ದೆಹಲಿಯ ಮಾಲಿನ್ಯ ಕುರಿತಂತೆ ಕೇಜ್ರಿವಾಲ್ ಅನ್ನು ಸಮರ್ಥಿಸಿಕೊಂಡ ಪಾಕಿಸ್ತಾನ

     

Last Updated : Nov 10, 2017, 10:59 AM IST
ದೆಹಲಿಯ ಮಾಲಿನ್ಯ ಕುರಿತಂತೆ ಕೇಜ್ರಿವಾಲ್ ಅನ್ನು ಸಮರ್ಥಿಸಿಕೊಂಡ ಪಾಕಿಸ್ತಾನ title=

ನವದೆಹಲಿ: "ವಾತಾವರಣದ ಅಪಾಯಗಳಿಂದ ಜನರನ್ನು ರಕ್ಷಿಸಲು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ವೇಗವಾಗಿ ಕೆಲಸ ಮಾಡೋಣ" ಎಂಬ ಅರವಿಂದ್ ಕೇಜ್ರಿವಾಲ್ ಟ್ವೀಟ್ಗೆ ಪಂಜಾಬ್(ಪಾಕಿಸ್ತಾನ್) ಸಹಕರಿಸಿದೆ. 

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಸಮಯದಲ್ಲಿ ಬೆಳೆಗಳ ಅವಶೇಷಗಳಿಗೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಅಧಿಕಗೊಳ್ಳುವುದಕ್ಕೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ. ಇದನ್ನು ಸಹಕರಿಸಿರುವ  ಪಂಜಾಬ್(ಪಾಕಿಸ್ತಾನ್) ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸಿಎಂ ಅನ್ನು ಆಗ್ರಹಿಸಿದೆ.

 

ಕೇಜ್ರಿವಾಲ್, ಹರಿಯಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಾದ ಮನೋಹರ್ ಲಾಲ್ ಕಟ್ಟರ್ ಮತ್ತು ಅಮರಿಂದರ್ ಸಿಂಗ್ ಇಬ್ಬರಿಗೂ ಪತ್ರವೊಂದನ್ನು ಬರೆಯುವ ಮೂಲಕ ಈ ರೀತಿ ಹೇಳಿದ್ದಾರೆ- "ದೆಹಲಿ ಅಕ್ಷರಶಹ ಒಂದು ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ ಮತ್ತು ಈ ವಾತಾವರಣದಿಂದ ಮಕ್ಕಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಶಾಲೆಗಳಿಗೆ ರಜೆ ಘೋಷಿಸಬೇಕಾಯಿತು.  ಪಂಜಾಬ್ ಮತ್ತು ಹರಿಯಾಣದಲ್ಲಿ ಈ ಸಮಯದಲ್ಲಿ ಬೆಳೆಗಳ ಅವಶೇಷಗಳಿಗೆ ಬೆಂಕಿ ಹಚ್ಚುವುದು ದೆಹಲಿಯ ವಾಯುಮಾಲಿನ್ಯಕ್ಕೆ ಇರುವ ಮುಖ್ಯ ಕಾರಣಗಳಲ್ಲಿ ಒಂದಾಗಿದೆ" ಎಂದು ತಿಳಿಸಿದ್ದಾರೆ. 

ರೈತರು ಆರ್ಥಿಕವಾಗಿ ಶಕ್ತರಾಗದ ಕಾರಣ ಅವಶೇಷಗಳಿಗೆ ಬೆಂಕಿ ಹಚ್ಚುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ. ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಹರಿಯಾಣ ಮತ್ತು ಪಂಜಾಬ್ ಸರ್ಕಾರಗಳೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದೂ ಸಹ ಕೇಜ್ರಿವಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Trending News