ಮೋದಿಜಿ ರಾಜಕೀಯ ಕಡಿಮೆ ಮಾಡಿ ದೇಶದ ಮಕ್ಕಳ ಬಗ್ಗೆ ಗಮನಹರಿಸಿ- ಕಪಿಲ್ ಸಿಬಲ್

 ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ 102 ನೇ ಸ್ಥಾನಕ್ಕೆ ಕುಸಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ 'ಪ್ರಧಾನಿ ರಾಜಕೀಯದ ಬಗ್ಗೆ ಕಡಿಮೆ ಗಮನಹರಿಸಬೇಕು ಮತ್ತು ದೇಶದ ಮಕ್ಕಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದ್ದಾರೆ.

Last Updated : Oct 16, 2019, 05:58 PM IST
ಮೋದಿಜಿ ರಾಜಕೀಯ ಕಡಿಮೆ ಮಾಡಿ ದೇಶದ ಮಕ್ಕಳ ಬಗ್ಗೆ ಗಮನಹರಿಸಿ- ಕಪಿಲ್ ಸಿಬಲ್  title=

ನವದೆಹಲಿ:  ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ 102 ನೇ ಸ್ಥಾನಕ್ಕೆ ಕುಸಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ 'ಪ್ರಧಾನಿ ರಾಜಕೀಯದ ಬಗ್ಗೆ ಕಡಿಮೆ ಗಮನಹರಿಸಬೇಕು ಮತ್ತು ದೇಶದ ಮಕ್ಕಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದ್ದಾರೆ.

117 ದೇಶಗಳ ಜಾಗತಿಕ ಹಸಿವು ಸೂಚ್ಯಂಕ 2019 ರಲ್ಲಿ ಭಾರತ 102 ನೇ ಸ್ಥಾನಕ್ಕೆ ಕುಸಿದಿದ್ದು, ಇದು ನೆರೆಯ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ ಎನ್ನಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್ ಅವರು ' ಮೋದಿ ಜಿ: ರಾಜಕೀಯ ಕಡಿಮೆ ಮಾಡಿ ನಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ. ಅವರು ನಮ್ಮ ಭವಿಷ್ಯವಾಗಿದ್ದಾರೆ. ಭಾರತವು ಜಾಗತಿಕ ಹಸಿವು ಸೂಚ್ಯಂಕ (ಜಿಹೆಚ್‌ಐ) 95 ನೇ ರ್ಯಾಂಕ್ ನಿಂದ 102 ನೇ ರ್ಯಾಂಕ್ ಗೆ ಕುಸಿದಿದೆ ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.

ಬೆಲಾರಸ್, ಉಕ್ರೇನ್, ಟರ್ಕಿ, ಕ್ಯೂಬಾ ಮತ್ತು ಕುವೈತ್ ಸೇರಿದಂತೆ ಹದಿನೇಳು ದೇಶಗಳು ಜಿಹೆಚ್‌ಐ ನಲ್ಲಿ ಅಗ್ರ ಶ್ರೇಯಾಂಕವನ್ನು ಹಂಚಿಕೊಂಡಿವೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಬುಧವಾರ ತಿಳಿಸಿದೆ.

Trending News