ಮುಂಬೈ: ಮಾಜಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಬಿಡುಗಡೆಗಾಗಿ ಕೇಂದ್ರವು ಶೀಘ್ರದಲ್ಲೇ ಯೋಜನೆಯನ್ನು ರೂಪಿಸುತ್ತದೆ ಎಂದು ಮಾಜಿ ನಟಿ ಪೂಜಾ ಬೇಡಿ ಆಶಯ ವ್ಯಕ್ತಪಡಿಸಿದ್ದಾರೆ.
Its been almost a month since @OmarAbdullah has been detained. He's my batchmate, & a family friend (we go back 3 generations). I hope the Govt puts a plan in place soon for his release as this clearly can't go on forever! Solutions MUST b found @Nidhi @BDUTT @PMOIndia @AmitShah
— Pooja Bedi (@poojabeditweets) September 2, 2019
ಒಮರ್ ಅಬ್ದುಲ್ಲಾ ಅವರನ್ನು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡಾಗಿನಿಂದಲೂ ಅವರು ಗೃಹ ಬಂಧನದಲ್ಲಿರಿಸಲಾಗಿದೆ. ಜಮ್ಮುಕಾಶ್ಮೀರವನ್ನು ಕೇಂದ್ರ ಸರ್ಕಾರ ಇತ್ತೀಚಿಗೆ ವಿಭಜಿಸಿ ಲಡಾಖ್ ಮತ್ತು ಕಾಶ್ಮೀರ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
ಈಗ ಪೂಜಾ ಬೇಡಿ ಪ್ರಧಾನ ಮಂತ್ರಿಗಳ ಕಚೇರಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೆಲವು ಪತ್ರಕರ್ತರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ "ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಿ ಸುಮಾರು ಒಂದು ತಿಂಗಳಾಗಿದೆ. ಅವರು ನನ್ನ ಬ್ಯಾಚ್ಮೇಟ್ ಮತ್ತು ಮೂರು ತಲೆಮಾರುಗಳಿಂದ ಕುಟುಂಬ ಸ್ನೇಹಿತ,ಈಗ ಅವರ ಬಂಧನವನ್ನು ಶಾಶ್ವತವಾಗಿ ಮುಂದುವರೆಸಲು ಸಾಧ್ಯವಿಲ್ಲದ ಕಾರಣ ಸರ್ಕಾರವು ಶೀಘ್ರದಲ್ಲೇ ತನ್ನ ಬಿಡುಗಡೆಗೆ ಒಂದು ಯೋಜನೆಯನ್ನು ರೂಪಿಸಲಿದೆ ಎಂದು ನಾನು ಭಾವಿಸುತ್ತೇನೆ! ' ಎಂದು ಬೇಡಿ ಬರೆದಿದ್ದಾರೆ.
ಒಮರ್ ಅಬ್ದುಲ್ಲಾ ಜೊತೆಗೆ, ಅವರ ತಂದೆ ಫಾರೂಕ್ ಅಬ್ದುಲ್ಲಾ, ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಬಂಧನದಲ್ಲಿದ್ದಾರೆ.