PAN-Aadhaar Linking Deadline Extended: Aadhaar-PAN ಜೋಡಣೆಯ ಗಡುವು ಮೂರು ತಿಂಗಳುಗಳವರೆಗೆ ವಿಸ್ತರಣೆ

PAN-Aadhaar Linking Deadline extended: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಸರ್ಕಾರ ಮೂರು ತಿಂಗಳು ವಿಸ್ತರಿಸಿದೆ. ಹೀಗಾಗಿ ಇನ್ಮುಂದೆ ನೀವು ಸೆಪ್ಟೆಂಬರ್ 30, 2021 ರವರೆಗೆ ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬಹುದು.

Written by - Nitin Tabib | Last Updated : Jun 25, 2021, 09:29 PM IST
  • ಆಧಾರ್-ಪ್ಯಾನ್ ಲಿಂಕಿಂಗ್ ಗಡುವು 3 ತಿಂಗಳು ವಿಸ್ತರಣೆ.
  • ಸೆಪ್ಟೆಂಬರ್ ವರೆಗೆ ವಿಸ್ತರಣೆ ಎಂದ ಕೇಂದ್ರ ಆರ್ಥಿಕ ವ್ಯವಹಾರಗಳ ರಾಜ್ಯಸಚಿವ ಅನುರಾಗ್ ಠಾಕೂರ್.
  • ಆಧಾರ್-ಪ್ಯಾನ್ ಜೋಡಣೆಯ ಗಡವು ಸೆಪ್ಟೆಂಬರ್ 30, 2021ರವರೆಗೆ ವಿಸ್ತರಣೆ
PAN-Aadhaar Linking Deadline Extended: Aadhaar-PAN ಜೋಡಣೆಯ ಗಡುವು ಮೂರು ತಿಂಗಳುಗಳವರೆಗೆ ವಿಸ್ತರಣೆ title=
Aadhaar Card-PAN Card Linking(Representational Image)

PAN-Aadhaar Linking Deadline: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೋಡಿಸುವ ಗಡುವನ್ನು ಸರ್ಕಾರ ಮತ್ತೆ ಮೂರು ತಿಂಗಳು ವಿಸ್ತರಿಸಿದೆ. ಹೀಗಾಗಿ ಇನ್ಮುಂದೆ ನೀವು ಸೆಪ್ಟೆಂಬರ್ 30, 2021 ರವರೆಗೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಬಹುದು. ಕೇಂದ್ರ ಆರ್ಥಿಕ ವ್ಯವಹಾರಗಳ (Finance Ministry) ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಪ್ರಸ್ತುತ, ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು 30 ಜೂನ್ 2021 ಆಗಿತ್ತು. ಪ್ಯಾನ್-ಆಧಾರ್ ಲಿಂಕ್ (Aadhaar-PAN Linking) ಮಾಡದಿದ್ದರೆ, ನಿಮ್ಮ ಪ್ಯಾನ್ ನಿಷ್ಕ್ರಿಯ ಅಥವಾ ಅಮಾನ್ಯವಾಗಲಿದೆ ಎನ್ನಲಾಗಿತ್ತು. ಬ್ಯಾಂಕ್ ಕೆವೈಸಿ ಮೇಲೆ ಇದರ ಪರಿಣಾಮ ಇರಲಿದ್ದು, PAN Card ನಿಷ್ಕ್ರೀಯಗೊಂಡ ಬಳಿಕ, KYC ಕೂಡ ಅಮಾನ್ಯಗೊಂಡು, ನಿಮ್ಮ ಆರ್ಥಿಕ ವಹಿವಾಟುಗಳು ಕೂಡ ನಿಂತುಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು.

ರೂ.1000 ದಂಡದ ಹೊಸ ನಿಯಮ
ಸಂಸತ್ತಿನಲ್ಲಿ ಮಂಡಿಸಲಾಗಿರುವ ಹಣಕಾಸು ಮಸೂದೆ 2021 ರ ಪ್ರಕಾರ, ಆದಾಯ ತೆರಿಗೆ ಕಾಯ್ದೆಗೆ ಮತ್ತೊಂದು ಹೊಸ ಸೆಕ್ಷನ್ ಸೇರಿಸಲಾಗಿದೆ. ಇದು ಆಧಾರ್-ಪ್ಯಾನ್ ಗೆ ಸಂಬಂಧಿದೆ. ಆದಾಯ ತೆರಿಗೆ ಕಾಯ್ದೆ 1961 (Income Tax Act 1961) ರಲ್ಲಿ ಸೇರ್ಪಡೆಗೊಂಡ ಸೆಕ್ಷನ್ 234 ಹೆಚ್‌ ಅಡಿ ಪ್ಯಾನ್-ಆಧಾರ್ ಲಿಂಕ್ ಇರದೇ ಇದ್ದಲ್ಲಿ ಹೆಚ್ಚುವರಿ 1000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ ಎನ್ನಲಾಗಿದೆ. ಆದಾಯ ತೆರಿಗೆ ಕಾಯ್ದೆಯಲ್ಲಿ ಸೇರಿಸಲಾದ ಹೊಸ ನಿಬಂಧನೆಯಡಿಯಲ್ಲಿ, ನಿಗದಿತ ಗಡುವಿನೊಳಗೆ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದಕ್ಕಾಗಿ ದಂಡದ ಮೊತ್ತವನ್ನು ಸರ್ಕಾರ ನಿರ್ಧರಿಸಲಿದೆ. ಈ ದಂಡವು 1000 ರೂಪಾಯಿಗಳನ್ನು ಮೀರಬಾರದು ಎಂದು ಹೇಳಲಾಗಿದೆ.

