President Election 2022 : ನಿವೃತ್ತಿಯ ನಂತರ ರಾಷ್ಟ್ರಪತಿ ಕೋವಿಂದ್ ಗೆ ಲೈಫ್ ಲಾಂಗ್ ಸಿಗಲಿವೆ ಈ ಸೌಲಭ್ಯಗಳು!

ನಿವೃತ್ತಿಯ ನಂತರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ 12 ಜನಪಥ್‌ನಲ್ಲಿರುವ ನಿವಾಸದಲ್ಲಿ ವಾಸಿಸಲಿದ್ದಾರೆ, ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಆದರೆ, ಅವರ ಹೆಸರಿಗೆ ಇನ್ನೂ ಹಂಚಿಕೆಯಾಗಿಲ್ಲ. 

Written by - Channabasava A Kashinakunti | Last Updated : Jul 2, 2022, 01:52 PM IST
  • 12 ಜನಪಥದಲ್ಲಿ ಶಿಫ್ಟ್ ಆಗಬಹುದು
  • ಈ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಿದ್ದಾರೆ!
  • ಜುಲೈ 18 ರಂದು ಮತದಾನ ನಡೆಯಲಿದೆ
President Election 2022 : ನಿವೃತ್ತಿಯ ನಂತರ ರಾಷ್ಟ್ರಪತಿ ಕೋವಿಂದ್ ಗೆ ಲೈಫ್ ಲಾಂಗ್ ಸಿಗಲಿವೆ ಈ ಸೌಲಭ್ಯಗಳು! title=

President Election 2022 : ಭಾರತದಲ್ಲಿ ರಾಷ್ಟ್ರಪತಿ ದೇಶದ ಪ್ರಥಮ ಪ್ರಜೆ. ಪ್ರಸ್ತುತ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ಅವರು ದೇಶದ 14 ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಅವರ ನಿವೃತ್ತಿಗೆ ಸಿದ್ಧತೆಗಳು ನಡೆಯುತ್ತಿವೆ. ನಿವೃತ್ತಿಯಾದ ನಂತರ ರಾಷ್ಟ್ರಪತಿ ಕೋವಿಂದ್ ಅವರು ವಾಸಿಸು ಹೊಸ ಸ್ಥಳ ಯಾವುದು ಎಂಬ ಪ್ರಶ್ನೆ ಹಲವು ಜನರ ಮನಸ್ಸಿನಲ್ಲಿ ಇದೆ. ಇದಲ್ಲದೇ ಅವರಿಗೆ ಸಿಗುವ ಸೌಲಭ್ಯಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

12 ಜನಪಥದಲ್ಲಿ ಶಿಫ್ಟ್ ಆಗಬಹುದು

ಮಾಧ್ಯಮ ವರದಿಗಳ ಪ್ರಕಾರ, ನಿವೃತ್ತಿಯ ನಂತರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ 12 ಜನಪಥ್‌ನಲ್ಲಿರುವ ನಿವಾಸದಲ್ಲಿ ವಾಸಿಸಲಿದ್ದಾರೆ, ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಆದರೆ, ಅವರ ಹೆಸರಿಗೆ ಇನ್ನೂ ಹಂಚಿಕೆಯಾಗಿಲ್ಲ. 

ಈ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಿದ್ದಾರೆ!

ಪ್ರೆಸಿಡೆಂಟ್ ಎಲಿಮೆಂಟ್ಸ್ ಆಕ್ಟ್-1951 ರ ಪ್ರಕಾರ, ಭಾರತದ ರಾಷ್ಟ್ರಪತಿಗಳು ನಿವೃತ್ತಿಯ ನಂತರ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಾರೆ.

- ಮಾಸಿಕ ಪಿಂಚಣಿ
- ಇಬ್ಬರು ಕಾರ್ಯದರ್ಶಿಗಳು ಮತ್ತು ದೆಹಲಿ ಪೊಲೀಸರ ಭದ್ರತೆ
- ಕನಿಷ್ಠ 8 ಕೊಠಡಿಗಳೊಂದಿಗೆ ಸುಸಜ್ಜಿತ ಸರ್ಕಾರಿ ಬಂಗಲೆ
- 2 ಲ್ಯಾಂಡ್ ಲೈನ್ ಫೋನ್, 1 ಮೊಬೈಲ್ ಮತ್ತು 1 ಇಂಟರ್ನೆಟ್ ಸಂಪರ್ಕ
- ಉಚಿತ ನೀರು ಮತ್ತು ವಿದ್ಯುತ್
- ಕಾರುಗಳು ಮತ್ತು ಚಾಲಕರು
- ಜೀವಿತಾವಧಿಯವರೆಗೆ ರೈಲು ಮತ್ತು ವಿಮಾನಕ್ಕಾಗಿ ಉಚಿತ ಟಿಕೆಟ್
-ಅಧ್ಯಕ್ಷರ ಪತ್ನಿಗೆ ಕಾರ್ಯದರ್ಶಿ 30,000 ರೂ. ನೆರವು

ಜುಲೈ 18 ರಂದು ಮತದಾನ ನಡೆಯಲಿದೆ

ಭಾರತದ ಮುಂದಿನ ರಾಷ್ಟ್ರಪತಿ ಚುನಾವಣೆಗೆ ಜುಲೈ 18 ರಂದು ಮತದಾನ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ದಿನಾಂಕ ಜೂನ್ 15 ರಿಂದ ಪ್ರಾರಂಭವಾಯಿತು ಮತ್ತು ಅದರ ಕೊನೆಯ ದಿನಾಂಕ ಜೂನ್ 29 ಆಗಿತ್ತು. ರಾಷ್ಟ್ರಪತಿ ಚುನಾವಣೆಗೆ 98 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಮಾತ್ರ ಸರಿಯಾಗಿದೆ. ಉಳಿದ 96 ಮಂದಿಯ ನಾಮಪತ್ರಗಳು ರದ್ದಾಗಿವೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News