ಹೆಚ್ಚುತ್ತಿರುವ ನಿರುದ್ಯೋಗ ಬೆಳವಣಿಗೆಗೆ ರಘುರಾಮ್ ರಾಜನ್ ಆತಂಕ

ಮಾಜಿ ಆರ್ಬಿಸಿ ಗವರ್ನರ್ ರಘುರಾಮ್ ರಾಜನ್ ಹೆಚ್ಚುತ್ತಿರುವ ನಿರುದ್ಯೋಗದ ವಿಚಾರವಾಗಿ ಸರ್ಕಾರ  ಹೆಚ್ಚಿನ ಗಮನ ನೀಡದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

Last Updated : Mar 26, 2019, 02:15 PM IST
 ಹೆಚ್ಚುತ್ತಿರುವ ನಿರುದ್ಯೋಗ ಬೆಳವಣಿಗೆಗೆ ರಘುರಾಮ್ ರಾಜನ್ ಆತಂಕ title=

ನವದೆಹಲಿ: ಮಾಜಿ ಆರ್ಬಿಸಿ ಗವರ್ನರ್ ರಘುರಾಮ್ ರಾಜನ್ ಹೆಚ್ಚುತ್ತಿರುವ ನಿರುದ್ಯೋಗದ ವಿಚಾರವಾಗಿ ಸರ್ಕಾರ  ಹೆಚ್ಚಿನ ಗಮನ ನೀಡದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ತಮ್ಮ ನೂತನ ಪುಸ್ತಕ 'ದಿ ಥರ್ಡ್ ಪಿಲ್ಲರ್' ಕುರಿತಾಗಿ ಇಂಗ್ಲಿಷ್ ಚಾನಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್ ಸರ್ಕಾರ ಜಾರಿಗೆ ತಂದಿರುವ ನಿರ್ನೋಟಿಕರಣದಂತಹ ಯೋಜನೆಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕೆಂದರು.

" ಈಗಾಗಲೇ ಸಾಕಷ್ಟು ಸಮಯವನ್ನು ಕಳೆದಿದ್ದೇವೆ, ನೋಟು ನಿಷೇಧದಿಂದ ನಾವು ಏನನ್ನು ಕಲಿತಿದ್ದೇವೆ?ಅದು ಕಾರ್ಯಗತಗೊಂಡಿದೆಯೋ ಇಲ್ಲವೋ? ಅದರ ಮೂಲಕ ಕಂಡುಕೊಂಡಂತಹ ನಕಾರಾತ್ಮಕ ಹಾಗೂ ಸಕಾರಾತ್ಮಕ ಅಂಶಗಳು ಯಾವವು ಎನ್ನುವ ವಿಚಾರವಾಗಿ ಸರ್ಕಾರವು ಪರಾಮರ್ಶೆಮಾಡಬೇಕೆಂದು" ರಾಜನ್ ಅಭಿಪ್ರಾಯಪಟ್ಟಿದ್ದಾರೆ. 

ಇದೇ ವೇಳೆ ಉದ್ಯೋಗದ ಕೊರತೆ ವಿಚಾರವಾಗಿ ಮಾತನಾಡಿದ ಅವರು " ನಾವು ನೀಡಿರುವ ಅಂಕಿ ಅಂಶಗಳು ನಂಬಿಕೆಗೆ ಅರ್ಹ ಎನ್ನುವುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದು ರಾಜನ್ ಹೇಳಿದರು.

   

Trending News