ಅಯೋಧ್ಯೆ ರ್ಯಾಲಿಯಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾಪಿಸದ ಪ್ರಧಾನಿ ಮೋದಿ

ಅಯೋಧ್ಯೆ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಕಾಂಗ್ರೆಸ್, ಬಿಎಸ್ಪಿ,ಎಸ್ಪಿ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಆದರೆ ಅಚ್ಚರಿಯೆಂದರೆ ರಾಮಮಂದಿರ ನಿರ್ಮಾಣದ ಕುರಿತಾಗಿ ಪ್ರಸ್ತಾಪಿದೆ ಮೋದಿ ಹಿಂದೆ ಸರಿದಿದ್ದಾರೆ.ತಮ್ಮ ಭಾಷಣದುದ್ದಕ್ಕೂ ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Last Updated : May 1, 2019, 01:51 PM IST
ಅಯೋಧ್ಯೆ ರ್ಯಾಲಿಯಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾಪಿಸದ ಪ್ರಧಾನಿ ಮೋದಿ  title=
file photo

ನವದೆಹಲಿ: ಅಯೋಧ್ಯೆ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಕಾಂಗ್ರೆಸ್, ಬಿಎಸ್ಪಿ,ಎಸ್ಪಿ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಆದರೆ ಅಚ್ಚರಿಯೆಂದರೆ ರಾಮಮಂದಿರ ನಿರ್ಮಾಣದ ಕುರಿತಾಗಿ ಪ್ರಸ್ತಾಪಿದೆ ಮೋದಿ ಹಿಂದೆ ಸರಿದಿದ್ದಾರೆ.ತಮ್ಮ ಭಾಷಣದುದ್ದಕ್ಕೂ ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

"ಅದು ಎಸ್ಪಿಯಾಗಿರಬಹುದು, ಬಿಎಸ್ಪಿಯಾಗಿರಬಹುದು ಅಥವಾ ಕಾಂಗ್ರೆಸ್ ಆಗಿರಬಹುದು, ಅವರ ವಾಸ್ತವಿಕತೆಯನ್ನು ತಿಳಿಯುವುದು ಅವಶ್ಯಕ ಎಂದು ಹೇಳಿದರು. ಬೆಹನ್ ಜಿ, ಅಂಬೇಡ್ಕರ್ ಅವರ ಹೆಸರನ್ನು ಹೇಳಿಕೊಂಡು ಎಲ್ಲವನ್ನು ಅವರ ತತ್ವಗಳಿಗೆ ವಿರುದ್ಧವಾಗಿ ಮಾಡಿದ್ದಾರೆ.ಎಸ್ಪಿ ರಾಮ್ ಮನೋಹರ್ ಲೋಹಿಯಾ ಅವರ ಹೆಸರು ಬಳಸಿಕೊಂಡು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಿದೆ" ಎಂದು  ಮೋದಿ ಹೇಳಿದರು.

ಇನ್ನು ಕಾಂಗ್ರೆಸ್ ದೇಶದ ಬಡ ಜನರ ಬಗ್ಗೆ ಚಿಂತಿಸುವುದಿಲ್ಲ, ಅವರು ಕೇವಲ ಒಂದೇ ಕುಟುಂಬಕ್ಕೆ ಚಿಂತಿಸುತ್ತಾರೆ. ನಮ್ಮ ಸರ್ಕಾರ ಕಳೆದ ಐದು ವರ್ಷದಲ್ಲಿ ಬಡ ಕಾರ್ಮಿಕರ ಜೀವನವನ್ನು ಸರಳಗೋಳಿಸಲು ಶ್ರಮಿಸಿದೆ ಎಂದು ಹೇಳಿದರು.ಅಲ್ಲದೆ ಇದೇ ವೇಳೆ ಕೇಂದ್ರದಲ್ಲಿ ಬಲಿಷ್ಠ ಸರ್ಕಾರದ ಅವಶ್ಯಕತೆ ಇದೆ. ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಪಕ್ಷಗಳು ಭಯೋತ್ಪಾದನೆ ಬಗ್ಗೆ ಮೃದು ಧೋರಣೆಯನ್ನು ಹೊಂದಿರುವ ದಾಖಲೆ ಇದೆ ಎಂದು ಹೇಳಿದರು.
 

Trending News