Ram Mandir Bhumi Puja: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ್ ದೇವಾಲಯದ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆ ನೆರೆವೆರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮೊದಲು 'ಜೈ ಶ್ರೀ ರಾಮ್' ಘೋಷಣೆ ಮೊಳಗಿಸಿದ್ದಾರೆ. 

Last Updated : Aug 5, 2020, 03:54 PM IST
Ram Mandir Bhumi Puja: ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ವಿವರ title=

ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ  ದೇವಾಲಯಕ್ಕೆ ಶಿಲಾನ್ಯಾಸ ನಡೆಸಿದ್ದಾರೆ. ಭೂಮಿ ಬಳಿಕ  ಪಿಎಂ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರು ಮೊದಲು ತಮ್ಮ ಭಾಷಣದಲ್ಲಿ 'ಸಿಯಾವರ್ ರಾಮಚಂದ್ರ ಕಿ ಜೈ' ಎಂಬ ಘೋಷಣೆಗಳನ್ನು ಮೊಳಗಿಸಿ, ನಂತರ ತಮ್ಮ ಭಾಷಣವನ್ನು ಆರಂಭಿಸಿದರು. ಈ ಪವಿತ್ರ ಸಂದರ್ಭದಲ್ಲಿ ರಾಮ್ ಭಕ್ತರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಶ್ರೀ ರಾಮ್ ದೇವಾಲಯದ ಭೂಮಿ ಪೂಜೆ ನೆರವೇರಿಸುವುದು ನನ್ನ ಪಾಲಿಗೆ ಒಂದು ಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಶತಮಾನಗಳ ನಿರೀಕ್ಷೆ ಕೊನೆಗೊಂಡಿದ್ದು, ಸಂಪೂರ್ಣ ದೇಶಾದ್ಯಂತ ರೋಮಾಂಚಕ ವಾತಾವರಣವಿದೆ ಎಂದು ಪ್ರಧಾನಿ ಹೇಳಿದ್ದಾರೆ. 

ಇಡೀ ವಿಶ್ವಾದ್ಯಂತ ಶ್ರೀರಾಮನ ಹೆಸರು ಪ್ರತಿಧ್ವನಿಸುತ್ತಿದೆ
"ಇಂದು ಶ್ರೀರಾಮನ ಜಯಘೋಷ ಕೇವಲ ಸೀತಾ-ರಾಮರ ಭೂಮಿಯಾಗಿರುವ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವಾದ್ಯಂತ ಕೇಳಿಬರುತ್ತಿದೆ. ದೇಶದ ಎಲ್ಲ ನಾಗರಿಕರಿಗೆ ಮತ್ತು ವಿಶ್ವದ ಇತರೆ ಭಾಗಳಲ್ಲಿ ವಾಸಿಸಿರುವ ರಾಮಭಕ್ತರಿಗೆ ಈ ಶುಭ ಸಂದರ್ಭದಲ್ಲಿ ಕೋಟಿ-ಕೋಟಿ ಅಭಿನಂದನೆಗಳು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪದಾಧಿಕಾರಿಗಳು ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಮಂತ್ರಿಸಿ, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಸೌಭಾಗ್ಯದ ಸಂಗತಿಯಾಗಿದೆ. ಇದಕ್ಕಾಗಿ ನಾನು ಟ್ರಸ್ಟ್ ನ ಪದಾಧಿಕಾರಿಗಳ ಪ್ರತಿ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಪ್ರಧಾನಿ ಹೇಳಿದ್ದಾರೆ.

ಇದುವರೆಗೆ ಟೆಂಟ್ ಒಳಗಡೆ ಇದ್ದ ರಾಮ್ ಲಲ್ಲಾ ಇದೀಗ ಭವ್ಯ ದೇಗುಲದಲ್ಲಿ ಇರಲಿದ್ದಾರೆ
ಕಳೆದ ಹಲವು ವರ್ಷಗಳಿಂದ ತಟ್ಟಿ ಮತ್ತು ಟೆಂಟ್ ಕೆಳಗಡೆ ವಾಸವಾಗಿದ್ದ ರಾಮ್ ಲಲ್ಲಾಗೆ ಇದೀಗ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ಕುಸಿದು ಬೀಳುವುದು ಹಾಗೂ ಮತ್ತೆ ಎದ್ದೇಳುವುದು ಹಲವು ವರ್ಷಗಳಿಂದ ನಡೆದಿದ್ದು, ಈ ಹಸ್ತಕ್ಷೇಪದಿಂದ ಶ್ರೀರಾಮ ಮುಕ್ತನಾಗಿದ್ದಾನೆ. ದೇಶಾದ್ಯಂತ ರೋಮಾಂಚಕ ಅಲೆ ಇದೇ. ಪ್ರತಿಯೊಂದು ಮನಸ್ಸು ದೀಪಮಯವಾಗಿದೆ. ಶತಮಾನಗಳ ನಿರೀಕ್ಷೆ ಇಂದು ಅಂತ್ಯವಾಗಲಿದೆ .

