PM Modi: 'ಮೂರು ದೇಶಗಳ ವಿದೇಶಿ ಪ್ರವಾಸ'ಕ್ಕೆ ರೆಡಿಯಾದ ಪ್ರಧಾನಿ ಮೋದಿ!

ಪ್ಯಾರಿಸ್ ಮತ್ತು ದೆಹಲಿ ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸುವುದರಿಂದ ಹಿಡಿದು ರಕ್ಷಣೆಯವರೆಗೆ ಅನೇಕ ವಿಷಯಗಳ ಚರ್ಚೆ

Written by - Channabasava A Kashinakunti | Last Updated : Apr 4, 2021, 04:33 PM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ ತಿಂಗಳಲ್ಲಿ ಯುರೋಪ್ ಪ್ರವಾಸ
  • ಪ್ಯಾರಿಸ್ ಮತ್ತು ದೆಹಲಿ ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸುವುದರಿಂದ ಹಿಡಿದು ರಕ್ಷಣೆಯವರೆಗೆ ಅನೇಕ ವಿಷಯಗಳ ಚರ್ಚೆ
  • ಜಿ 20 ಯ ಆತಿಥ್ಯವನ್ನು ಇಟಲಿ ವಹಿಸಿಕೊಂಡಿದ್ದು ಅದು, ಅಕ್ಟೋಬರ್ 30-31ರಂದು ರೋಮ್ ನಲ್ಲಿ ನಡೆಯಲಿದೆ.
PM Modi: 'ಮೂರು ದೇಶಗಳ ವಿದೇಶಿ ಪ್ರವಾಸ'ಕ್ಕೆ ರೆಡಿಯಾದ ಪ್ರಧಾನಿ ಮೋದಿ! title=

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ-ಯುರೋಪ್ ಶೃಂಗಸಭೆಗಾಗಿ ಮೇ ತಿಂಗಳಲ್ಲಿ ಯುರೋಪ್ ಪ್ರವಾಸದಲ್ಲಿ ಕೈಗೊಳ್ಳಲಿದ್ದಾರೆ. ಈ ಸಮಯದಲ್ಲಿ  ಫ್ರಾನ್ಸ್ ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಮೇ 8 ರಂದು ಪೋರ್ಚುಗಲ್‌ನಲ್ಲಿ ನಡೆಯಲಿರುವ ಇಂಡಿಯಾ-ಯುರೋಪ್ ಶೃಂಗಸಭೆಗೆ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ಫ್ರಾನ್ಸ್ ಇದರ ಭಾಗವಾಗಲಿದೆ. ಪ್ರಧಾನಿ ಮೋದಿ ಅವರು ಕೊನೆಯ ಬಾರಿಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದು, 2019 ರಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಬಿಯರಿಟ್ಜ್‌ನಲ್ಲಿ ನಡೆದ ಜಿ 7 ಶೃಂಗಸಭೆಗೆ ಮೋದಿಯವರನ್ನ ಆಹ್ವಾನಿಸಿದ್ದರು.

 ಪ್ರಧಾನ ಮಂತ್ರಿಯ ಮೋದಿಯವರನ್ನ ಭೇಟಿಯಾಗಲು ಫ್ರೆಂಚ್ ವಿದೇಶಾಂಗ ಸಚಿವ ಜೀನ್-ಯ್ವೆಸ್ ಲೆ ಡ್ರಿಯಾನ್(Jean-Yves Le Drian) ಅವರು ಏಪ್ರಿಲ್ 13 ರಿಂದ 15 ರವರೆಗೆ ಭಾರತಕ್ಕೆ ಬರಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಅವರು ರೈಸಿನಾ ಸಂವಾದ ಮತ್ತು ಭಾರತ-ಫ್ರಾನ್ಸ್-ಆಸ್ಟ್ರೇಲಿಯಾ ವಿದೇಶಾಂಗ ಮಂತ್ರಿಗಳ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಪ್ಯಾರಿಸ್ ಮತ್ತು ದೆಹಲಿ ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸುವುದರಿಂದ ಹಿಡಿದು ರಕ್ಷಣೆ(Defence)ಯವರೆಗೆ ಅನೇಕ ವಿಷಯಗಳ ಚರ್ಚೆ ನಡೆಯಲಿದೆ.

ಭಾರತೀಯ ನೌಕಾದಳ ಏಪ್ರಿಲ್ 5 ರಿಂದ 7 ರವರೆಗೆ ಬಂಗಾಳಕೊಲ್ಲಿಯಲ್ಲಿ ಫ್ರಾನ್ಸ್ ನೇತೃತ್ವದ ಲಾ ಪೆರೋಸ್ ಸಮರಾಭ್ಯಾಸ ನಡೆಸಲಿವೆ. ಈ ಸಮರಾಭ್ಯಾಸದಲ್ಲಿ ಫ್ರಾನ್ಸ್(France) ಜೊತೆಗೆ ಕ್ವಾಡ್ ನೇವಲ್ ಹಡಗುಗಳನ್ನ ಮೊದಲ ಬಾರಿಗೆ ಬಳಸಲಾಗುತ್ತಿದೆ. ಫ್ರಾನ್ಸ್ ಭಾರತಕ್ಕೆ 36 ರಫೇಲ್ ಜೆಟ್‌ ವಿಮಾನಗಳನ್ನ ತಲುಪಿಸಿದೆ. 

ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಗೆ ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ.  ಈ ವೇಳೆ ಪ್ರಧಾನಿ ಮೋದಿ ಅವರು ಡೆನ್ಮಾರ್ಕ್(Denmark)‌ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಮುಂಬರುವ ತಿಂಗಳಲ್ಲಿ ಭಾರತ-ಯುರೋಪ್ ಗಮನ ಈ ಶೃಂಗಸಭೆಯ ಮೇಲೆ ಮುಂದುವರಿಯಲಿದೆ.

ಮೊದಲ ಶೃಂಗಸಭೆ 2018 ರಲ್ಲಿ ಸ್ಟಾಕ್ಹೋಮ್ ನಲ್ಲಿ ನಡೆಸಲಾಗಿತ್ತು. ಇಟಲಿ(Italy)ಯ ಆರೋಗ್ಯ ಶೃಂಗಸಭೆಯನ್ನ ಮೇ ತಿಂಗಳಲ್ಲಿ ಆಯೋಜಿಸಲಿದೆ, ಆದರೆ ಶೃಂಗಸಭೆಯು ವಾಸ್ತವಿಕವಾಗಿ ನಡೆಯುವ ಸಾಧ್ಯತೆಗಳಿವೆ. ಜಿ 20 ಯ ಆತಿಥ್ಯವನ್ನು ಇಟಲಿ ವಹಿಸಿಕೊಂಡಿದ್ದು ಅದು, ಅಕ್ಟೋಬರ್ 30-31ರಂದು ರೋಮ್ ನಲ್ಲಿ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News