ನವ ದೆಹಲಿ : ರಾಷ್ಟ್ರಪತಿ ರಾಮ ನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ 2018ರ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
"ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು; 2018 ಎಲ್ಲರಿಗೂ ಸಂತೋಷ, ಸ್ನೇಹ, ಸಮೃದ್ಧಿಯನ್ನು ತರಲೆಂದು ಹಾರೈಸುತ್ತೇನೆ' ಎಂದು ರಾಷ್ಟ್ರಪತಿ ತಮ್ಮ ಟ್ವಿಟರ್ ಸಂದೇಶದಲ್ಲಿ ಹೇಳಿದ್ದಾರೆ.
सभी को नव वर्ष की हार्दिक शुभकामनाएं! वर्ष 2018 में सभी देशवासियों और पूरे विश्व समुदाय के जीवन में सुख-समृद्धि, शांति और उल्लास का संचार होता रहे — राष्ट्रपति कोविन्द
— President of India (@rashtrapatibhvn) January 1, 2018
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಹ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.
I convey my warm greetings and best wishes to all our citizens on the advent of Year 2018 and let us collectively resolve to dedicate ourselves towards building a peaceful, prosperous and harmonious society. pic.twitter.com/Wn8iPZBwUw
— VicePresidentOfIndia (@VPSecretariat) January 1, 2018
ಪ್ರಧಾನಿ ಮೋದಿ ಅವರ ಟ್ವಿಟರ್ ಮೂಲಕ ಹೇಳಿರುವ ಶುಭಾಶಯದಲ್ಲಿ "ಎಲ್ಲರಿಗೂ 2018 ಆನಂದದಾಯಕ ವರ್ಷವಾಗಲೆಂದು ಹಾರೈಸುತ್ತೇನೆ; ಅಂತೆಯೇ ಅದು ಎಲ್ಲರಿಗೂ ಸಂತಸ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.
Wishing you all a happy 2018! I pray that this year brings joy, prosperity and good health in everyone's lives.
— Narendra Modi (@narendramodi) January 1, 2018