ದೆಹಲಿಯ ವಿರುಷ್ಕಾ ಅದ್ಧೂರಿ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಭೇಟಿ ಮಾಡಿ ಆಹ್ವಾನ ನೀಡಿದ್ದರು. ಇಬ್ಬರೂ ಪ್ರಧಾನಿ ಮೋದಿ ಅವರನ್ನು ತಮ್ಮ ಆರತಕ್ಷತೆಗೆ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಇಬ್ಬರನ್ನೂ ಅಭಿನಂದಿಸಿದರು. ಈ ಆರತಕ್ಷತೆ ಪಾರ್ಟಿಯಲ್ಲಿ, ರಾಷ್ಟ್ರ ಮತ್ತು ವಿದೇಶದ ಪ್ರಸಿದ್ಧ ವ್ಯಕ್ತಿಗಳ ಭಾಗವಹಿಕೆ ಸಹ ಇದೆ.

Last Updated : Dec 22, 2017, 09:45 AM IST
ದೆಹಲಿಯ ವಿರುಷ್ಕಾ ಅದ್ಧೂರಿ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ title=
Pic: Twitter

ನವ ದೆಹಲಿ: ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಗುರುವಾರ ದೆಹಲಿಯ ತಾಜ್ ಎನ್ಕ್ಲೇವ್ ನಲ್ಲಿ ತಮ್ಮ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದರು. ವಿರುಷ್ಕಾ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಪಾಲ್ಗೊಂಡಿದ್ದರು. ವಿರುಷ್ಕಾ ಈ ಆರತಕ್ಷತೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು. ಅನುಷ್ಕಾ ಕೆಂಪು ಬಣ್ಣದ ಬನಾರಸ್ ಸೀರೆ ಉಟ್ಟು, ಸಿಂಧೂರ ತಿಲಕ ಇಟ್ಟು, ಮಲ್ಲಿಗೆ ಮುಡಿದು, ಆಭರಣಗಳಿಂದ ಕಂಗೊಳಿಸಿದರೆ, ವಿರಾಟ್ ಕೊಹ್ಲಿ ಕಪ್ಪು ಬಣ್ಣದ ಶೇರ್ವಾನಿ ಮೇಲೆ ಮುದ್ರಿತ ಶಾಲು ತೊಟ್ಟು ಮಿಂಚಿದರು.

ವಿರುಷ್ಕಾರ ರಾಯಲ್ ರಿಸೆಪ್ಶನ್ ಪಾರ್ಟಿಯಲ್ಲಿ ಜಹೀರ್ ಖಾನ್, ಗೌತಮ್ ಗಂಭೀರ್, ಆಶಿಶ್ ನೆಹ್ರಾ, ವೀರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ತಮ್ಮ ಕುಟುಂಬದೊಂದಿಗೆ ಭಾಗವಹಿಸಿದರು.

ವಿರಾಟ್-ಅನುಷ್ಕಾ ಆರತಕ್ಷತೆಯನ್ನು ತಾಜ್ ಡಿಪ್ಲೊಮಾಟಿಕ್ ಎನ್ಕ್ಲೇವ್ನ ದರ್ಬಾರ್ ಹಾಲ್ನಲ್ಲಿ ನಡೆಸಲಾಯಿತು. ರಾಷ್ಟ್ರ ರಾಜಧಾನಿಯಲ್ಲಿರುವ ಈ ಲ್ಯಾವಿಶ್ ಹೋಟೆಲ್ ಅನ್ನು ಮೊಘಲ್ ಯುಗದ ವಿನ್ಯಾಸದೊಂದಿಗೆ ಅಲಂಕರಿಸಲಾಗಿದೆ. ಇದರಲ್ಲಿ ದೋಲ್ಪುರದ ಪಿಂಕ್ ಬಣ್ಣದ ಭವ್ಯವಾದ ಕಲ್ಲುಗಳಿವೆ ಮತ್ತು ವೀಕ್ಷಕನು ವೀಕ್ಷಿಸುತ್ತಲೇ ಇರಲು ಹಸಿರು ಬಣ್ಣವನ್ನು ಇಲ್ಲಿ ಕಾಣಬಹುದು. ಆಂಟಿಕ್ ತುಣುಕುಗಳು ಮತ್ತು ಕಲಾತ್ಮಕ ವಸ್ತುಗಳನ್ನು ಆಂತರಿಕ ಮತ್ತು ಕೊಠಡಿಗಳಲ್ಲಿ ಅಲಂಕರಿಸಲಾಗುತ್ತದೆ. ಹೋಟೆಲ್ನಲ್ಲಿರುವ 292 ಐಷಾರಾಮಿ ಕೊಠಡಿಗಳು ದೆಹಲಿಯನ್ನು ಸ್ಪಷ್ಟವಾಗಿ ಗೋಚರಿಸುತ್ತವೆ. ತಾಜ್ ಎನ್ಕ್ಲೇವ್ಗೆ ಅತಿ ದೊಡ್ಡ ಮತ್ತು ಅತ್ಯಂತ ದುಬಾರಿ ಸ್ಥಳವೆಂದರೆ ದರ್ಬಾರ್ ಹಾಲ್, ಅಲ್ಲಿ ವಿರಾಟ್-ಅನುಷ್ಕಾ ಆರತಕ್ಷತೆ ನಡೆಯಿತು.

ವಿರಾಟ್ ಮತ್ತು ಅನುಷ್ಕಾ ಇಬ್ಬರೂ ಎರಡು ಆರತಕ್ಷತೆಯನ್ನು ನೀಡಲಿದ್ದಾರೆ. ಮೊದಲನೆಯದು ದೆಹಲಿಯಲ್ಲಿ ನಡೆದಿದೆ ಮತ್ತು ಎರಡನೆಯದು ಮುಂಬೈನಲ್ಲಿ ನಡೆಯಲಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾದರು. ವಿರಾಟ್ ಮತ್ತು ಅನುಷ್ಕಾ ಸಂಬಂಧಿಗಳು ಮತ್ತು ಆಪ್ತ ಸ್ನೇಹಿತರ ಉಪಸ್ಥಿತಿಯಲ್ಲಿ ಇಬ್ಬರೂ ಏಳು ಸುತ್ತುಗಳನ್ನು ಸುತ್ತಿದರು. ಕೊಹ್ಲಿ-ಅನುಷ್ಕ ತಮ್ಮ ಈ ಸಂತಸವನ್ನು ಟ್ವೀಟಿಂಗ್ ಮೂಲಕ ದೃಢಪಡಿಸಿದರು. ಇಬ್ಬರು ತಮ್ಮ ಟ್ವೀಟ್ನೊಂದಿಗೆ ವಿವಾಹದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾಗ, "ಇಂದು ನಾವು ಪರಸ್ಪರ ಪ್ರೀತಿಸುತ್ತೇವೆಂದು ಭರವಸೆ ನೀಡುತ್ತೇವೆ" ಎಂದು ಹೇಳಿದರು. "ನಾವು ಈ ಸುದ್ದಿವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ, ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳ ಆಶೀರ್ವಾದದಿಂದಾಗಿ, ಈ ದಿನ ಇನ್ನಷ್ಟು ವಿಶೇಷವಾದದ್ದು ನಮ್ಮ ಪ್ರಯಾಣದ ಪ್ರಮುಖ ಭಾಗವಾಗಿರುವುದಕ್ಕೆ ಧನ್ಯವಾದಗಳು" ಎಂದು ವಿರಾಟ್ ಬರೆದಿದ್ದಾರೆ.

 

Trending News