Coronavirus ಚಿಕಿತ್ಸೆ ಕಂಡು ಹಿಡಿದ ಭಾರತ, ಈ ಔಷಧಿಗೆ ಶೇ.100ರಷ್ಟು ಸೈ ಎಂದ ಬಾಬಾ ರಾಮದೇವ್

ಝೀ ಬಿಸಿನೆಸ್ ನ ಅನಿಲ್ ಸಿಂಘ್ವಿ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸ್ವಾಮಿ ರಾಮದೇವ್, ತಮ್ಮ ಬಳಿ ಕೊರೊನಾ ವೈರಸ್ ಗೆ ಷರತ್ತುಬದ್ಧ ಚಿಕಿತ್ಸೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅವರ ಔಷಧಿ ಶೇ.100 ರಷ್ಟು ಪರಿಣಾಮಕಾರಿಯಾಗಿ ಸಾಬೀತಾಗಿದೆ ಎಂದು ಹೇಳಿದ್ದಾರೆ.

Last Updated : Jun 8, 2020, 06:16 PM IST
Coronavirus ಚಿಕಿತ್ಸೆ ಕಂಡು ಹಿಡಿದ ಭಾರತ, ಈ ಔಷಧಿಗೆ ಶೇ.100ರಷ್ಟು ಸೈ ಎಂದ ಬಾಬಾ ರಾಮದೇವ್  title=

ನವದೆಹಲಿ: ಪತಂಜಲಿ ಸಂಸ್ಥೆಯ ಸಂಸ್ಥಾಪಕ ಹಾಗೂ ಯೋಗ ಗುರು ಸ್ವಾಮಿ ರಾಮದೇವ್ ಅವರು ಹಲವು ಮಹತ್ವದ ವಿಷಯಗಳ ಕುರಿತು ನಮ್ಮ ಝೀ ಬಿಸಿನೆಸ್ ಚಾನೆಲ್ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಝೀ ಬಿಸಿನೆಸ್ ಸಂಸ್ಥೆಯ ಕಾರ್ಯನಿರ್ವಾಹಕ ಸಂಪಾದಕ ಅನೀಲ್ ಸಿಂಘ್ವಿ ಅವರ ಜೊತೆಗೆ ನಡೆಸಿರುವ  ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಬಾಬಾ ರಾಮದೇವ್, ತಮ್ಮ ಬಳಿ ಕೊರೊನಾ ವೈರಸ್ ಗೆ ಷರತ್ತುಬದ್ಧ ಚಿಕಿತ್ಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಸಂದರ್ಶನದಲ್ಲಿ ಸ್ವಾಮಿ ರಾಮ್ ದೇವ್ ಅವರಿಗೆ, ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಪತಂಜಲಿ ಯಾವ ಕೆಲಸ ಮಾಡುತ್ತಿದೆ? ಸಂಸ್ಥೆಯ ರಿಸರ್ಚ್ ಎಲ್ಲಿಯವರೆಗೆ ಬಂದಿದೆ? ಆಯುರ್ವೇದದಲ್ಲಿ ಅಥವಾ ಯೋಗದ ಬಳಿ ಅಥವಾ ಪತಂಜಲಿ ಬಳಿ ಕೊರೊನಾ ಚಿಕಿತ್ಸೆಗೆ ರಾಮಬಾಣ ಉಪಾಯವಿದೆಯೇ? ಇತ್ಯಾದಿ ಪ್ರಶ್ನೆಗಳನ್ನು ಅವರಿಗೆ ಕೇಳಲಾಗಿತ್ತು.

ಗಿಲೋಯ್ ಹಾಗೂ ಅಶ್ವಗಂಧಾದಿಂದ ಕೊರೊನಾ ಚಿಕಿತ್ಸೆ 
ಈ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸ್ವಾಮಿ ರಾಮದೇವ್, ಗಿಲೋಯ್ ಹಾಗೂ ಅಶ್ವಗಂಧಾ ಮೂಲಕ ಕೊರೊನಾ ವೈರಸ್ ಚಿಕಿತ್ಸೆಯನ್ನು ಮಾಡಬಹುದು ಎಂಬುದನ್ನು ತಾವು ಪ್ರಮಾಣೀಕರಿಸುತ್ತೇನೆ ಎಂದು ಹೇಳಿದ್ದಾರೆ. ಕೊರೊನಾ ವೈರಸ್ ದೇಶಾದ್ಯಂತ ಹರಡುವ ಮುನ್ನವೇ ಈ ಕುರಿತು ಹೇಳಿಕೆ ನೀಡಿದ್ದ ಅವರು, ಗಿಲೋಯ್ ನಲ್ಲಿ 'ಕೀನೊಕಾರ್ಟಿಸೈಡ್' ಹಾಗೂ ಅಶ್ವಗಂಧಾದಲ್ಲಿ 'ವಿಥೆನಾನ್' ಇದೆ ಎಂದು ಹೇಳಿದ್ದರು. ರಾಮ್ದೇವ್ ಅವರ ಪ್ರಕಾರ ಕೊರೊನಾ ವೈರಸ್ ನಮ್ಮ ಶರೀರಕ್ಕೆ ಹೊಕ್ಕು ಸೇಲ್ಸ್ ಹಾಗೂ ಸಿಸ್ಟಮ್ ನಿಯಂತ್ರಣವನ್ನು ತಪ್ಪಿಸುತ್ತದೆ ಹಾಗೂ ವ್ಯಾಪಕವಾಗಿ ಮಲ್ಟಿಪಲ್ ಆಗಿ ಜೀವಕೋಶಗಳನ್ನು ಹಾನಿಗೊಳಿಸುತ್ತಲೇ ಹೋಗುತ್ತದೆ. ಶರೀರದಲ್ಲಿರುವ ಈ ಸೋಂಕಿನ ಚೈನ್ ಅನ್ನು ಮುರಿಯಲು ಅಶ್ವಗಂಧಾ ಹಾಗೂ ಗಿಲೋಯ್ ಶೇ.100ರಷ್ಟು ಪರಿಣಾಮಕಾರಿಯಾಗಿವೆ ಎಂದಿದ್ದಾರೆ.

