ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯಾತ್ರೆ

ಉದಯಪುರದಲ್ಲಿ ತನ್ನ ಚಿಂತನ-ಮಂಥನ ಅಧಿವೇಶನವನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ತಳಮಟ್ಟದಲ್ಲಿ ಪ್ರಸ್ತಾಪಿಸಲು ಪಾದಯಾತ್ರೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.

Written by - Zee Kannada News Desk | Last Updated : May 15, 2022, 03:41 PM IST
  • ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯಗಳಾದ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರ ಬಂದಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಹುಲ್ ಗಾಂಧಿ ಪಾದಯಾತ್ರೆ   title=

ನವದೆಹಲಿ: ಉದಯಪುರದಲ್ಲಿ ತನ್ನ ಚಿಂತನ-ಮಂಥನ ಅಧಿವೇಶನವನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ತಳಮಟ್ಟದಲ್ಲಿ ಪ್ರಸ್ತಾಪಿಸಲು ಪಾದಯಾತ್ರೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.ಆದಾಗ್ಯೂ,ಈ ಸಾಮೂಹಿಕ ಆಂದೋಲನ ಕಾರ್ಯಕ್ರಮದ ಅಂತಿಮ ಕರೆಯನ್ನು ಕಾರ್ಯಕಾರಿ ಸಮಿತಿ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: Acid Attack: ಮೂತ್ರ ವಿಸರ್ಜನೆ ನೆಪದಲ್ಲಿ ಎಸ್ಕೇಪ್‌ ಆಗಲು ಯತ್ನಿಸಿದ ಆ್ಯಸಿಡ್ ನಾಗನಿಗೆ ಗುಂಡೇಟು

ಕಾಂಗ್ರೆಸ್ ಪಕ್ಷದ`ಚಿಂತನ್ ಶಿವರ್~ಸಂದರ್ಭದಲ್ಲಿ ಯಾತ್ರೆ ಚರ್ಚೆಯ ಭಾಗವಾಗಿತ್ತು. ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಇದು ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಜನಪರ ಅಜೆಂಡಾವನ್ನು ಮುಂದಿಟ್ಟುಕೊಂಡು ಸರ್ಕಾರದ ವೈಫಲ್ಯಗಳು ಮತ್ತು ಜನರ ಕಷ್ಟಗಳನ್ನು ಎತ್ತಿ ಹಿಡಿಯಲು ರಾಜ್ಯ ನಾಯಕರಿಂದ ಒಂದೇ ಮಾದರಿಯ ಪಾದಯಾತ್ರೆಯನ್ನು ಪ್ರತಿ ರಾಜ್ಯದಲ್ಲೂ ಆಯೋಜಿಸಲಾಗುತ್ತದೆ.

ಈ ವಿಚಾರವಾಗಿ ಅಂತಿಮ ಕರೆಯನ್ನು ಕಾರ್ಯಕಾರಿ ಸಮಿತಿ ತೆಗೆದುಕೊಳ್ಳುತ್ತದೆ, ಆದಾಗ್ಯೂ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಣದುಬ್ಬರ ಮತ್ತು ಆರ್ಥಿಕ ವಿಷಯಗಳ ಕುರಿತು ಸರ್ಕಾರದ ವಿರುದ್ಧ ಸಾಮೂಹಿಕ ಆಂದೋಲನ ಕಾರ್ಯಕ್ರಮವನ್ನು ಚರ್ಚಿಸಿದ್ದಾರೆ.ರಾಹುಲ್ ಗಾಂಧಿಯವರ ಪಾದಯಾತ್ರೆಯು ಸಾಮರಸ್ಯದ ಹಿನ್ನಲೆಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಹೋದ್ಯೋಗಿಗಳು ತಮ್ಮ ಘೋಷವಾಕ್ಯದ ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಏನು ಎನ್ನುವುದು ಈಗ ಸ್ಪಷ್ಟವಾಗಿದೆ.ದೇಶವನ್ನು ಧ್ರುವೀಕರಣದ ಶಾಶ್ವತ ಸ್ಥಿತಿಯಲ್ಲಿ ಇರಿಸುವುದು, ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕಲು ಜನರನ್ನು ಒತ್ತಾಯಿಸುವುದು, ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಅಲ್ಪಸಂಖ್ಯಾತರನ್ನು ಮತ್ತು ನಮ್ಮ ಗಣರಾಜ್ಯದ ಸಮಾನ ನಾಗರಿಕರನ್ನು ಬಲಿಪಶು ಮತ್ತು ಆಗಾಗ್ಗೆ ಕ್ರೂರವಾಗಿ ಗುರಿಯಾಗಿಸುವುದಾಗಿದೆ ಎಂದು ಅವರು ಹೇಳಿದರು.ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯಗಳಾದ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರ ಬಂದಿದೆ.

ಇದನ್ನೂ ಓದಿ: ಹಲ್ಲೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ತೃತೀಯಲಿಂಗಿ ಅರ್ಚನಾ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News