PM Kisan: ರೈತರ ಖಾತೆ ಸೇರಿದ19,500 ಕೋಟಿ ರೂ.ಗಳ 9ನೇ ಕಂತು, ಇದುವರೆಗೆ ಯೋಜನೆಯಡಿ ಒಟ್ಟು1,16,292.88 ಕೋಟಿ ರೂ ವರ್ಗಾವಣೆ

Pradhan Mantri Kisan Samman Nidhi: ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ಅನ್ನದಾತರ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ನೇ ಕಂತನ್ನು ಆಗಸ್ಟ್ 9 ರಂದು ಮಧ್ಯಾಹ್ನ 12.35ಕ್ಕೆ ಬಿಡುಗಡೆ ಮಾಡಿದ್ದಾರೆ.

Written by - Nitin Tabib | Last Updated : Aug 9, 2021, 01:42 PM IST
  • ದೇಶಾದ್ಯಂತ ಇರುವ ರೈತರಿಗೊಂದು ಸಂತಸದ ಸುದ್ದಿ.
  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 9ನೇ ಕಂತು ಬಿಡುಗಡೆ.
  • ರೈತರ ಖಾತೆಗೆ ಒಟ್ಟು 1,16,292.88 ಕೋಟಿ ರೂ. ಬಿಡುಗಡೆ ಮಾಡಿದ ಪ್ರಧಾನಿ ಮೋದಿ.
PM Kisan: ರೈತರ ಖಾತೆ ಸೇರಿದ19,500 ಕೋಟಿ ರೂ.ಗಳ 9ನೇ ಕಂತು, ಇದುವರೆಗೆ ಯೋಜನೆಯಡಿ ಒಟ್ಟು1,16,292.88 ಕೋಟಿ ರೂ ವರ್ಗಾವಣೆ  title=
Pradhan Mantri Kisan Samman Nidhi (File Photo)

Pradhan Mantri Kisan Samman Nidhi:ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಂದು ಕಿಸಾನ್ ಸಮ್ಮಾನ್ ನಿಧಿಯ 9 ನೇ ಕಂತಿನ ಹಣವನ್ನು ಮಧ್ಯಾಹ್ನ 12.35 ಕ್ಕೆ ಬಿಡುಗಡೆ ಮಾಡಿದ್ದಾರೆ. ಕೃಷಿ ಸಚಿವಾಲಯ (Ministry Agriculture) ಮಾಡಿರುವ ಟ್ವೀಟ್ ಪ್ರಕಾರ, ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಪಿಎಂ ಕಿಸಾನ್ (PM Kisan) ಯೋಜನೆಯಡಿ ನೋಂದಾಯಿಸಲಾದ ರೈತರ ಬ್ಯಾಂಕ್ ಖಾತೆಗಳಿಗೆ 2000-2000 ರೂಗಳ ಕಂತನ್ನು ನೇರವಾಗಿ ವರ್ಗಾಯಿಸಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿಯಲ್ಲಿ ಇಂದು (ಆಗಸ್ಟ್ 9) ಹಣಕಾಸಿನ ನೆರವಿನ  (Financial Benefit) ಮುಂದಿನ ಕಂತನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಚೇರಿ (PMO) ಪ್ರಕಾರ, 9 ನೇ ಕಂತಿನ ಅಡಿಯಲ್ಲಿ 9.75 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 19,500 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವರ್ಗಾಯಿಸಲಾಗಿದೆ.

ದೇಶಾದ್ಯಂತ ಇರುವ ಅನ್ನದಾತರ ಖಾತೆಗೆ 1,16,292.88 ಕೋಟಿ ರೂ.ಗೂ ಅಧಿಕ ಹಣವನ್ನು (PM Kisan Samman Nidhi) ಪ್ರಧಾನಿ ನರೇಂದ್ರ ಮೋದಿ (Narendra Modi Government) ಬಿಡುಗಡೆ ಮಾಡಿದ್ದಾರೆ. ಆರ್ಥಿಕ ವರ್ಷ 2020-21ರಲ್ಲಿ ಒಟ್ಟು 60,437 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ-Viral Video: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ RPF ಸಿಬ್ಬಂದಿ!

