಷಗಳಾಗಿರಬೇಕು. 22 ಫೆಬ್ರವರಿ 2021 ರಿಂದ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ.
  • ಗರಿಷ್ಠ ವಯೋಮಿತಿಯಲ್ಲಿ, ಒಬಿಸಿ ವರ್ಗಕ್ಕೆ ಮೂರು ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ವಿಭಿನ್ನ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಹತ್ತು ವರ್ಷ ವಿನಾಯಿತಿ ನೀಡಲಾಗುವುದು.

ವೇತನ (Salary) :
ಈ ನೇಮಕಾತಿ ಅಡಿಯಲ್ಲಿ ಅಭ್ಯರ್ಥಿಗಳಿಗೆ ಸ್ಟೈಫಂಡ್ ನಿಯಮಗಳ ಪ್ರಕಾರ ವೇತನ ನೀಡಲಾಗುವುದು.

ಆಯ್ಕೆ ಈ ರೀತಿ ಇರುತ್ತದೆ :
10 ನೇ ತರಗತಿ ಅಂಕಗಳು ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಐಟಿಐ ಪಾಸ್ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುವುದು. ಇದರ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.

ಇದನ್ನೂ ಓದಿ - Jobs in Indian Army : ಸೇನೆಯಲ್ಲಿ ಟೆಕ್ನಿಕಲ್ ಪದವೀಧರರಿಗೆ ಅವಕಾಶ

ಅರ್ಜಿ ಶುಲ್ಕ :

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು 170 ರೂ.

ಈ ವಿಷಯಗಳನ್ನು ನೆನಪಿನಲ್ಲಿಡಿ (Keep these things in mind) :

  • ಡಾಕ್ಯುಮೆಂಟ್ ಪರಿಶೀಲನೆಗಾಗಿ ಒಟ್ಟು ಖಾಲಿ ಹುದ್ದೆಗಳ ಒಂದೂವರೆ ಪಟ್ಟು ಅಭ್ಯರ್ಥಿಗಳನ್ನು ಕರೆಯಲಾಗುತ್ತದೆ.  
  • ಎಲ್ಲಾ ಟ್ರೇಡ್ ಗಾಗಿ ತರಬೇತಿಯ ಅವಧಿಯನ್ನು ಒಂದು ವರ್ಷ ಎಂದು ನಿಗದಿಪಡಿಸಲಾಗಿದೆ.
  • ತರಬೇತಿ ಮುಗಿದ ನಂತರ, ಯಾವುದೇ ತರಬೇತಿದಾರರಿಗೆ ನೀಡುವ ಯಾವುದೇ ಉದ್ಯೋಗವನ್ನು ಸ್ವೀಕರಿಸಲು ಉದ್ಯೋಗದಾತನು ನಿರ್ಬಂಧವನ್ನು ಹೊಂದಿರುವುದಿಲ್ಲ ಅಥವಾ ಉದ್ಯೋಗದಾತನು ನೀಡುವ ಯಾವುದೇ ಉದ್ಯೋಗವನ್ನು ಸ್ವೀಕರಿಸಲು ತರಬೇತುದಾರರನ್ನು ನಿರ್ಬಂಧಿಸುವುದಿಲ್ಲ.
  • ಆಸಕ್ತ ಅಭ್ಯರ್ಥಿಗಳು www.mponline.gov.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News