ನಿಷ್ಕ್ರೀಯಗೊಂಡ ಪ್ಯಾನ್ ಕಾರ್ಡ್ (PAN Card) ಬಳಸಿದರೆ 10,000 ರೂ.ದಂಡ
ಒಂದು ವೇಳೆ ಪ್ಯಾನ್-ಆಧಾರ್ ಲಿಂಕ್ ಇಲ್ಲದೆ ಇದ್ದ ಸಂದರ್ಭದಲ್ಲಿ ಅಂತಹ  ಪ್ಯಾನ್ ಕಾರ್ಡ್ ಅಮಾನ್ಯ ಎಂದು ಘೋಷಿಸಲಾಗುತ್ತದೆ. ಯಾವುದೇ ವ್ಯಕ್ತಿಯು ಯಾವುದೇ ಹಣಕಾಸಿನ ವಹಿವಾಟಿನಲ್ಲಿ ಅಮಾನ್ಯ ಪ್ಯಾನ್ ಕಾರ್ಡ್ ಬಳಸಿದರೆ, ಆತನ ಮೇಲೆ 10, 000 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ರದ್ದಾದ ಪ್ಯಾನ್ ಕಾರ್ಡ್ ಅನ್ನು ಎರಡನೇ ಬಾರಿಗೆ ಬಳಸಿದರೆ, ದಂಡದ ಮೊತ್ತವೂ ಮತ್ತೆ ಹೆಚ್ಚಾಗಲಿದೆ. ಈ ದಂಡವನ್ನು ನಿಗದಿಪಡಿಸುವ ಹಕ್ಕು ಆದಾಯ ತೆರಿಗೆ (Income Tax Department) ಅಧಿಕಾರಿಗೆ ಇರಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272 ಬಿ ಅಡಿಯಲ್ಲಿ 10,000 ರೂ.ಗಳ ದಂಡ ವಿಧಿಸಬಹುದು.

ಇದನ್ನೂ ಓದಿ- Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ

PAN-Aadhaar ಲಿಂಕ್ ಏಕೆ ಅವಶ್ಯಕ
ಸೆಕ್ಷನ್ 139 ಎಎ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕನು ಆದಾಯ ತೆರಿಗೆ ರಿಟರ್ನ್ (Income Tax Return) ಮತ್ತು ಪ್ಯಾನ್ ಕಾರ್ಡ್ ಮಾಡಲು ಅರ್ಜಿಯಲ್ಲಿ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಇದೇ ವೇಳೆ, ಜುಲೈ 1, 2017 ರವರೆಗೆ ಪ್ಯಾನ್ ಹಂಚಿಕೆ ಪಡೆದವರಿಗೆ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವವರಿಗೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ.

ಇದನ್ನೂ ಓದಿ-Delta+ ರೂಪಾಂತರಿಯಿಂದ ಮಹಾರಾಷ್ಟ್ರದಲ್ಲಿ ಮೊದಲ ಸಾವು, ದೃಢಪಡಿಸಿದ ರಾಜ್ಯ ಆರೋಗ್ಯ ಸಚಿವ

PAN-Aadhaar ಲಿಂಕ್ ಮಾಡುವುದು ಹೇಗೆ?
>> ಇದಕ್ಕಾಗಿ ಮೊದಲು ಆದಾಯ ತೆರಿಗೆ ಇಲಾಖೆಯ www.incometax.gov.in.ಗೆ ಭೇಟಿ ನೀಡಿ.
>> ಬಳಿಕ Our Services ನಲ್ಲಿ ನೀಡಲಾಗಿರುವ Link Aadhaar ಮೇಲೆ ಕ್ಲಿಕ್ಕಿಸಬೇಕು.
>> ಅಲ್ಲಿ ನೀವು ನಿಮ್ಮ PAN ಹಾಗೂ Aadhaar ಸಂಖ್ಯೆಯನ್ನು ನಮೂದಿಸಬೇಕು. 
>> ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಮೇಲೆ ನಿಮ್ಮ ಹೆಸರು ಒಂದೇ ಆಗಿರಬೇಕು.
>> ಒಂದು ವೇಳೆ ನಿಮ್ಮ ಆದಾರ್ ಕಾರ್ಡ್ ನಲ್ಲಿ ಜನನ ವರ್ಷವಿದ್ದರೆ, ಕೆಳಗೆ ನೀಡಲಾಗಿರುವ ಒಂದು ಚಿಕ್ಕ ಬಾಕ್ಸ್ ನಲ್ಲಿ ಕ್ಲಿಕ್ಕಿಸಿ.
>> ಇದಾದ ಬಳಿಕ 'Link Aadhaar' ಮೇಲೆ ಕ್ಲಿಕ್ಕಿಸಿ. ಇದಾದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ.
>> ಈ ರೀತಿ ನಿಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಗಳು ಲಿಂಕ್ ಆಗಲಿವೆ.

ಇದನ್ನೂ ಓದಿ-ಜುಲೈ ಅಲ್ಲ ಅಕ್ಟೋಬರನಿಂದ ಜಾರಿಯಾಗಲಿದೆ New Wage Code! ವೇತನ, PFಗೆ ಸಂಬಂಧಿಸಿದ Big Update

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News