ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣಾರ್ಥ ಅವರ ಭಾವಚಿತ್ರವಿರುವ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು.

Last Updated : Dec 24, 2018, 02:03 PM IST
ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ title=
Photo courtesy: Twitter/@BJP4India

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಸ್ಮರಣಾರ್ಥ ಅವರ ಭಾವಚಿತ್ರವಿರುವ 100 ರೂ. ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು.

ವಾಜಪೇಯಿ ಅವರ 94ನೇ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಾಜಪೇಯಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಮೋದಿ ಅವರು, "ನಾಳೆ ಮಂಗಳವಾರ ವಾಜಪೇಯಿ ಅವರ 94ನೇ ಜನ್ಮದಿನ. ಹಾಗಾಗಿ ನಾನು ಅವರ ಸ್ಮಾರಕಕ್ಕೆ ತೆರಳಿ ಅವರು ಹಾಕಿಕೊಟ್ಟಿರುವ ಉನ್ನತ ಧ್ಯೇಯೋದ್ದೇಶಗಳ ಪಥದಲ್ಲಿ ಮುಂದುವರಿಯುತ್ತೇನೆ" ಎಂದು ಹೇಳಿದರು. 

ವಾಜಪೇಯಿ ಅವರು ತಮ್ಮ ಪಕ್ಷದ ಸಿದ್ಧಾಂತದ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರು ಕಟ್ಟಿದ್ದ ಬಿಜೆಪಿ ಇಂದು ದೊಡ್ಡ ರಾಜಕೀಯ ಪಕ್ಷವಾಗಿ ಬೆಳದಿದೆ. ಉತ್ತಮ ಭಾಷಣಕಾರರಾಗಿದ್ದ ವಾಜಪೇಯಿ ಮಾತನಾಡುತ್ತಿದ್ದರೆ ಇಡೀ ದೇಶವೇ ಕೇಳುತಿತ್ತು ಎಂದು ನರೇಂದ್ರ ಮೋದಿ ಸ್ಮರಿಸಿದರು.

ಅಜಾತಶತ್ರು ವಾಜಪೇಯಿ ಭಾವಚಿತ್ರದೊಂದಿಗೆ ಬಿಡುಗಡೆಯಾಗಲಿದೆ 100 ರೂ. ನಾಣ್ಯ!

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ, ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಉಪಸ್ಥಿತರಿದ್ದರು. 

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಆಗಸ್ಟ್ 16ರಂದು ವಾಜಪೇಯಿ(93) ನಿಧನರಾದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅಜಾತಶತ್ರುವಾಗಿ ದೇಶದ ಅಭಿವೃದ್ಧಿಗೆ ಹೋರಾಡಿದ ಅಟಲ್ ಜೀ ಜನ್ಮ ದಿನ(ಡಿಸೆಂಬರ್ 25)ವನ್ನು ಬಿಜೆಪಿ 'ಉತ್ತಮ ಆಡಳಿತ ದಿನ'ವಾಗಿ ಆಚರಿಸುತ್ತದೆ. 

Trending News