Private transport strike in Bengaluru: ಸೋಮವಾರ ಅಂದರೆ ಸೆಪ್ಟೆಂಬರ್ 11ರಂದು ಫೆಡರೇಶನ್ ಆಫ್ ಪ್ರೈವೇಟ್ ಟ್ರಾನ್ಸ್’ಪೋರ್ಟ್ ಅಸೋಸಿಯೇಷನ್ ಬಂದ್‌ಗೆ ಕರೆ ನೀಡಿರುವುದರಿಂದ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳ ಕಾರ್ಯನಿರ್ವಹಣೆಗೆ ಹೊಡೆತ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: G-20 : ರಾಜ್‌ಘಾಟ್‌ನಲ್ಲಿ ಮಾಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಶ್ವ ನಾಯಕರು
ನಗರದಲ್ಲಿ ಸಾರಿಗೆಗಾಗಿ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಕೆಲವು ಶಾಲೆಗಳು ರಜೆ ಘೋಷಿಸಿವೆ. ಇನ್ನು ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಸಹ ಬಂದ್’ಗೆ ಬೆಂಬಲವನ್ನು ನೀಡಿದ್ದರೂ ಕೂಡ ಅದರ ಎಲ್ಲಾ ಸದಸ್ಯ ಶಾಲೆಗಳಿಗೆ ರಜೆ ಘೋಷಿಸಿಲ್ಲ.
“ಖಾಸಗಿ ಸಾರಿಗೆ ಮುಷ್ಕರವು ಸೆಪ್ಟೆಂಬರ್ 11 ರಂದು ನಿಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರಬಹುದು” ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ, “ಕೆಲವು ಶಾಲೆಗಳು ರಜೆ ಘೋಷಿಸಿರುವುದರಿಂದ, ಪೋಷಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಎಲ್ಲಾ ಶಾಲೆಗಳಿಗೆ ಸಾರ್ವತ್ರಿಕ ರಜೆ ಇಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಖಾಸಗಿ ವಾಹನಗಳನ್ನು ಬಳಸಿ ಪ್ರಯಾಣಿಸುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ” ಎಂದು ಹೇಳಿದ್ದಾರೆ.
ನಿರ್ದಿಷ್ಟ ದಿನದಂದು ಮಕ್ಕಳನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡಲು ವ್ಯವಸ್ಥೆ ಮಾಡುವಂತೆ ಪಾಲಕರಿಗೆ ಕುಮಾರ್ ವಿನಂತಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 6 ದಿನ ಭಾರೀ ವರ್ಷಧಾರೆ
“ಖಾಸಗಿ ವಾಹನ ಸೇವೆಗಳು ಹೆಚ್ಚು ಅಗತ್ಯವಿರುವುದರಿಂದ ಅವರ ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ವಿನಂತಿಯೊಂದಿಗೆ ನಾವು ಬಂದ್‌ಗೆ ನಮ್ಮ ನೈತಿಕ ಬೆಂಬಲವನ್ನು ನೀಡಿದ್ದೇವೆ. ಕೆಲವು ಪೋಷಕರು ಶಾಲೆಗಳಿಗೆ ರಜೆ ನೀಡಲು ವಿನಂತಿಸಿದ್ದಾರೆ. ಇನ್ನು ಹಲವಾರು ಉದ್ಯೋಗಸ್ಥ ಪೋಷಕರು, ಸರಿಯಾದ ಸಮಯಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಲು ಮತ್ತು ಬಿಡಲು ಸಾಧ್ಯವಿಲ್ಲ. ಅನಾನುಕೂಲತೆಯನ್ನು ಪರಿಗಣಿಸಿ, ನಾವು ಅಂತಹ ಮಕ್ಕಳಿಗೆ ಅನುಮತಿ ನೀಡಿದ್ದೇವೆ” ಎಂದು ಸೆಂಟ್ರಲ್ ಬೆಂಗಳೂರಿನ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