ದೇವಸ್ಥಾನದ ಅಸ್ತಿತ್ವ ಮುಗಿಸಲು ಹಲವು ಪ್ರಯತ್ನಗಳು ನಡೆದಿವೆ
ಶ್ರೀರಾಮ ನಮ್ಮೆಲ್ಲರ ಮನದಲ್ಲಿ ಆಳವಾಗಿ ಬೆರೂರಿದ್ದಾನೆ. ಯಾವುದೇ ಕೆಲಸ ಆರಂಭಿಸುವುದಕ್ಕಿಂತ ಮೊದಲು ನಾವು ಪ್ರೇರಣೆಗಾಗಿ ಶ್ರೀರಾಮನ ಕಡೆಗೆ ನೋಡುತ್ತೇವೆ. ಭಗವಾನ್ ರಾಮನ ಅದ್ಭುತ ಶಕ್ತಿಯನ್ನು ನೋಡಿ. ಹಲವು ಬಾರಿ ಕಟ್ಟಡ ಧ್ವಂಸಗೊಳಿಸಲಾಯಿತು. ಅಸ್ತಿತ್ವವನ್ನು ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದವು, ಆದರೆ ರಾಮ್ ಇಂದಿಗೂ ನಮ್ಮ ಮನಸ್ಸಿನಲ್ಲಿ ಆಳವಾಗಿ ಬೆರೂರಿದ್ದಾನೆ. ಶ್ರೀರಾಮ ನಮ್ಮ ದೇಶದ ಮರ್ಯಾದಾ ಪುರುಷೋತ್ತಮನಾಗಿದ್ದಾನೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಈ ದಿನ ಕೋಟ್ಯಾಂತರ ರಾಮ ಭಕ್ತರ ಸಂಕಲ್ಪದ ಸತ್ಯತೆಗೆ ಪ್ರಮಾಣವಾಗಿದೆ
ಇಂದಿನ ದಿನ ಕೋಟ್ಯಾಂತರ ಭಕ್ತರ ಸಂಕಲ್ಪದ ಸತ್ಯದ ಪುರಾವೆಯಾಗಿದೆ. ಇಂದು ಸತ್ಯ, ಅಹಿಂಸೆ, ನಂಬಿಕೆ ಮತ್ತು ತ್ಯಾಗಕ್ಕೆ ನ್ಯಾಯಯುತ ಭಾರತದ ವಿಶಿಷ್ಟ ಕೊಡುಗೆಯಾಗಿದೆ. ಘನತೆಯ ಉದಾಹರಣೆಯನ್ನು ಶ್ರೀರಾಮ್ ಅವರ ಕೃತಿಯಲ್ಲಿ ಪ್ರಸ್ತುತಪಡಿಸಬೇಕು, ಇದೇ ಉದಾಹರಣೆಯನ್ನು ದೇಶವು ಪ್ರಸ್ತುತಪಡಿಸಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದಾಗ ಈ ಉದಾಹರಣೆಯನ್ನು ಸಹ ಪ್ರಸ್ತುತ ಪಡಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭೂಮಿ ಪೂಜೆಗೆ ಬೆಳ್ಳಿ ಸಲಿಕೆ ಮತ್ತು ಟಿಕಾವು ಬಳಸಿದ ಪ್ರಧಾನಿ ಮೋದಿ
ಭೂಮಿ ಪೂಜೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿ ಸಲಿಕೆ ಬಳಕೆ ಮಾಡಿ, ಸಿಮೆಂಟ್ ಕಾರ್ಯ ಮಾಡಲು ಬೆಳ್ಳಿಯಲ್ಲಿ ತಯಾರಿಸಲಾದ ಟಿಕಾವು ಬಳಸಿದ್ದಾರೆ. ಪೂಜೆಯ ವೇಳೆ ರಾಮ್ ಲಲ್ಲಾಗೆ ಮಕ್ಮಲ್ ವಸ್ತ್ರ ಧರಿಸಲಾಗಿತ್ತು. ಈ ವಸ್ತ್ರದ ಮೇಲೆ 9 ವಿವಿಧ ರೀತಿಯ ರತ್ನಗಳನ್ನು ಉಪಯೋಗಿಸಲಾಗಿತ್ತು.

Trending News