Aadhaar-PAN ಲಿಂಕ್‌ಗೆ ಸಂಬಂಧಿಸಿದಂತೆ ತಿಳಿಯಲೇಬೇಕಾದ ಮಾಹಿತಿ

ಪ್ಯಾನ್-ಆಧಾರ್ ಲಿಂಕ್ ಬಗ್ಗೆ ಗುಜರಾತ್ ಹೈಕೋರ್ಟ್ (Gujarat Highcourt) ಮಹತ್ವದ ಆದೇಶ ನೀಡಿದೆ. 

Last Updated : Jan 24, 2020, 11:14 AM IST
Aadhaar-PAN ಲಿಂಕ್‌ಗೆ ಸಂಬಂಧಿಸಿದಂತೆ ತಿಳಿಯಲೇಬೇಕಾದ ಮಾಹಿತಿ title=

ನವದೆಹಲಿ: ಪ್ಯಾನ್-ಆಧಾರ್ ಲಿಂಕ್ ಬಗ್ಗೆ ಗುಜರಾತ್ ಹೈಕೋರ್ಟ್ (Gujarat Highcourt) ತೀರ್ಪು ನೀಡಿದ್ದು, 31 ಮಾರ್ಚ್ 2020 ರೊಳಗೆ ಒಬ್ಬ ವ್ಯಕ್ತಿಯು ಪ್ಯಾನ್ ಅನ್ನು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಅವರ ಪ್ಯಾನ್ ಕಾರ್ಡ್ ರದ್ದುಗೊಳ್ಳುವುದಿಲ್ಲ ಎಂದು ನ್ಯಾಯಾಲಯ ಹೇಳುತ್ತದೆ. ಅಂತಹ ವ್ಯಕ್ತಿಯನ್ನು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದನ್ನು ಅಥವಾ ಹಣಕಾಸಿನ ವಹಿವಾಟಿನಲ್ಲಿ ಪ್ಯಾನ್ ಬಳಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

1. ಆಧಾರ್ ಕಾಯ್ದೆ:
ಆಧಾರ್ ಕಾಯ್ದೆ ಕುರಿತು ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿರುವ ಬಗ್ಗೆ ಉಲ್ಲೇಖಿಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಳ್ಳುವವರೆಗೆ, ಆಧಾರ್‌ಗೆ ಲಿಂಕ್‌ ಮಾಡಿಲ್ಲದ ಯಾವುದೇ ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದಿಲ್ಲ. ಅಲ್ಲದೆ ಅದನ್ನು ಡೀಫಾಲ್ಟರ್ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

2. 2018 ರಲ್ಲಿ ಬಂದ ಆದೇಶ:
ಆದಾಯ ತೆರಿಗೆ ಇಲಾಖೆ ಪ್ಯಾನ್ ಅನ್ನು ಆಧಾರ್‌ಗೆ ಸಂಪರ್ಕಿಸುವ ಗಡುವನ್ನು ಹಲವು ಬಾರಿ ವಿಸ್ತರಿಸಿದೆ. ಜೂನ್ 2018 ರಲ್ಲಿ, ಪ್ರತಿ ಪ್ಯಾನ್ ಕಾರ್ಡ್ ಹೊಂದಿರುವವರು 31 ಮಾರ್ಚ್ 2019 ರೊಳಗೆ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬೇಕಾಗುತ್ತದೆ ಎಂದು ಹೇಳಲಾಗಿತ್ತು. ಅದರ ದಿನಾಂಕವನ್ನು ಈಗ 31 ಮಾರ್ಚ್ 2020 ವರೆಗೆ ವಿಸ್ತರಿಸಲಾಗಿದೆ.

3. ಮಾರ್ಚ್ 31 ರೊಳಗೆ ಲಿಂಕ್:
'ಆಧಾರ್ ಬಗ್ಗೆ ಮಾಹಿತಿ ನೀಡುವ ಮತ್ತು ಪ್ಯಾನ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕ 2020 ಮಾರ್ಚ್ 31 ಆಗಿದೆ' ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿಕೆ ತಿಳಿಸಿದೆ.

4. ಐಟಿಆರ್‌ಗೆ ಅಗತ್ಯ:
1 ಏಪ್ರಿಲ್ 2019 ರಿಂದ ಆದಾಯ ತೆರಿಗೆ ರಿಟರ್ನ್ಸ್ ಭರ್ತಿ ಮಾಡುವಾಗ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಅಗತ್ಯ ಎಂದು ಸಿಬಿಡಿಟಿ ಸ್ಪಷ್ಟಪಡಿಸಿತ್ತು. ಇದಿಲ್ಲದೆ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರದ ಆಧಾರ್ ಯೋಜನೆಯನ್ನು ಸಂವಿಧಾನಾತ್ಮಕವಾಗಿ ಮಾನ್ಯವೆಂದು ಪರಿಗಣಿಸಿತ್ತು. ಪ್ಯಾನ್ ನೀಡುವಾಗ ಮತ್ತು ರಿಟರ್ನ್ಸ್ ಭರ್ತಿ ಮಾಡುವಾಗ ಆಧಾರ್ ಉಲ್ಲೇಖ ಅಗತ್ಯವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

5. ದೇಶದಲ್ಲಿ 41 ಕೋಟಿ ಪ್ಯಾನ್ ಕಾರ್ಡ್:
ಸೆಪ್ಟೆಂಬರ್ 2018 ರ ಹೊತ್ತಿಗೆ ದೇಶದಲ್ಲಿ 41 ಕೋಟಿ ಪ್ಯಾನ್ ನೀಡಲಾಗಿದೆ. ಈ ಪೈಕಿ 21 ಕೋಟಿಗೂ ಹೆಚ್ಚು ಪ್ಯಾನ್ ಖಾತೆದಾರರು ಈಗಾಗಲೇ ಆಧಾರ್‌ಗೆ ಲಿಂಕ್ ಮಾಡಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎಎ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ವಿಭಾಗದ ಪ್ರಕಾರ, 1 ಜುಲೈ 2017 ರಂದು ಪ್ಯಾನ್ ಹೊಂದಿರುವ ಮತ್ತು ಆಧಾರ್ ಪಡೆಯಲು ಅರ್ಹರಾಗಿರುವ ವ್ಯಕ್ತಿ.

Trending News