ಹುಕ್ಕಾ ಬಾರ್'ಗಳಿಗೆ ಬ್ರೇಕ್ ಹಾಕಿದ ಪಂಜಾಬ್ ಸರ್ಕಾರ !

ಧೂಮಪಾನ-ಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಂಜಾಬ್ ಪಂಜಾಬ್ ಸರ್ಕಾರ ರಾಜ್ಯದಲ್ಲಿ ಹುಕ್ಕಾ ಬಾರ್'ಗಳನ್ನು ಶಾಶ್ವತವಾಗಿ ನಿಷೇಧಿಸಿದೆ.

Last Updated : Mar 19, 2018, 07:11 PM IST
ಹುಕ್ಕಾ ಬಾರ್'ಗಳಿಗೆ ಬ್ರೇಕ್ ಹಾಕಿದ ಪಂಜಾಬ್ ಸರ್ಕಾರ ! title=
Pic : ANI

ಚಂಡೀಘಢ : ಧೂಮಪಾನ-ಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಂಜಾಬ್ ಪಂಜಾಬ್ ಸರ್ಕಾರ ರಾಜ್ಯದಲ್ಲಿ ಹುಕ್ಕಾ ಬಾರ್'ಗಳನ್ನು ಶಾಶ್ವತವಾಗಿ ನಿಷೇಧಿಸಿದೆ.

ವಿವಿಧ ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ರೋಗಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ಮತ್ತು ವಾಣಿಜ್ಯ ಮತ್ತು ಉತ್ಪಾದನೆ, ಉತ್ಪಾದನೆ, ಸರಬರಾಜು ಮತ್ತು ವಿತರಣಾ ನಿಷೇಧ) ಕಾಯಿದೆ 2003 ರ ತಿದ್ದುಪಡಿಯನ್ನು ರಾಜ್ಯ ಕ್ಯಾಬಿನೆಟ್ ಅನುಮೋದಿಸುವ ಮೂಲಕ ಈ ಆದೇಶ ಹೊರಡಿಸಿದೆ. 

ಇದಕ್ಕೂ ಮುನ್ನ, ಸರ್ಕಾರ ಇಂತಹ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ಆದೇಶಗಳನ್ನು ಹೊರಡಿಸಿ, ಪ್ರತಿ ಎರಡು ತಿಂಗಳಿಗೊಮ್ಮೆ ನವೀಕರಿಸುತ್ತಿತ್ತು. ಆದರೀಗ ಅದಕ್ಕೆ ಶಾಶ್ವತವಾಗಿ ನಿರ್ಬಂಧಿಸಿದೆ. 

ಡಿಸೆಂಬರ್ 2015 ರಲ್ಲಿ, ಗುಜರಾತ್ ಸರ್ಕಾರ ರಾಜ್ಯಾದ್ಯಂತ ಹ್ಯುಕ್ಕಾ ಬಾರ್'ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದನ್ನು ಪಾಲಿಸದವರಿಗೆ ಕಠಿಣ ಶಿಕ್ಷೆಯನ್ನು ನೀಡುವುದಾಗಿ ಹೇಳಿದೆ.

Trending News