ದೆಹಲಿಯ ಅನಧಿಕೃತ ಕಾಲೋನಿಗಳ ರಕ್ಷಣೆಗೆ ಮುಂದಾದ ಸಂಸತ್ತು

    

Last Updated : Dec 27, 2017, 08:38 PM IST
ದೆಹಲಿಯ ಅನಧಿಕೃತ ಕಾಲೋನಿಗಳ ರಕ್ಷಣೆಗೆ ಮುಂದಾದ ಸಂಸತ್ತು title=
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯಲ್ಲಿ ಅನಧಿಕೃತ ವಸಾಹತುಗಳು ಮತ್ತು ಕೊಳೆಗೇರಿಗಳನ್ನು ರಕ್ಷಿಸಲು ಲೋಕಸಭೆಯಲ್ಲಿ  ಬುಧವಾರ ಮಸೂದೆಯೊಂದನ್ನು ಜಾರಿಗೆ ತಂದಿದೆ.

ಅಂತಹ ವಸಾಹತುಗಳನ್ನು ಕ್ರಮಬದ್ಧಗೊಳಿಸುವುದಕ್ಕೆ ಅಥವಾ ಸ್ಥಳಾಂತರಿಸಲು ಅಸ್ತಿತ್ವದಲ್ಲಿರುವ ಗಡುವು ಭಾನುವಾರ ಅಂತ್ಯಗೊಳ್ಳಲಿದೆ, ಈಗ ಅದನ್ನು ಮೂರು ವರ್ಷಗಳಿಗೆ ವಿಸ್ತರಿಸಲು ಹೊಸ ಮಸೂದೆಯನ್ನು ಜಾರಿಗೆ ತಂದಿದೆ ಇದರಿಂದ ಡಿಸೆಂಬರ್ 31, 2020 ರ ವರೆಗೆ ಪರ್ಯಾಯ ವ್ಯವಸ್ಥೆಗಳಿಗಾಗಿ ಅವಧಿಯನ್ನು ವಿಸ್ತರಿಸಲಾಗಿದೆ 

ಶುಕ್ರವಾರದಂದು  ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೋಕಸಭೆಯಲ್ಲಿ ದೆಹಲಿಯ ಕಾನೂನುಗಳು (ವಿಶೇಷ ನಿಬಂಧನೆಗಳು) ಎರಡನೇ (ತಿದ್ದುಪಡಿ) ಮಸೂದೆಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ಸಂಬಂಧ ಪಟ್ಟ ಮಸೂದೆಯನ್ನು ಸಂಸತ್ತಿನಲ್ಲಿ  ಮಂಡಿಸಿದ್ದರು. ಕಳೆದ ವಾರ ಕೇಂದ್ರ ಸಚಿವ ಸಂಪುಟದಿಂದ ಈ ಮಸೂದೆ ಗೆ ಅನುಮೋದನೆ ನೀಡಿದೆ ಎಂದು ಹೇಳಲಾಗುತ್ತಿದೆ.   

ಇದು ಕಾನೂನಾಗಿ ಜಾರಿಗೆ ಬಂದರೆ , ಡಿಸೆಂಬರ್ 2020 ರ ಅಂತ್ಯದವರೆಗೂ ಸ್ಥಳೀಯ ಅಧಿಕಾರಿಗಳ ದಂಡನಾತ್ಮಕ ಕ್ರಮದಿಂದ ಕೊಳಗೆರಿಯಲ್ಲಿರುವ ಜನರಿಗೆ  ರಕ್ಷಣೆ ನೀಡಿದ ಹಾಗೆ ಆಗುತ್ತದೆ. 

Trending News