ನವದೆಹಲಿ : ಮುಂದಿನ ತಿಂಗಳು ಅಂದರೆ ಆಗಸ್ಟ್ ನಲ್ಲಿ ರೈತರಿಗೆ ಒಳ್ಳೆಯ ಸುದ್ದಿ ಸಿಗಲಿದೆ. 9ನೇ ಕಂತುಗಾಗಿ ಬಹಳ ಸಮಯದಿಂದ ಕಾಯುತ್ತಿದ್ದ ರೈತರ ಖಾತೆಗೆ 2000 ರೂಪಾಯಿ ಜಮಾ ಆಗಲಿದೆ. ಈ ಯೋಜನೆಯಡಿ ರೈತರ ಖಾತೆಯಲ್ಲಿ ಈವರೆಗೆ 8 ಕಂತುಗಳ ಹಣ ಜಮಾ ಮಾಡಲಾಗಿದೆ.
ಆಗಸ್ಟ್‌ನಲ್ಲಿ ರೈತರಿಗೆ ಉಡುಗೊರೆ :
ರೈತರ ಆರ್ಥಿಕ ಸ್ಥಿತಿ ಮತ್ತು ಅವರ ಆದಾಯವನ್ನು ಸುಧಾರಿಸಲು ಕೇಂದ್ರ ಸರ್ಕಾರವು ವಾರ್ಷಿಕವಾಗಿ 6000 ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಪಿಎಂ ಕಿಸಾನ್ ಯೋಜನೆ ನೀಡಲಾಗುತ್ತಿದೆ. ಈವರೆಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ(PM Kisan Samman Yojana) ಅಡಿ ಒಟ್ಟು 8 ಕಂತುಗಳ ಹಣ ರೈತರ ಖಾತೆಗೆ ಬಂದಿದೆ. ಈಗ ಮುಂದಿನ ಅಂದರೆ 9 ನೇ ಕಂತಿನ ಹಣ ಮುಂದಿನ ತಿಂಗಳಲ್ಲಿ ಬರಲಿದೆ.
ಇದನ್ನೂ ಓದಿ : Modi Government Big Plan: ಹೋಮ್ ಇನ್ಸೂರೆನ್ಸ್ ಯೋಜನೆ ಜಾರಿಗೆ ತರಲು ಮುಂದಾದ ಮೋದಿ ಸರ್ಕಾರ, ಎನಿರಲಿದೆ ವಿಶೇಷತೆ
ಯೋಜನೆಯ ಉದ್ದೇಶವೇನು?
ಈ ಯೋಜನೆಯ ಉದ್ದೇಶ ದೇಶದ ರೈತರ(Formers) ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ಆರ್ಥಿಕವಾಗಿ ನೇರವಾಗಿ ಸಹಾಯ ಮಾಡುವುದು. ಮುಂದಿನ ಕಂತುಗಾಗಿ ಕಾಯುತ್ತಿರುವ ರೈತರು ಮುಂದಿನ ತಿಂಗಳಲ್ಲಿ ಮತ್ತೆ ಒಳ್ಳೆಯ ಸುದ್ದಿ ಪಡೆಯಲಿದ್ದಾರೆ. ಇದಕ್ಕಾಗಿ ನೀವು ಸಹ ಅರ್ಜಿ ಸಲ್ಲಿಸಿದ್ದರೆ, ಈ ರೀತಿಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.
ನಿಮ್ಮ ಕಂತಿನ ಸ್ಥಿತಿಯನ್ನು ಹೀಗೆ ಪರಿಶೀಲಿಸಿ :
1. ನಿಮ್ಮ ಕಂತಿನ ಸ್ಥಿತಿಯನ್ನು ನೋಡಲು, ನೀವು ಮೊದಲು ವೆಬ್‌ಸೈಟ್‌ಗೆ ಹೋಗಿ.
2. ಇದರ ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್ ಕ್ಲಿಕ್ ಮಾಡಿ.
3. ಈಗ ಫಲಾನುಭವಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮೊಂದಿಗೆ ಹೊಸ ಪುಟ ತೆರೆಯುತ್ತದೆ.
5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.
ಇದನ್ನೂ ಓದಿ : DICGC Amendment Bill 2021: ಬ್ಯಾಂಕ್ ದಿವಾಳಿಯಾಗಲಿ ಅಥವಾ ಬಂದ್ ಆಗಲಿ, 90 ದಿನಗಳೊಳಗೆ ಗ್ರಾಹಕರಿಗೆ 5 ಲಕ್ಷ ರೂ. ವಿಮಾ ಮೊತ್ತ ಸಿಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.