ಭಾರತ ದಾಳಿ ನಡೆಸುವ ಭಯದಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ: ಪಾಕ್ ಸಂಸತ್ತಿನಲ್ಲಿ ಸತ್ಯ ಬಿಚ್ಚಿಟ್ಟ ಸಂಸದ

ಭಾರತ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಆತಂಕದಿಂದ ವಿಂಗ್  ಕಮಾಂಡರ್ ಅಭಿನಂದನ್ ವರ್ಧಮಾನ್ (Abhinandan Vardhaman) ಅವರನ್ನು ಪಾಕಿಸ್ತಾನ (Pakisthan) ಭಾರತಕ್ಕೆ ಹಸ್ತಾಂತರಿಸಿತ್ತು ಎಂಬ ಸತ್ಯವನ್ನು ಪಾಕಿಸ್ತಾನ ಮುಸ್ಲಿಂ ಲೀಗ್ (PML- N) ನಾಯಕ ಆಯಾಜ್ ಸಾಧಿಕ್ ಹೇಳಿದ್ದಾರೆ.

Last Updated : Oct 29, 2020, 12:54 PM IST
ಭಾರತ ದಾಳಿ ನಡೆಸುವ ಭಯದಿಂದ ಅಭಿನಂದನ್ ವರ್ಧಮಾನ್ ಬಿಡುಗಡೆ: ಪಾಕ್ ಸಂಸತ್ತಿನಲ್ಲಿ ಸತ್ಯ ಬಿಚ್ಚಿಟ್ಟ ಸಂಸದ title=

ನವದೆಹಲಿ: ಭಾರತ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಆತಂಕದಿಂದ ವಿಂಗ್  ಕಮಾಂಡರ್ ಅಭಿನಂದನ್ ವರ್ಧಮಾನ್ (Abhinandan Vardhaman) ಅವರನ್ನು ಪಾಕಿಸ್ತಾನ (Pakisthan) ಭಾರತಕ್ಕೆ ಹಸ್ತಾಂತರಿಸಿತ್ತು ಎಂಬ ಸತ್ಯವನ್ನು ಪಾಕಿಸ್ತಾನ ಮುಸ್ಲಿಂ ಲೀಗ್ (PML- N) ನಾಯಕ ಆಯಾಜ್ ಸಾಧಿಕ್ ಹೇಳಿದ್ದಾರೆ.

ಬುಧವಾರ ಪಾಕ್ ಸಂಸತ್ತಿನಲ್ಲಿ 2019ರ  ಘಟನೆಯನ್ನು ಈ ಸಂಸದ ಆಯಾಜ್ ನೆನಪಿಸಿಕೊಂಡಿದ್ದಾರೆ. ಆಯಾಜ್ ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಅಂದು ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ (Shaa MehamoodQureshi) ಸಂಸದೀಯ ನಾಯಕರ ಸಭೆ ನಡೆಸಿದ್ದರು. ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸದಿದ್ದಲ್ಲಿ ರಾತ್ರಿ 9 ಗಂಟೆಗೆ ಭಾರತ ಪಾಕಿಸ್ತಾನದ ಮೇಲೆ ದಾಳಿ(Attack) ನಡೆಸುವ ಸಂಭವವಿದೆ ಎಂದು ಈ ಸಭೆಯಲ್ಲಿ ಅವರು ಆತಂಕ ವ್ಯಕ್ತಪಡಿಸಿದ್ದರು.ಈ ಸಭೆಗೆ ಹಾಜರಾಗಲು ಇಮ್ರಾನ್ ಖಾನ್ ನಿರಾಕರಿಸಿದ್ದರು. ಆದರೆ ಸಭೆಗೆ ಮಿಲಿಟರಿ ಚೀಫ್ ಜನರಲ್ ಬಾಜ್ವಾ ಹಾಜರಾಗಿದ್ದರು.ಬಾಜ್ವಾ ಸಭೆ ನಡೆಯುತ್ತಿರುವ ಕೋಣೆ ಪ್ರವೇಶಿಸುತ್ತಿರುವಂತೆ ಅವರ ಕಾಲುಗಳು ನಡುಗುತ್ತಿತ್ತು.ಅವರ ಮಾತುಗಳು ತೊದಲುತ್ತಿತ್ತು ಎಂದು ಸಂಸದ ಆಯಾಜ್ ಹೇಳಿದ್ದಾರೆ.

ಪಾಕ್ ವಶದಲ್ಲಿರುವ ಭಾರತೀಯ ಪೈಲೆಟ್ ಅಭಿನಂದನ್ ಯಾರು?

ಈ ಸಭೆಯಲ್ಲಿ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದೇ ಹೋದರೆ ಭಾರತ ರಾತ್ರಿ  9 ಗಂಟೆಗೆ ಪಾಕ್ ಮೇಲೆ ದಾಳಿ ನಡೆಸಲಿದೆ ಎಂದು ಖುರೇಷಿ ಹೇಳಿದ್ದರು.ಈ ಬಗ್ಗೆ ಪಾಕ್ ಮಾಧ್ಯಮದ ವರದಿಯನ್ನು ಖುರೇಷಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದಾದ ಬಳಿಕ ಸಭೆಯಲ್ಲಿ ಚರ್ಚೆ ನಡೆಸಿ ಅಭಿನಂದನ್ ಅವರು ಭಾರತಕ್ಕೆ ಹಸ್ತಾಂತರಿಸಲಾಯಿತು ಎಂದು ಆಯಾಜ್ ಹೇಳಿದ್ದಾರೆ.

ಭಾರತದ ವಾಯುಪ್ರದೇಶದ ಒಳನುಗ್ಗಿದ್ದ ಪಾಕ್ ನ ಎಫ್ -16 (F16)ಯುದ್ಧ ವಿಮಾನವನ್ನು ಬೆನ್ನತ್ತಿದ್ದ ಅಭಿನಂದನ್ ಅವರ ಮಿಗ್ 21 (MIG 21) ಯುದ್ಧ ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸಲಾಗಿತ್ತು. ಈ ಸಂದ್ರಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಭಿನಂದನ್ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿತ್ತು. ಇದಾದ ನಂತರ ಭಯ ದೇಶಗಳ ನಡುವಿನ ಮಾತುಕತೆ ನಂತರ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

Trending News