ಈ ರೀತಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ
1. ನಿಮ್ಮ ಖಾತೆಗೆ ಈ ಕಂತಿನ ಹಣ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಾಳು ಮೊದಲು ನೀವು ವೆಬ್‌ಸೈಟ್‌ಗೆ ಭೇಟಿ ನೀಡಿ
2. ನಂತರ ಬಲಭಾಗದಲ್ಲಿರುವ ಫಾರ್ಮರ್ಸ್ ಕಾರ್ನರ್  (Farmers Corner) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಬಳಿಕ ಫಲಾನುಭವಿ ಸ್ಟೇಟಸ್ (Beneficiary Status) ಆಯ್ಕೆಯನ್ನು ಆರಿಸಿ
4. ಬಳಿಕ ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
5. ಈ ಪುಟದಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನೀವು ನಿಮ್ಮ ಖಾತೆಗೆ ಹಣ ಬರುತ್ತದೆಯೋ? ಇಲ್ಲವೋ? ಅಥವಾ ಎಲ್ಲಿ ಅಡಚಣೆ ಉಂಟಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ-SSLC Result 2021: ಇಂದು ಮಧ್ಯಾಹ್ನ 3.30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ, ರಿಸಲ್ಟ್ ಇಲ್ಲಿ ನೋಡಿ…

ಯೋಜನೆ 2019 ರಲ್ಲಿ ಆರಂಭವಾಯಿತು
ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi Govt) ಈ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM kisan Samman Nidhi Yojana) 24 ಫೆಬ್ರವರಿ 2019 ರಂದು ಆರಂಭಿಸಿತು. ಈ ಯೋಜನೆಯ ಉದ್ದೇಶ ದೇಶದ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ನೇರವಾಗಿ ಆರ್ಥಿಕ ಸಹಾಯ ಮಾಡುವುದು. ಇದರ ಅಡಿಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಬಾರಿ ಎರಡು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಯೋಜನೆಯ 1 ನೇ ಕಂತನ್ನು ರೈತರ ಖಾತೆಗೆ ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ, ಎರಡನೇ ಕಂತನ್ನು ಏಪ್ರಿಲ್ 1 ರಿಂದ ಜುಲೈ 31ರವರೆಗೆ ಮತ್ತು ಮೂರನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ನೀಡಲಾಗುತ್ತದೆ.

ಇದನ್ನೂ ಓದಿ-ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಮತ್ತೊಂದು ಅವಕಾಶ, Extra Offer ಅಡಿ ಚಿನ್ನ ಖರೀದಿಸಬೇಕೇ?

ಹಣ ಸಿಕ್ಕಿಲ್ಲ ಎಂದಾದರೆ ಇಲ್ಲಿ ದೂರು ಸಲ್ಲಿಸಿ
ಪಿಎಂ ಕಿಸಾನ್ ಸಮಾನ್ ನಿಧಿ ಯೋಜನೆಯ ಹೆಲ್ಪ್ ಲೈನ್ PM-Kisan Helpline No. 155261 ಅಥವಾ 1800115526 (Toll Free) ಅಥವಾ 011-23381092 ಸಂಖ್ಯೆಗಳಿಗೆ ಸಂಪರ್ಕ ಸಾಧಿಸಬಹುದು. ಇದಲ್ಲದೆ pmkisan-ict@gov.in ಗೆ ಮೇಲ್ ಕಳುಹಿಸುವ ಮೂಲಕವೂ ಕೂಡ ನೀವು ನಿಮ್ಮ ದೂರನ್ನು ಸಲ್ಲಿಸಬಹುದು. ಇನ್ನೊಂದೆಡೆ ಯಾವುದೆ ಓರ್ವ ರೈತ ಈ ಯೋಜನೆಯ ಲಾಭ ಪಡೆಯಬೇಕು ಬಯಸಿದ್ದು ಮತ್ತು ಈ ಯೋಜನೆಗೆ ಇದುವರೆಗೂ ಅರ್ಜಿ ಸಲ್ಲಿಸಿಲ್ಲ ಎಂದಾದರೆ, ಅಧಿಕೃತ ವೆಬ್ ಸೈಟ್ ಆಗಿರುವ pmkisan.gov.inಗೆ ಭೇಟಿ ನೀಡುವ ಮೂಲಕ ಅವರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News