Pravin Togadia On Tablighi Jamaat - ಸೌದಿ ಅರೇಬಿಯಾದಲ್ಲಿ (Saudi Arabia) ತಬ್ಲಿಘಿ ಜಮಾತ್ (Tablighi Jamaat) ಅನ್ನು ನಿಷೇಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರವೀಣ್ ತೊಗಾಡಿಯಾ (Pravin Togadia) ಹೇಳಿದ್ದಾರೆ. ಭಾರತದಲ್ಲಿಯೂ ಸರ್ಕಾರವು ತಬ್ಲೀಘಿ ಜಮಾತ್ ಮತ್ತು ದಾರುಲ್ ಉಲೂಮ್ ದೇವಬಂದ್ (Darul Ulum Devband) ಅನ್ನು ನಿಷೇಧಿಸಬೇಕು. ಇಲ್ಲಿಂದ ಸಂಘಟನೆಗಳು ಸಮಾಜಕ್ಕೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಇದಲ್ಲದೇ ದೇಶದಲ್ಲಿ ಶೀಘ್ರದಲ್ಲಿಯೇ ಜನಸಂಖ್ಯಾ ನಿಯಂತ್ರಣ ಕಾನೂನನ್ನು (Population Control Law)ಜಾರಿಗೊಳಿಸುವಂತೆಯೂ ತೊಗಾಡಿಯಾ ಆಗ್ರಹಿಸಿದ್ದಾರೆ. ನಿಮಗೆ ಕಾನೂನು ಮಾಡಲು ಸಾಧ್ಯವಾಗದಿದ್ದರೆ ನಿಮ್ಮನ್ನು ಹಿಂದುತ್ವವಾದಿ (Hindutva) ಎಂದು ಕರೆಯುವುದನ್ನು ನಿಲ್ಲಿಸಿ ಎಂದು ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.
ಮಂಗಳವಾರ ಸಂಜೆ ಹರಿದ್ವಾರದ ಕಂಖಾಲ್‌ನಲ್ಲಿರುವ ಪುರುಷೋತ್ತಮ ವಿಹಾರ್‌ನಲ್ಲಿ ಸುದ್ದಿಗಾರರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಪ್ರವೀಣ್ ತೊಗಾಡಿಯಾ ಈ ವಿಷಯ ತಿಳಿಸಿದ್ದಾರೆ. ಕಾರ್ಮಿಕರ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪ್ರವೀಣ್ ತೊಗಾಡಿಯಾ, ಭಾರತದಲ್ಲಿ ಜನಸಂಖ್ಯೆ ಎರಡು ದರದಲ್ಲಿ ಏರಿಕೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ-Pralhad Joshi : ರಾಹುಲ್ ಗಾಂಧಿಯನ್ನ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
“ಇದೇ ಮೊದಲ ಬಾರಿಗೆ ಭಾರತದೊಳಗೆ ಹಿಂದೂಗಳ ಸಂಖ್ಯೆ ವೇಗವಾಗಿ ಹೆಚ್ಚಲಾರಂಭಿಸಿದೆ. 50 ವರ್ಷಗಳ ನಂತರ, ಭಾರತದಲ್ಲಿ ಹಿಂದೂಗಳು 50 ಕೋಟಿಗಿಂತ ಕಡಿಮೆ ತಲುಪಲಿದೆ. ಹೀಗಾಗಿ ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನು ಮಾಡುವುದು ಬಹಳ ಮುಖ್ಯವಾಗಿದೆ" ಎಂದು ತೊಗಾಡಿಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-Owaisi On Rahul Remarks:'ಹಿಂದೂಗಳನ್ನು ಅಧಿಕಾರಕ್ಕೆ ತನ್ನಿ' ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಈ ಹಿಂದೆ ದೇಶದಲ್ಲಿ ಜಾತ್ಯತೀತರಾಗಲು ಪೈಪೋಟಿ ನಡೆಯುತ್ತಿತ್ತು. ಆದರೆ ಈಗ ನಾನೂ ಹಿಂದೂ ಎಂದು ಹೇಳುವ ಪೈಪೋಟಿ ಶುರುವಾಗಿದೆ. ಇದರಿಂದ ನಾವು ಶೇ.50ರಷ್ಟು ಗುರಿಯನ್ನು ತಲುಪಿದ್ದೇವೆ ಎನಿಸುತ್ತಿದೆ " ಎಂದಿದ್ದಾರೆ.
ಇದನ್ನೂ ಓದಿ-Who Is Hindu?: 'ಹಿಂದೂಗಳ ಆಡಳಿತ ವಾಪಸ್ ಬರಬೇಕಿದೆ, ನಾನೂ ಹಿಂದೂ', 'ಹಿಂದೂ' ಶಬ್ದದ ರಾಹುಲ್ ಡೆಫಿನೆಶನ್ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.