ಶೇ.100 ರಷ್ಟು ರಿಕವರಿ ರೇಟ್ 
ರಾಮದೇವ್ ಹೇಳುವ ಪ್ರಕಾರ ಈಗಾಗಲೇ ಗಿಲೋಯ್ ಹಾಗೂ ಅಶ್ವಗಂಧಾ ಅನ್ನು ರೋಗಿಗಳ ಮೇಲೆ ಟೆಸ್ಟಿಂಗ್ ನಡೆಸಲಾಗಿದ್ದು , ಇದಕ್ಕೆ ಶೇ.100 ರಷ್ಟು ರಿಕವರಿ ರೇಟ್ ಇದೆ ಎನ್ನುತ್ತಾರೆ. ರೋಗಿಗಳಿಗೆ ಖಾಲಿ ಹೊಟ್ಟೆ ಅಥವಾ ಊಟದ ಬಳಿಕ ಗಿಲೋಯ್, ಅಶ್ವಗಂಧಾ ಹಾಗೂ ತುಳಸಿ ವಟಿ ನೀಡಲಾಗಿದ್ದು, ಇದು ಶೇ.100 ರಷ್ಟು ರಿಕವರಿ ಮತ್ತು ಶೇ.೦ ಯಷ್ಟು ಡೆತ್ ರೇಟ್ ಹೊಂದಿದೆ ಎಂದು ಹೇಳಿದ್ದಾರೆ. ಸದ್ಯ ಈ ಔಷಧಿಯ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅದರ ಅಂಕಿ-ಅಂಶಗಳು ಹೊರಬೀಳಲಿವೆ. ಹಾಗೂ ಯಾವ ರೀತಿ ನಾವು ಕೊರೊನಾ ವೈರಸ್ ಅನ್ನು ಸೋಲಿಸಬಹುದು ಎಂಬುದು ಇದರಿಂದ ಸಾಬೀತಾಗಲಿದೆ ಎಂದಿದ್ದಾರೆ. ಈ ಕುರಿತಾದ ಸಂಶೋಧನೆ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಇದರ ರಿಸರ್ಚ್ ಡಾಕ್ಯುಮೆಂಟ್ ಅನ್ನು ಇಡೀ ದೇಶದ ಮುಂದೆ ಪ್ರಸ್ತುತಪಡಿಸಲಾಗುವುದು ಎಂದು ಸ್ವಾಮಿ ರಾಮದೇವ್ ಹೇಳಿದ್ದಾರೆ.

ಆಯುರ್ವೇದ ಇಡೀ ವಿಶ್ವದ ನೇತೃತ್ವ ವಹಿಸಲಿದೆ
ಆಯುರ್ವೇದದ ಕುರಿತು ಮಾತನಾಡಿರುವ ಸ್ವಾಮಿ ರಾಮದೇವ್, "ಆಯುರ್ವೇದದಲ್ಲಿ ಇಡೀ ವಿಶ್ವದ ನೇತೃತ್ವ ವಹಿಸುವ ಶಕ್ತಿ ಇದೆ. ಕೊರೊನಾಗೆ ಚಿಕಿತ್ಸೆ ನೀಡುವ ಸಂಪೂರ್ಣ ಕ್ಷಮತೆ ನಮ್ಮ ಬಳಿ ಇದೆ. ಶೀಘ್ರದಲ್ಲಿಯೇ ಪರಿಣಾಮಗಳೊಂದಿಗೆ ನಾವು ನಮ್ಮ ರಿಸರ್ಚ್ ಅನ್ನು ಜನರ ಮುಂದೆ ಇಡಲಿದ್ದೇವೆ. ರೋಗವನ್ನು ನಿಯಂತ್ರಿಸುವುದಷ್ಟೇ ಅಲ್ಲ ರೋಗವನ್ನು ನಿವಾರಿಸುವ ಸಂಪೂರ್ಣ ಕ್ಷಮತೆ ನಮ್ಮ ಬಳಿ ಇದೆ ಎಂದು ಅವರು ಹೇಳಿದ್ದಾರೆ.
 

Trending News