ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಣಬ್ ಮುಖರ್ಜಿ ಜೊತೆಗೆ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶಮುಖ್ ಹಾಗೂ ಹಿನ್ನಲೆ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಯಿತು.
President Kovind presents Bharat Ratna to Shri Pranab Mukherjee, former President of India. A statesman and one of India’s most respected political leader, Shri Pranab Mukherjee served the nation in various capacities in his long political career spanning over five decades pic.twitter.com/41fqJlnBHS
— President of India (@rashtrapatibhvn) August 8, 2019
ದೇಶಕ್ಕೆ ದಶಕಗಳ ಸೇವೆ ಸಲ್ಲಿಸಿದ್ದಕ್ಕಾಗಿ ಮುಖರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿಸುತ್ತಾ "ಪ್ರಣಬ್ ದಾ ನಮ್ಮ ಕಾಲದ ಮಹೋನ್ನತ ರಾಜಕಾರಣಿ. ಅವರು ದಶಕಗಳವರೆಗೆ ನಿಸ್ವಾರ್ಥ ಮತ್ತು ದಣಿವರಿಯದ ಸೇವೆ ಸಲ್ಲಿಸಿದ್ದಾರೆ, ರಾಷ್ಟ್ರದ ಬೆಳವಣಿಗೆಯ ಪಥದಲ್ಲಿ ಬಲವಾದ ಹೆಗ್ಗುರುತನ್ನು ಹೊಂದಿದ್ದಾರೆ. ಅವರ ಬುದ್ಧಿವಂತಿಕೆ ಮತ್ತು ಬುದ್ಧಿಶಕ್ತಿಗೆ ಕೆಲವು ಸಾಮ್ಯತೆಗಳಿಗೆ ಅವರಿಗೆ ಭಾರತ ರತ್ನವನ್ನು ಲಭಿಸಿರುವುದು ಸಂತಸದ ವಿಷಯ' ಎಂದು ಟ್ವೀಟ್ ಮಾಡಿದ್ದರು.
President Kovind presents Bharat Ratna to Shri Nanaji Deshmukh (Posthumously). Shri Nanaji Deshmukh was an eminent social activist who devoted himself to the welfare of the society and made immense contribution in the fields of education, healthcare and rural development. pic.twitter.com/fBBsKrSjmv
— President of India (@rashtrapatibhvn) August 8, 2019
President Kovind presents Bharat Ratna to Dr Bhupen Hazarika (posthumously). A renowned singer, lyricist, musician, poet and filmmaker, Bhupen Da popularised India's musical traditions globally. pic.twitter.com/kLIg8IML8X
— President of India (@rashtrapatibhvn) August 8, 2019
ಇನ್ನು ಮುಖರ್ಜಿಯವರ ಜೊತೆ ಮರಣೋತ್ತರವಾಗಿ ಪ್ರಶಸ್ತಿ ಪಡೆದಿದ್ದ ಭೂಪೇನ್ ಹಜಾರಿಕಾ ಬಂಗಾಳ ಹಾಗೂ ಬಾಂಗ್ಲಾದೇಶದಲ್ಲಿ ಸಾಕಷ್ಟು ಜನಪ್ರೀಯತೆಯನ್ನು ಪಡೆದಿದ್ದರು. ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಜನಪದ ಸಂಗೀತ ಹಾಗೂ ಸಂಸ್ಕೃತಿಯನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ರತ್ನ ಪ್ರಶಸ್ತಿ ಪಡೆದವರಲ್ಲಿ ನಾನಾಜಿ ದೇಶಮುಖ್ ಕೂಡ ಒಬ್ಬರು. ಆರೆಸ್ಸೆಸ್ ಹಿನ್ನಲೆಯಿಂದ ಬಂದಂತಹ ಇವರು ಜಯಪ್ರಕಾಶ್ ನಾರಾಯಣ ಜೊತೆ ಸೇರಿ ತುರ್ತುಪರಿಸ್ಥಿತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. 1999 ರಿಂದ 2005 ರ ವರೆಗೆ ರಾಜ್ಯಸಭಾ ಸದಸ್ಯರಾಗಿ ಅವರು ಕಾರ್ಯನಿರ್ವಹಿಸಿದ್ದರು.