Petrol-Diesel Price: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಶೀಘ್ರವೇ ಸರ್ಕಾರದಿಂದ ಕಡಿವಾಣ

Petrol Diesel Price - ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty On Petrol And Diesel) ಶೀಘ್ರದಲ್ಲೇ ಕಡಿಮೆ ಮಾಡಲು ಹಣಕಾಸು ಸಚಿವಾಲಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದೇ ವೇಳೆ  ಸಚಿವಾಲಯವು ಪ್ರಸ್ತುತ ರಾಜ್ಯಗಳು ಮತ್ತು ತೈಲ ಕಂಪನಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಸ್ಥಿರತೆಗಾಗಿ ಪ್ರಸ್ತುತ ಸರ್ಕಾರ ಕಾಯುತ್ತಿದೆ.

Written by - Nitin Tabib | Last Updated : Mar 2, 2021, 10:41 AM IST
  • ಶೀಘ್ರದಲ್ಲಿಯೇ ಪೆಟ್ರೋಲ್-ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತ ಸಾಧ್ಯತೆ.
  • ರಾಜ್ಯಗಳು, ತೈಲ ಕಂಪನಿಗಳೊಂದಿಗೆ ಸರ್ಕಾರ ಈ ಕುರಿತು ಚರ್ಚೆ.
  • ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರತೆಗಾಗಿ ಕಾಯುತ್ತಿರುವ ಸರ್ಕಾರ.
Petrol-Diesel Price: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ, ಶೀಘ್ರವೇ ಸರ್ಕಾರದಿಂದ ಕಡಿವಾಣ  title=
Petrol Diesel Rate Today(File Photo)

ನವದೆಹಲಿ:  Petrol Diesel Price - ಹೆಚ್ಚಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳ (Petrol-Diesel Rate) ಮಧ್ಯೆ, ಕೇಂದ್ರ ಹಣಕಾಸು ಸಚಿವಾಲಯವು ಇದೀಗ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಆಯ್ಕೆಯನ್ನು ಪರಿಗಣಿಸುತ್ತಿದೆ. ಇದು ಗಗನಮುಖಿಯಾಗಿರುವ ಪೆಟ್ರೋಲ್- ಡಿಸೇಲ್ ಬೆಲೆಯಿಂದ ಜನಸಾಮಾನ್ಯರಿಗೆ  ತಕ್ಷಣದ ಪರಿಹಾರ ನೀಡಲಿದೆ. ಮೂಲಗಳ ವರದಿ ಪ್ರಕಾರ ಕಳೆದ 10 ತಿಂಗಳುಗಳಲ್ಲಿ ಕಚ್ಚಾ ತೈಲದ ಬೆಲೆ ದ್ವಿಗುಣಗೊಂಡ ಕಾರಣ ಭಾರತದಲ್ಲಿ ಇಂಧನದ ಬೆಲೆ ಸಾಕಷ್ಟು ಹೆಚ್ಚಾಗಿದೆ, ಆದರೆ, ಪೆಟ್ರೋಲ್-ಡೀಸೆಲ್‌ನ ಚಿಲ್ಲರೆ ದರದ ಮೇಲೆ ಜನಸಾಮಾನ್ಯರು ಶೇ. 60  ರಷ್ಟು ತೆರಿಗೆ ಮತ್ತು ಸುಂಕಪಾವತಿಸಬೇಕಾಗುತ್ತಿದೆ. ಕೊರೊನಾ ವೈರಸ್ ಸಾಂಕ್ರಾಮಿಕವು ದೇಶದ ಆರ್ಥಿಕ ಚಟುವಟಿಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶವಾಗಿದೆ.

ಕಳೆದ 12 ತಿಂಗಳಲ್ಲಿ ಕೇಂದ್ರದ ಮೋದಿ ಸರ್ಕಾರ ಎರಡು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಹೀಗಾಗಿ, ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೆಲಮಟ್ಟದಲ್ಲಿದ್ದರೂ ಕೂಡ ಸಾರ್ವಜನಿಕರಿಗೆ ಪೆಟ್ರೋಲ್-ಡೀಸೆಲ್ ಬೆಲೆ ವಿಷಯದಲ್ಲಿ ಹೆಚ್ಚಿನ ಪರಿಹಾರ ಸಿಕ್ಕಿರಲಿಲ್ಲ.

