ರಾಹುಲ್ ಗಾಂಧಿಯನ್ನು ನಿಪಾ ವೈರಸ್'ಗೆ ಹೋಲಿಸಿದ ಹರಿಯಾಣ ಸಚಿವ ಅನಿಲ್ ವಿಜ್

ಹರಿಯಾಣ ಕ್ಯಾಬಿನೆಟ್ ಸಚಿವ ಅನಿಲ್ ವಿಜ್ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾರಣಾಂತಿಕ ನಿಪಾ ವೈರಸ್ ಗೆ ಹೋಲಿಸಿದ್ದಾರೆ.

Last Updated : May 29, 2018, 05:52 PM IST
ರಾಹುಲ್ ಗಾಂಧಿಯನ್ನು ನಿಪಾ ವೈರಸ್'ಗೆ ಹೋಲಿಸಿದ ಹರಿಯಾಣ ಸಚಿವ ಅನಿಲ್ ವಿಜ್ title=

ಚಂಡೀಗಢ: ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಹೆಸರುವಾಸಿಯಾಗಿದ್ದ ಹರಿಯಾಣ ಕ್ಯಾಬಿನೆಟ್ ಸಚಿವ ಅನಿಲ್ ವಿಜ್ ಈಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನಿಪಾ ವೈರಸ್ಗೆ ಹೋಲಿಸಿದ್ದಾರೆ. 

"ರಾಹುಲ್ ಗಾಂಧಿ ಅವರು ನಿಪಾ ವೈರಸ್ ಗೆ ಹೋಲುತ್ತಾರೆ. ಯಾವುದೇ ರಾಜಕೀಯ ಪಕ್ಷ ಅವರ ಜೊತೆ ಕೈ ಜೋಡಿಸಿದರೂ ಅವರ(ಪಕ್ಷಗಳು) ಕತೆ ಮುಗಿಯುತ್ತದೆ(ಸೋಲುತ್ತಾರೆ)" ಎಂದು ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ. 

ಹರಿಯಾಣ ಸಚಿವ ಅನಿಲ್ ವಿಜ್ ಇಂತಹ ವಿವಾದಾತ್ಮಕ ಹೇಳಿಕೆಯನ್ನು ಇದೇ ಮೊದಲಬಾರಿಗೆ ಏನೂ ನೀಡಿಲ್ಲ. ಕಳೆದ ವರ್ಷ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವಿಚಾರ ಚರ್ಚೆಯಲ್ಲಿದ್ದಾಗ, ಪ್ರಧಾನಿ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ಸಾಧಿಸಲು ಇದು ನೆರಾವಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

ಅದಕ್ಕೂ ಮೊದಲು ರಾಹುಲ್ ಗಾಂಧಿ ತನ್ನ ನಾಯಿ ಹಾಗೂ ಅವರ ಮನೆಗೆ ಹೋಗುವವರಿಗೆ ಒಂದೇ ತಟ್ಟೆಯಲ್ಲಿ ಆಹಾರ ನೀಡುತ್ತಾರೆ. ಏಕೆಂದರೆ, ಅವರಿಗೆ ನಾಯಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಯಾವುದೇ ತಾರತಮ್ಯವಿಲ್ಲ ಎಂದಿದ್ದರು.

ಈ ರೀತಿ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಹರಿಯಾಣ ಸಚಿವ ಅನಿಲ್ ವಿಜ್ ಮತ್ತೆ ಕಾಂಗ್ರೆಸ್ ಅಧ್ಯಕ್ಷನನ್ನು ಗುರಿಯಾಗಿಸಿದ್ದಾರೆ.

Trending News