ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತದ ಮಟ್ಟದ COVID-19 ಪರಿಶೀಲನಾ ಸಭೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರದಂದು ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್-19 ಸಂಬಂಧಿತ ಪರಿಸ್ಥಿತಿ ಮತ್ತು ಲಸಿಕೆ ಹಾಕುವಿಕೆಯನ್ನು ಪರಿಶೀಲಿಸಿದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Written by - Zee Kannada News Desk | Last Updated : Sep 10, 2021, 06:09 PM IST
  • ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರದಂದು ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್-19 ಸಂಬಂಧಿತ ಪರಿಸ್ಥಿತಿ ಮತ್ತು ಲಸಿಕೆ ಹಾಕುವಿಕೆಯನ್ನು ಪರಿಶೀಲಿಸಿದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
  • ಭಾರತ COVID -19 ರ ಎರಡನೇ ಅಲೆಯನ್ನು ಎದುರಿಸುತ್ತಿದೆ ಮತ್ತು ಅದು ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ ನಂತರ ಈ ಸಭೆ ಬಂದಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತದ ಮಟ್ಟದ COVID-19 ಪರಿಶೀಲನಾ ಸಭೆ  title=
file photo

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರದಂದು ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್-19 ಸಂಬಂಧಿತ ಪರಿಸ್ಥಿತಿ ಮತ್ತು ಲಸಿಕೆ ಹಾಕುವಿಕೆಯನ್ನು ಪರಿಶೀಲಿಸಿದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಭಾರತ COVID -19 ರ ಎರಡನೇ ಅಲೆಯನ್ನು ಎದುರಿಸುತ್ತಿದೆ ಮತ್ತು ಅದು ಇನ್ನೂ ಮುಗಿದಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ ನಂತರ ಈ ಸಭೆ ಬಂದಿದೆ.ರಾಜೇಶ್ ಭೂಷಣ್ ಅವರು 35 ಜಿಲ್ಲೆಗಳು ಇನ್ನೂ ವಾರಕ್ಕೆ ಶೇ 10 ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವಿಟಿ ದರವನ್ನು ವರದಿ ಮಾಡುತ್ತಿದ್ದು, ಇದು 30 ಜಿಲ್ಲೆಗಳಲ್ಲಿ ಐದರಿಂದ ಶೇ 10 ರಷ್ಟಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Viral Video: ಗೋಲ್ಡನ್ ಬಾಯ್ ನೀರಜ್ ಚೋಪ್ರಾಗೆ ಅಡುಗೆ ಮಾಡಿ ಉಣಬಡಿಸಿದ ಪಂಜಾಬ್ ಸಿಎಂ..!

ಭಾರತದ ವಯಸ್ಕ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಜನರು ಕನಿಷ್ಠ ಒಂದು ಡೋಸ್ ಕೊರೊನಾವೈರಸ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು 18% ರಷ್ಟು  ಜನರು ಎರಡು ಡೋಸ್ ಗಳನ್ನು ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರವು ಗುರುವಾರ ಹೇಳಿದೆ, ದೇಶದಲ್ಲಿ ನಿರ್ವಹಿಸಲಾದ ಒಟ್ಟು ಲಸಿಕೆಗಳ ಸಂಖ್ಯೆ 72 ಕೋಟಿ ದಾಟಿದೆ.

ಇದನ್ನೂ ಓದಿ:COVID-19: ಕೇಂದ್ರದಿಂದ 66 ಕೋಟಿ ಡೋಸ್‌ಗಳಷ್ಟು ಲಸಿಕೆ ಖರೀದಿಗೆ ಆರ್ಡರ್..!

ಏತನ್ಮಧ್ಯೆ, ಸೆಪ್ಟೆಂಬರ್ 10 ರಂದು, ಭಾರತವು ಕಳೆದ 24 ಗಂಟೆಗಳಲ್ಲಿ 34,973 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಸಂಖ್ಯೆಯನ್ನು 3,31,74,954 ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಸಾವಿನ ಸಂಖ್ಯೆ 4,42,009 ಕ್ಕೆ ಏರಿತು, 260 ಜನರು COVID-19 ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Controversy On Vaccine: 'ಲಸಿಕೆಯಲ್ಲಿ ಹಸುವಿನ ರಕ್ತ, ಭಾರತದಲ್ಲಿ ಬಳಕೆ ಬೇಡ '

ಕೇರಳ ಮತ್ತು ಮಹಾರಾಷ್ಟ್ರಗಳು ಪ್ರತಿದಿನ ಗರಿಷ್ಠ ಸಂಖ್ಯೆಯ ಸೋಂಕುಗಳನ್ನು ವರದಿ ಮುಂದುವರೆದಿದೆ.ಗುರುವಾರ (ಸೆಪ್ಟೆಂಬರ್ 9), ಕೇರಳವು 26,200 ಹೊಸ ಸೋಂಕುಗಳು ಮತ್ತು 125 ಸಾವುಗಳನ್ನು ವರದಿ ಮಾಡಿದೆ. 24 ಗಂಟೆಗಳ ಅವಧಿಯಲ್ಲಿ 1,56,957 ಮಾದರಿಗಳನ್ನು ಪರೀಕ್ಷಿಸಿದ ನಂತರ ರಾಜ್ಯದ ಪರೀಕ್ಷಾ ಧನಾತ್ಮಕ ದರವು ಈಗ 16.69% ಕ್ಕೆ ಏರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News