ಮಾರ್ಚ್ ಮಧ್ಯದ ವೇಳೆಗೆ ನಿರ್ಧಾರ ಹೊರಬೀಳುವ ಸಾಧ್ಯತೆ
ಆದರೆ ಇದೀಗ ಕೇಂದ್ರ ಹಣಕಾಸು ಸಚಿವಾಲಯ ವಿವಿಧ ರಾಜ್ಯಗಳು, ತೈಲ ಕಂಪನಿಗಳು ಮತ್ತು ತೈಲ ಸಚಿವಾಲಯದ ಸಹಯೋಗದೊಂದಿಗೆ ತೈಲ ಬೆಳೆಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮಾರ್ಗವನ್ನು ಪರಿಗಣಿಸುತ್ತಿದೆ. ತೆರಿಗೆಯನ್ನು ಕಡಿಮೆ ಮಾಡುವುದರಿಂದ ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ ಎಂಬುದನ್ನು ಸರ್ಕಾರ  ಖಚಿತಪಡಿಸಿಕೊಳ್ಳಬೇಕಿದೆ ಎಂದು ಮೂಲವೊಂದು ಹೇಳಿದೆ, 'ಬೆಲೆಗಳನ್ನು ಹೇಗೆ ಸ್ಥಿರವಾಗಿರಿಸಿಕೊಳ್ಳಬೇಕೆಂದು ನಾವು ಚರ್ಚಿಸುತ್ತಿದ್ದೇವೆ. ಮಾರ್ಚ್ ಮಧ್ಯದ ವೇಳೆಗೆ, ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ' ಎಂದು ಅದು ಹೇಳಿದೆ.

ಹೆಸರನ್ನು ಬಹಿರಂಗ ಪಡಿಸಬಾರದು ಎಂಬ ಶರತ್ತಿನ ಮೇಲೆ ಮಾಹಿತಿ ನೀಡಿರುವ ಮೂಲವೊಂದು ತೆರಿಗೆ ಕಡಿತಕ್ಕೂ ಮೊದಲು ಪೆಟ್ರೋಲ್-ಡಿಸೇಲ್ ಬೆಲೆ (Petrol-Diesel Price) ಸ್ಥಿರವಾಗಬೇಕು ಎಂದು ಸರ್ಕಾರ ಬಯಸುತ್ತಿದೆ . ಏಕೆಂದರೆ ಆ ನಂತರ ಕೇಂದ್ರ ಸರ್ಕಾರ ತನ್ನ ತೆರಿಗೆ ಸಂರಚನೆಯಲ್ಲಿ ಯಾವುದೇ ರೀತಿಯ ಬದಲಾವಣೆ ತರಲು ಬಯಸುತ್ತಿಲ್ಲ. ಏತನ್ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಮೇಲೆ ನಿರಂತರವಾಗಿ ಏರಿಕೆಯಾಗುತ್ತಿದೆ. 

ಇದನ್ನೂ ಓದಿ- RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel

ಕೆಲ ರಾಜ್ಯಗಳು ಈಗಾಗಲೇ ತೆರಿಗೆ ಕಡಿತಗೊಳಿಸಿವೆ
ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಿತ್ತ (Finance Ministry) ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), "ಇಂಧನದ ಮೇಲಿನ ತೆರಿಗೆ ಕಡಿತದ ನಿರ್ಣಯ ಯಾವಾಗ ಬರಲಿದೆ ಎಂಬುದು ತಮಗೆ ಗೊತ್ತಿಲ್ಲ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದಾಗಿ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸುವ ಅವಶ್ಯಕತೆ ಇದೆ" ಎಂದಿದ್ದರು. ಆದರೆ, ಈಗಾಗಲೇ ಕೆಲ ರಾಜ್ಯಗಳು ಪೆಟ್ರೋಲ್-ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಯಾವಾಗ ಇಳಿಕೆಯಾಗಲಿದೆ Petrol-Diesel? ವಿತ್ತ ಸಚಿವರ ಪ್ಲಾನ್ ಏನು?

OPEC+ ಸಭೆಯಿಂದ ನಿರೀಕ್ಷೆಗಳು
ಮೂಲಗಳ ಪ್ರಕಾರ ಇಂಧನದ ತೆರಿಗೆ ಕುರಿತಾದ ನಿರ್ಣಯ ಕೈಗೊಳ್ಳಲು ಶೀಘ್ರದಲ್ಲಿಯೇ OPEC ಮತ್ತು ಇತರ ತೈಲೋತ್ಪಾದನಾ ದೇಶಗಳ ನಡುವೆ ಸಭೆ ನಡೆಯಲಿದೆ. ಈ ವಾರದಲ್ಲಿ ಈ ಸಭೆ ನಡೆಯುವ ಸಾಧ್ಯತೆ ಇದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ OPEC+ ತೈಲೋತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಅದರ ಈ ನಿರ್ಣಯದ ಬಳಿಕ ತೈಲ ಬೆಲೆಗಳಲ್ಲಿ ಸ್ಥಿರತೆ ಕಂಡುಬರುವ ಸಾಧ್ಯತೆ ಇದೆ ಎಂದಿವೆ. 

ಇದನ್ನೂ ಓದಿ- ಮೂರು ದಿನಗಳ ನಂತರ ಮತ್ತೆ Petrol ದರ ಏರಿಕೆ, ಹೊಸ ದಾಖಲೆ ನಿರ್ಮಿಸಿದ Petrol-Diesel

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News