ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ನಡೆಸುತ್ತಿರುವ ಪಿತೂರಿಗಳು ಮುಗಿಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಒಂದೆಡೆ ಭಯೋತ್ಪಾದಕ ಚಟುವಟಿಕೆಗಳು ಮುಂದುವರೆದಿದ್ದರೆ, ಇನ್ನೊಂದೆಡೆ ಯುದ್ಧ ಬೆದರಿಕೆಗಳು ಇದೀಗ ಕೇಳಿಬರಲಾರಂಭಿಸಿವೆ. ಕೆಲವೊಮ್ಮೆ ಉಗ್ರರು ಈ ಬೆದರಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಪಾಕ್ ಸೇನೆ ಕೂಡ ಈ ಕಾರ್ಯದಲ್ಲಿ ನಿರತವಾಗಿದೆ. ಆದರೆ, ಇದೀಗ ಹೊಸ ಬೆದರಿಕೆಯೊಂದು ಕೇಳಿಬಂದಿದೆ. ಹೌದು, ಪಾಕ್ ಅಕ್ರಮವಾಗಿ ಆಕ್ರಮಿಸಿಕೊಂಡ ಕಾಶ್ಮೀರ ಪ್ರಾಂತ್ಯದ ಪ್ರಧಾನಿ ರಾಜಾ ಫಾರೂಕ್ ಹೈದರ್ ಈ ದುಸ್ಸಾಹಸಕ್ಕೆ ಕೈಹಾಕಿದ್ದಾನೆ.
ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯದ ಪ್ರಧಾನಿಯಾಗಿರುವ ರಾಜಾ ಫಾರೂಕ್ ಹೈದರ್, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಭಾರತದ ವಿರುದ್ಧ ಯುದ್ಧ ಸಾರುವಂತೆ ಕೇಳಿಕೊಂಡಿದ್ದಾನೆ. ಭಾರತದ ಮೇಲೆ ದಾಳಿ ನಡೆಸಲು ಇಮ್ರಾನ್ ಖಾನ್ ಪಾಕ್ ಸೇನೆಗೆ ಆದೇಶ ನೀಡಬೇಕು ಎಂದು ರಾಜಾ ಫಾರೂಕ್ ಹೈದರ್ ಹೇಳಿದ್ದಾರೆ. ಕೇವಲ ಹೇಳಿಕೆಗಳನ್ನು ನೀಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಹೀಗಾಗಿ ಇಮ್ರಾನ್ ಭಾರತದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಕೂಡ ಆತ ಹೇಳಿದ್ದಾನೆ. ಸದ್ಯ ಭಾರತ ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯದ ಕುರಿತು ಹವಾಮಾನ ಮುನ್ಸೂಚನೆಗಳ ವರದಿ ನೀಡುತ್ತಿದ್ದು, ಪಾಕಿಸ್ತಾನ ಕೂಡ ದೆಹಲಿಯ ಹವಾಮಾನ ವರದಿ ನೀಡಲು ಆರಂಭಿಸಬೇಕು ಎಂದಿದ್ದಾನೆ.
ಕೆಲವು ದಿನಗಳ ಹಿಂದೆಯಷ್ಟೇ ಭಾರತ ಪಿಒಕೆ ಯಿಂದ ಗಿಲ್ಗಿಟ್-ಬಾಲ್ಟಿಸ್ತಾನ್ ವರೆಗಿನ ಹವಾಮಾನ ವರದಿ ಪ್ರಸಾರ ಮಾಡಿತ್ತು. ಇದೆ ಕಾರಣದಿಂದ ಇದೀಗ ರಾಜಾ ಫಾರೂಕ್ ಹೈದರ್ ಉರಿದು ಹೋಗಿದ್ದಾನೆ. ಅಷ್ಟೇ ಅಲ್ಲ ಪಾಕ್ ನಲ್ಲಿಯೂ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾಹಲವೇ ಸೃಷ್ಟಿಯಾಗಿದೆ. ಜೊತೆಗೆ ತನ್ನನ್ನು ಕುರ್ಚಿಯಿಂದ ಕಿತ್ತೆಸೆದು ಭಾರತ ಪಾಕ್ ಆಕ್ರಮಿತ ಕಾಶ್ಮೀರ ಪ್ರಾಂತ್ಯದಲ್ಲಿ ಭಾರತದ ತ್ರಿವರ್ಣ ಬಾವುದ ಹಾರಿಸುವ ದಿನ ದೂರವಿಲ್ಲ ಎಂಬ ಭಯ ಇದೀಗ ರಾಜಾ ಫಾರೂಕ್ ಹೈದರ್ ಗೆ ಕಾಡಲಾರಂಭಿಸಿದೆ. ಇದೆ ಕಾರಣ ಆತ ವಿಚಲಿತನಾಗಿದ್ದು, ತನ್ನ ಯೋಗ್ಯತೆಯನ್ನು ಮರೆತು ಭಾರತಕ್ಕೆ ಬೆದರಿಕೆ ನೀಡುವಲ್ಲಿ ನಿರತನಾಗಿದ್ದಾನೆ.