/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ನವದೆಹಲಿ: ಚೀನಾದಲ್ಲಿ ಕರೋನಾ ವೈರಸ್ ಹರಡಿದ ಕಾರಣ, ಕಳೆದ ವಾರ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ತೈಲ ದರವನ್ನು ಇನ್ನಷ್ಟು ಇಳಿಸುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಗ್ರಾಹಕರಿಗೆ ಹೆಚ್ಚಿನ ಪರಿಹಾರ ನೀಡುತ್ತದೆ. ಏಕೆಂದರೆ ನಿರಂತರವಾಗಿ ಇಳಿಮುಖವಾಗುತ್ತಿರುವ ತೈಲ ಬೆಲೆಯಲ್ಲಿ ಸತತ ಆರನೇ ದಿನವೂ ಕಡಿತ ಕಂಡು ಬಂದಿದೆ.

ಇಂಡಿಯನ್ ಆಯಿಲ್ನ ವೆಬ್‌ಸೈಟ್ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಭಾರಿ ಇಳಿಕೆ ಕಂಡು ಬಂದಿದೆ. ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪೆಟ್ರೋಲ್(Petrol) ದರ 11-15 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ 13-15 ಪೈಸೆ ಇಳಿಕೆ ಕಂಡಿದೆ.

ದೇಶದ ರಾಜಧಾನಿಯಾದ ದೆಹಲಿಯಲ್ಲಿ ಜನವರಿ 11 ರ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 2.30 ರೂ.ಗಳಷ್ಟು ಅಗ್ಗವಾಗಿದೆ, ಆದರೆ ಡೀಸೆಲ್ ಬೆಲೆಯಲ್ಲಿ ಗ್ರಾಹಕರಿಗೆ ಲೀಟರ್‌ಗೆ 2.46 ರೂ. ಕಡಿತಗೊಂಡಿದೆ.

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 

ಚೀನಾದಲ್ಲಿ ಕರೋನಾ ವೈರಸ್ ಹರಡಿದ ಕಾರಣ ಕಚ್ಚಾ ತೈಲದ ನಿಧಾನಗತಿಯ ಬೇಡಿಕೆಯಿಂದಾಗಿ, ಅಂತರರಾಷ್ಟ್ರೀಯ ತೈಲ ಬೆಲೆಗಳು ಕಳೆದ ವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ ಐದು ಡಾಲರ್‌ಗಳಷ್ಟು ಇಳಿದವು. 

ಜಾಗತಿಕ ತೈಲ ಪೂರೈಕೆಗಿಂತ ಬೇಡಿಕೆ ಕಡಿಮೆ ಇದ್ದು, ಮುಂಬರುವ ದಿನಗಳಲ್ಲಿ ಪೂರೈಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಚ್ಚಾ ತೈಲದಲ್ಲಿ ಮೃದುಗೊಳಿಸುವಿಕೆ ಸದ್ಯಕ್ಕೆ ಮುಂದುವರಿಯಲಿದೆ ಎಂದು ಇಂಧನ ತಜ್ಞ ನರೇಂದ್ರ ತನೇಜಾ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ತೈಲ ಬೆಲೆಗಳ ಮೇಲೆ ಒತ್ತಡವಿರುತ್ತದೆ. ತೈಲ ಬೆಲೆ ಕುಸಿತದ ಪರಿಣಾಮವನ್ನು ಮುಂಬರುವ ಬಜೆಟ್‌ನಲ್ಲಿ ಕಾಣಬಹುದು ಎಂದು ಅವರು ಹೇಳಿದರು.

ಇಂದು ಪರಿಷ್ಕರಿಸಲಾದ ತೈಲ ಬೆಲೆ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 73.60 ರೂ. ಮತ್ತು ಡೀಸೆಲ್ ಲೀಟರ್‌ಗೆ 66.71 ರೂ. ಆಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್(Petrol) ದರ 76.44 ರೂ. , ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 68.93 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 73.71 66.71
ಕೊಲ್ಕತ್ತಾ 76.33 69.07
ಮುಂಬೈ 79.32 69.93
ಚೆನ್ನೈ 76.56 70.47
ಬೆಂಗಳೂರು 76.17 68.93
ಹೈದರಾಬಾದ್ 78.38 72.74
ತಿರುವನಂತಪುರಂ 77.06 71.73

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Section: 
English Title: 
Petrol-diesel price on 28th January 2020
News Source: 
Home Title: 

ನಿಮ್ಮ ತಿಂಗಳ ಖರ್ಚಿನ ಮೇಲೆ ಪ್ರಭಾವ ಬೀರಲಿದೆ ಈ ಸುದ್ದಿ

ನಿಮ್ಮ ತಿಂಗಳ ಖರ್ಚಿನ ಮೇಲೆ ಪ್ರಭಾವ ಬೀರಲಿದೆ ಈ ಸುದ್ದಿ
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ನಿಮ್ಮ ತಿಂಗಳ ಖರ್ಚಿನ ಮೇಲೆ ಪ್ರಭಾವ ಬೀರಲಿದೆ ಈ ಸುದ್ದಿ
Yashaswini V
Publish Later: 
No
Publish At: 
Tuesday, January 28, 2020 - 08:14
Created By: 
Yashaswini V
Updated By: 
Yashaswini V
Published By: 
Yashaswini V